- Kannada News Photo gallery Cricket photos Living in Pakistan is like living in jail I was mentally tortured says Simon Doull Sports News in Kannada
Simon Doull: ಪಾಕಿಸ್ತಾನದಲ್ಲಿರುವುದು ಜೈಲಿನಲ್ಲಿದ್ದಂತೆ, ಹೊರಗಡೆ ಬರುವುದಕ್ಕೂ ಹೆದರುತ್ತಿದ್ದೆ: ಸೈಮನ್ ಡುಲ್ ಶಾಕಿಂಗ್ ಹೇಳಿಕೆ
IPL vs PSL: ಸೈಮನ್ ಡುಲ್ ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಬಗ್ಗೆ ಮಾತನಾಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
Updated on:Apr 14, 2023 | 11:15 AM

ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಯಾವಾಗ ಪಾಕಿಸ್ತಾನ ಪ್ರೀಮಿಯರ್ ಲೀಗ್ ಪ್ರಾರಂಭವಾಯಿತೊ ಇವೆರಡರ ನಡುವೆ ಹೋಲಿಕೆ ಮಾಡಿ ಅನೇಕ ಕ್ರಿಕೆಟ್ ಪಂಡಿತರು ಮಾತನಾಡುತ್ತಲೇ ಇದ್ದಾರೆ. ಕೆಲವು ಪಿಎಸ್ಎಲ್ ಅನ್ನು ಹಾಡಿಹೊಗಳಿದರೆ ಇನ್ನೂ ಕೆಲ ಕ್ರಿಕೆಟಿಗರು ಅಲ್ಲಿನ ಕರಾಳ ಘಟನೆಗಳನ್ನು ಬಯಲು ಮಾಡುತ್ತಾರೆ.

ಇದೀಗ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಸೈಮನ್ ಡುಲ್ ಪಾಕಿಸ್ತಾನ ಪ್ರೀಮಿಯರ್ ಲೀಗ್ ಸಂದರ್ಭ ತಾನು ಎದುರಿಸಿದ ಕರಾಳ ದಿನವನ್ನು ನೆನಪಿಸಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ತಾವು ಎದುರಿಸಿದ ಮಾನಸಿಕ ಚಿತ್ರಹಿಂಸೆಯ ಬಗ್ಗೆ ಮಾತನಾಡಿದ್ದಾರೆ.

ಸೈಮನ್ ಡುಲ್ ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಬಗ್ಗೆ ಮಾತನಾಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಪಾಕಿಸ್ತಾನ ಸೂಪರ್ ಲೀಗ್ ಸಂದರ್ಭದಲ್ಲಿ ಬಾಬರ್ ಅಜಂ ನಿಧಾನಗತಿಯ ಬ್ಯಾಟಿಂಗ್ ಅನ್ನು ಟೀಕಿಸುವ ಮೂಲಕ ಸುದ್ದಿ ಮಾಡಿದ್ದರು.

ಪಿಎಸ್ಎಲ್ ಸಂದರ್ಭ ಸೈಮನ್ ಡುಲ್ ಲೈವ್ನಲ್ಲೇ ಬಾಬರ್ ಸ್ಟ್ರೈಕ್‌ರೇಟ್ ಬಗ್ಗೆ ಹೇಳಿಕೆ ನೀಡಿದ್ದರು. ಇದರಿಂದ ಅವರು ಪಾಕ್ನಲ್ಲಿ ಹೊರಗಡೆ ಬರುವುದಕ್ಕೂ ಹೆದರುತ್ತಿದರಂತೆ. ಬಾಬರ್ ಅಜಂ ಬೆಂಬಲಿಗರು ನನಗೆ ಬೆದರಿಕೆ ಹಾಕಿದ್ದರು. ಮಾನಸಿಕ ಹಿಂಸೆ ಕೊಟ್ಟಿದ್ದರು. ಕೆಲ ಸಮಯ ಕನಿಷ್ಠ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೊನೆಗೂ ಹೇಗೋ ಅಲ್ಲಿಂದ ಪಾರಾಗಿ ಬಂದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ವಾಸಿಸುವುದು ಜೈಲಿನಲ್ಲಿ ವಾಸಿಸುವಂತಿದೆ. ಬಾಬರ್ ಅಭಿಮಾನಿಗಳು ನನಗಾಗಿ ಕಾಯುತ್ತಿದ್ದರಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅನೇಕ ದಿನ ಆಹಾರವಿಲ್ಲದೆಯೇ ಹೋಟೆಲ್‌ನಲ್ಲಿ ಇದ್ದೆ. ಆದರೆ ದೇವರ ದಯೆಯಿಂದ ನಾನು ಹೇಗಾದರೂ ತಪ್ಪಿಸಿಕೊಂಡು ಬರುವಂತಾಯಿತು - ಸೈಮನ್ ಡುಲ್.

ನನ್ನ ಪ್ರತಿ ಹೆಜ್ಜೆಯನ್ನೂ ಬಾಬರ್ ಫ್ಯಾನ್ಸ್ ಅನುಸರಿಸುತ್ತಿದ್ದರು. ಹೊರಗೆ ಬರಲಿ ಎಂದು ಕಾಯುತ್ತಿದ್ದರು. ತುಂಬಾ ಕಿರಿ ಕಿರಿ ಆಗಿತ್ತು. ಪಾಕಿಸ್ತಾನದಲ್ಲಿ ಇರುವುದು ಅದೊಂದು ನರಕಯಾತನೆಯೇ ಸರಿ ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
Published On - 11:15 am, Fri, 14 April 23



















