Team India: ಹಾಂಕಾಂಗ್ ಟು ಲಂಕಾ; ಏಕದಿನ ಮಾದರಿಯಲ್ಲಿ ಭಾರತದ ದಾಳಿಗೆ ನಲುಗಿದ ದೇಶಗಳಿವು!

| Updated By: ಪೃಥ್ವಿಶಂಕರ

Updated on: Jan 16, 2023 | 12:03 PM

Team India: ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದ ಭಾರತ, ತಿರುವನಂತಪುರಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 317 ರನ್‌ಗಳ ಜಯ ಸಾಧಿಸುವುದರೊಂದಿಗೆ ದೊಡ್ಡ ಅಂತರದ ಗೆಲುವು ಪಡೆದ ದಾಖಲೆ ಕೂಡ ಬರೆದಿದೆ.

1 / 6
ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾವನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ. ವಿರಾಟ್ ಕೊಹ್ಲಿ ಅವರ ಅಜೇಯ ಇನ್ನಿಂಗ್ಸ್ 166 ರನ್ ಮತ್ತು ಶುಭಮನ್ ಗಿಲ್ ಶತಕದ ಜೊತೆಗೆ ಸಿರಾಜ್ ಅವರ ಮಾರಕ ಬೌಲಿಂಗ್ ನಿಂದಾಗಿ ಟೀಂ ಇಂಡಿಯಾ 317 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿದೆ.

2 / 6
ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದ ಭಾರತ, ತಿರುವನಂತಪುರಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 317 ರನ್‌ಗಳ ಜಯ ಸಾಧಿಸುವುದರೊಂದಿಗೆ ದೊಡ್ಡ ಅಂತರದ ಗೆಲುವು ಪಡೆದ ದಾಖಲೆ ಕೂಡ ಬರೆದಿದೆ. ಈ ಹಿಂದೆಯೂ ಭಾರತ ಹಲವು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದ ದಾಖಲೆ ಕೂಡ ಬರೆದಿದ್ದು, ಅವುಗಳ ವಿವರ ಇಲ್ಲಿದೆ.

3 / 6
ಈ ಸರಣಿಗೂ ಮುನ್ನ ಬಾಂಗ್ಲಾ ಪ್ರವಾಸ ಮಾಡಿದ್ದ ಭಾರತ ಅಲ್ಲೂ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಿತ್ತು. ಚಿತ್ತಗಾಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಸಾನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ ಶತಕದಿಂದಾಗಿ ಭಾರತ ಈ ಪಂದ್ಯದಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಬಾಂಗ್ಲಾ 182 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಈ ಪಂದ್ಯದಲ್ಲಿ 227 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.

4 / 6
2018 ರಂದು ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 378 ರನ್ ಗುರಿ ನೀಡಿದ್ದ ಭಾರತ, ಕೆರಿಬಿಯನ್ನರನ್ನು 154 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಮೂಲಕ 224 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 137 ಎಸೆತಗಳಲ್ಲಿ 162 ರನ್ ಗಳಿಸಿದರೆ, ಅಂಬಾಟಿ ರಾಯಡು 81 ಎಸೆತಗಳಲ್ಲಿ 100 ರನ್ ಸಿಡಿಸಿ ಮಿಂಚಿದರು.

5 / 6
2007 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಬರ್ಮುಡಾ ವಿರುದ್ಧ ಭಾರತ 257 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವೀರೇಂದ್ರ ಸೆವಾಗ್ 87 ಎಸೆತಗಳಲ್ಲಿ 114 ರನ್‌ಗಳ ವಿಧ್ವಂಸಕ ಇನ್ನಿಂಗ್ಸ್‌ ಆಡಿದ್ದರು. ಅಲ್ಲದೆ ಅದು ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯ ಎಂಬುದು ವಿಶೇಷವಾಗಿತ್ತು.

6 / 6
2008 ಏಷ್ಯಾಕಪ್​ನಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ 256 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ಎಂಎಸ್ ಧೋನಿ (ಔಟಾಗದೆ 109) ಮತ್ತು ಸುರೇಶ್ ರೈನಾ (101) ಅವರ ಶತಕದ ನೆರವಿನಿಂದ 374 ರನ್ ಗಳಿಸಿತ್ತು. ಉತ್ತರವಾಗಿ ಹಾಂಕಾಂಗ್ 118 ರನ್‌ಗಳಿಗೆ ಆಲೌಟ್ ಆಯಿತು.

Published On - 12:02 pm, Mon, 16 January 23