ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಸಿಎಸ್‌ಕೆ
MS Dhoni: ಒಂದು ವೇಳೆ ಧೋನಿ ಐಪಿಎಲ್‌ನ ಮುಂದಿನ ಸೀಸನ್‌ನಲ್ಲಿ ಆಡಿದರೆ ಖಂಡಿತವಾಗಿಯೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ. ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವನ್ನು ಬಿಸಿಸಿಐ ಜಾರಿಗೆ ತಂದರೂ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ಸಿಎಸ್‌ಕೆ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.
1 / 6
2025 ರ ಐಪಿಎಲ್ ಆರಂಭಕ್ಕೆ ಇನ್ನಷ್ಟು ಸಾಕಷ್ಟು ದಿನಗಳಿವೆ. ಅದಕ್ಕೂ ಮುನ್ನ ಮೆಗಾ ಹರಾಜು ನಡೆಯಬೇಕಿದೆ. ಈ ಹರಾಜಿನಲ್ಲಿ ಯಾವ ಆಟಗಾರರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ. ಇದೆಲ್ಲದರ ನಡುವೆ ಅಭಿಮಾನಿಗಳ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಆ ತಂಡದಲ್ಲಿಯೇ ಉಳಿಯುತ್ತಾರಾ ಅಥವಾ ಇಲ್ಲವಾ ಎಂಬುದು.
2 / 6
ಇದಕ್ಕೆ ಕಾರಣವೂ ಇದ್ದು, ಪ್ರಸ್ತುತ ಐಪಿಎಲ್ ನಿಯಮದ ಪ್ರಕಾರ ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಮ್ಮ ತಂಡದಲ್ಲಿ ಉಳಿಸಿಕೊಂಡು ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಬೇಕು. ಹೀಗಾಗಿ ನಿವೃತ್ತಿಯ ಅಂಚಿನಲ್ಲಿರುವ ಧೋನಿಯನ್ನು ಸಿಎಸಕ್ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ.
3 / 6
ಕ್ರಿಕ್‌ಬಜ್ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಂಎಸ್ ಧೋನಿಯನ್ನು ಉಳಿಸಿಕೊಳ್ಳಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ, ಎಂಎಸ್ ಧೋನಿ ಮುಂದಿನ ಸೀಸನ್‌ನಲ್ಲಿ ಆಡಲು ನಿರ್ಧರಿಸಿದರೆ, ಐಪಿಎಲ್ 2025 ಕ್ಕೆ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳುವಂತೆ ಆಡಳಿತ ಮಂಡಳಿ ನಿಯಮ ರೂಪಿಸಿದರೆ ಆಗಲೂ ಸಹ ಸಿಎಸ್‌ಕೆ ಧೋನಿಯನ್ನು ಉಳಿಸಿಕೊಳ್ಳುತ್ತದೆ.
4 / 6
ಸಿಎಸ್‌ಕೆ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು. ಮೇಲೆ ಹೇಳಿದಂತೆ ಒಂದು ವೇಳೆ ಧೋನಿ ಐಪಿಎಲ್‌ನ ಮುಂದಿನ ಸೀಸನ್‌ನಲ್ಲಿ ಆಡಿದರೆ ಖಂಡಿತವಾಗಿಯೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ. ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವನ್ನು ಬಿಸಿಸಿಐ ಜಾರಿಗೆ ತಂದರೂ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ಸಿಎಸ್‌ಕೆ ಅಧಿಕಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.
5 / 6
ಈ ನಡುವೆ 2025 ರ ಐಪಿಎಲ್ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ನಿಯಮದ ಬಗ್ಗೆ ಸಂದಿಗ್ಧತೆ ಎದುರಾಗಿದೆ. ಬಿಸಿಸಿಐ ಉಳಿಸಿಕೊಳ್ಳುವ ನಿಯಮದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವರದಿಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಧಾರಣ ನಿಯಮಗಳನ್ನು ಬಿಸಿಸಿಐ ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಐಪಿಎಲ್ ಅಧಿಕಾರಿಗಳು ಧಾರಣ ನಿಯಮಗಳನ್ನು ಪ್ರಕಟಿಸಲು ಇನ್ನೂ ಕನಿಷ್ಠ ಪಕ್ಷ 10 ದಿನಗಳು ಅಥವಾ ಎರಡು ವಾರಗಳನ್ನು ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ.
6 / 6
ಮತ್ತೊಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಬಹುದು ಎಂಬ ಸುದ್ದಿಯೂ ಹೊರಬಿದ್ದಿದೆ. ವಾಸ್ತವವಾಗಿ, ಈ ಹಿಂದೆ ಐಪಿಎಲ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿವೃತ್ತರಾದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಬೇಕು ಎಂಬ ನಿಯಮವಿತ್ತು. ಈ ನಿಯಮವನ್ನು 2021 ರ ನಂತರ ರದ್ದುಗೊಳಿಸಲಾಯಿತು, ಆದರೆ ಈ ನಿಯಮವನ್ನು ಮತ್ತೊಮ್ಮೆ ಪ್ರಾರಂಭಿಸಬಹುದು ಎಂದು ನಂಬಲಾಗಿದೆ.