ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಗೆರೆ ದಾಟಿದ ಭುವನೇಶ್ವರ್ ಕುಮಾರ್..!

Updated on: Oct 22, 2026 | 4:19 PM

ಭಾರತ-ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ 1430 ದಿನಗಳ ನಂತರ ಕಂಬ್ಯಾಕ್ ಮಾಡಿದರು. ತಮ್ಮ ಮೊದಲ ನೋ-ಬಾಲ್ ಎಸೆದರೂ, ವೇಗಿಗಳ ಪೈಕಿ ಅತಿ ಹೆಚ್ಚು ಓವರ್‌ಗಳನ್ನು ನೋ-ಬಾಲ್ ಇಲ್ಲದೆ ಎಸೆದ ದಾಖಲೆಯನ್ನು ಉಳಿಸಿಕೊಂಡರು. ಜೊತೆಗೆ, ಟಿ20 ಪವರ್‌ಪ್ಲೇನಲ್ಲಿ 680 ಡಾಟ್ ಬಾಲ್‌ಗಳೊಂದಿಗೆ ಹೊಸ ದಾಖಲೆ ಬರೆದಿದ್ದಾರೆ.

1 / 5
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್​ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಈ ಮೂಲಕ ಬರೋಬ್ಬರಿ 1430 ದಿನಗಳ ಬಳಿಕ ಭಾರತ ಪರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಭುವಿ ತಮ್ಮ ಮೊದಲ ಓವರ್‌ನಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟು ಉತ್ತಮ ಆರಂಭ ನೀಡಿದ್ದರು(BCCI x).

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್​ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಈ ಮೂಲಕ ಬರೋಬ್ಬರಿ 1430 ದಿನಗಳ ಬಳಿಕ ಭಾರತ ಪರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಭುವಿ ತಮ್ಮ ಮೊದಲ ಓವರ್‌ನಲ್ಲಿ ಕೇವಲ 4 ರನ್ ಬಿಟ್ಟುಕೊಟ್ಟು ಉತ್ತಮ ಆರಂಭ ನೀಡಿದ್ದರು(BCCI x).

2 / 5

ಆದರೆ, ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಒಂದು ತಪ್ಪು ಮಾಡಿದರು. ಭುವಿ ಮಾಡಿದ್ದು ಅಂತಿಂಥಾ ತಪ್ಪಲ್ಲ. ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಭುವನೇಶ್ವರ್ ಮೊದಲ ಬಾರಿಗೆ ಮಾಡಿದ ತಪ್ಪು ಇದಾಗಿತ್ತು. ವಾಸ್ತವವಾಗಿ ಶಿಸ್ತುಬದ್ಧ ದಾಳಿಗೆ ಹೆಸರುವಾಸಿಯಾಗಿರುವ ಭುವನೇಶ್ವರ್ ಕುಮಾರ್, ಈ ಪಂದ್ಯದಲ್ಲಿ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನೋ- ಬಾಲ್ ಎಸೆದ ಅನಗತ್ಯ ದಾಖಲೆ ಬರೆದರು(BCCI x).

3 / 5

ಬರೋಬ್ಬರಿ 299.3 ಓವರ್‌ಗಳನ್ನು ಬೌಲಿಂಗ್ ಮಾಡಿದ ಬಳಿಕ ಭುವನೇಶ್ವರ್ ಮೊದಲ ನೋ-ಬಾಲ್ ಎಸೆದಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ಅವರ ದಾಖಲೆಯನ್ನು ಮುರಿಯುವ ಅವಕಾಶವನ್ನು ಭುವಿ ಕಳೆದುಕೊಂಡರು. ಆದಿಲ್ ರಶೀದ್ 320.2 ಓವರ್‌ಗಳ ಬಳಿಕ ತಮ್ಮ ಮೊದಲ ನೋ-ಬಾಲ್ ಎಸೆದಿದ್ದರು. ಈ ಮೂಲಕ ಅತ್ಯಧಿಕ ಎಸೆತಗಳ ಬಳಿಕ ನೋ ಬಾಲ್ ಎಸೆದ ಬೌಲರ್ ಎಂಬ ದಾಖಲೆ ರಶೀದ್ ಹೆಸರಿನಲ್ಲಿದೆ(BCCI x).

4 / 5

ಆದಾಗ್ಯೂ ವೇಗದ ಬೌಲರ್‌ಗಳ ಪೈಕಿ ನೋ-ಬಾಲ್ ಇಲ್ಲದೆ ಅತಿ ಹೆಚ್ಚು ಓವರ್‌ಗಳನ್ನು ಎಸೆದ ದಾಖಲೆಯಲ್ಲಿ ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಭುವಿ ನೋ-ಬಾಲ್ ಎಸೆದ ಬಳಿಕ ನ್ಯೂಜಿಲೆಂಡ್‌ಗೆ ಫ್ರೀ ಹಿಟ್ ಸಿಕ್ಕಿತು. ಆ ಎಸೆತದಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ಬೌಂಡರಿ ಬಾರಿಸಿದರು. ಇದರಿಂದ ಭುವನೇಶ್ವರ್ ಅವರ ಎರಡನೇ ಓವರ್‌ನಲ್ಲಿ ಒಟ್ಟು 17 ರನ್‌ಗಳು ಬಂದವು. ಉತ್ತಮವಾಗಿ ಆರಂಭಿಸಿದ್ದ ಭುವಿಗೆ ಈ ಓವರ್ ಸ್ವಲ್ಪ ದುಬಾರಿಯಾಯಿತು(BCCI x).

5 / 5

ನೋ-ಬಾಲ್ ದಾಖಲೆಯನ್ನು ಕಳೆದುಕೊಂಡರೂ, ಭುವನೇಶ್ವರ್ ಕುಮಾರ್ ಮತ್ತೊಂದು ಮಹತ್ವದ ದಾಖಲೆ ಮಾಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್ ಎಂಬ ದಾಖಲೆ ಭುವನೇಶ್ವರ್ ಕುಮಾರ್ ಪಾಲಾಗಿದೆ. ಟಿ20 ಅಂತರರಾಷ್ಟ್ರೀಯ ಪವರ್‌ಪ್ಲೇನಲ್ಲಿ ಭುವಿ ಇದುವರೆಗೆ 680 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ(BCCI x).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us