ವಿಶ್ವಕಪ್‌ ಇತಿಹಾಸದಲ್ಲಿ 7 ಬಾರಿ ಮುಖಾಮುಖಿ; ಭಾರತ ಗೆದ್ದಿದ್ದೆಷ್ಟು? ಪಾಕಿಸ್ತಾನ ಸೋತಿದ್ದೆಷ್ಟು?

|

Updated on: Oct 13, 2023 | 10:02 AM

IND vs PAK Head to Head: ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 14 ರಂದು ಮುಖಾಮುಖಿಯಾಗಲಿವೆ. ಈ ಮೆಗಾ ಈವೆಂಟ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೆ 7 ಬಾರಿ ಮುಖಾಮುಖಿಯಾಗಿದ್ದು, ಯಾವ ಆವೃತ್ತಿಯಲ್ಲಿ ಯಾವ ತಂಡ ಜಯ ಸಾಧಿಸಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

1 / 8
ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 14 ರಂದು ಮುಖಾಮುಖಿಯಾಗಲಿವೆ. ಈ ಮೆಗಾ ಈವೆಂಟ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೆ 7 ಬಾರಿ ಮುಖಾಮುಖಿಯಾಗಿದ್ದು, ಯಾವ ಆವೃತ್ತಿಯಲ್ಲಿ ಯಾವ ತಂಡ ಜಯ ಸಾಧಿಸಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

2 / 8
1992 ರ ವಿಶ್ವಕಪ್: ಸಿಡ್ನಿಯಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಮೊಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಪಾಕ್ ತಂಡವನ್ನು ಮಣಿಸಿತ್ತು. ಆ ಪಂದ್ಯವನ್ನು ಭಾರತ 43 ರನ್‌ಗಳಿಂದ ಗೆದ್ದಿತ್ತು.

3 / 8
1996ರ ವಿಶ್ವಕಪ್‌: ಮಾರ್ಚ್ 9 ರಂದು ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 29 ರನ್‌ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ನವಜೋತ್ ಸಿಂಗ್ ಸಿಧು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರೆ, ಬೌಲಿಂಗ್​ನಲ್ಲಿ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಗೆಲುವಿನ ಪ್ರದರ್ಶನ ನೀಡಿದ್ದರು.

4 / 8
1999ರ ವಿಶ್ವಕಪ್‌: ಮ್ಯಾಂಚೆಸ್ಟರ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ 47 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಭಾರತದ ಒರ ಸೌರವ್ ಗಂಗೂಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ವೆಂಕಟೇಶ್ ಪ್ರಸಾದ್ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ್ದರು.

5 / 8
2003ರ ವಿಶ್ವಕಪ್‌: ಸೆಂಚುರಿಯನ್​ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 29 ರನ್‌ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 98 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ ಆಡಿದ್ದರು.

6 / 8
2011ರ ವಿಶ್ವಕಪ್‌: ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ 29 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲೂ ಅಬ್ಬರಿಸಿದ ಸಚಿನ್ ಬಿರುಸಿನ 85 ರನ್ ಸಿಡಿಸಿದರೆ, ಸುರೇಶ್ ರೈನಾ ಅಜೇಯ 36 ರನ್ ಬಾರಿಸಿದ್ದರು.

7 / 8
2015ರ ವಿಶ್ವಕಪ್‌: ಅಡಿಲೇಡ್‌ನಲ್ಲಿ ನಡೆದ ಈ ವಿಶ್ವಕಪ್‌ ಪಂದ್ಯದಲ್ಲಿ ಭಾರತ 300 ರನ್ ಕಲೆಹಾಕಿತು. ಈ ಮೆಗಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 224 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತ 76 ರನ್‌ಗಳ ಭರ್ಜರಿ ಜಯ ಸಾಧಿಸಿತು.

8 / 8
2019 ರ ವಿಶ್ವಕಪ್‌: ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಡಕ್ವರ್ತ್​ ಲೂಯಿಸ್ ನಿಯಮದಡಿಯಲ್ಲಿ ಪಾಕ್ ವಿರುದ್ಧ 89 ರನ್​ಗಳಿಂದ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಿದ್ದರು.