Cheteshwar Pujara: ಅಚ್ಚರಿಯೆನಿಸುವ ವಿಶೇಷ ದಾಖಲೆ ಬರೆದ ಚೇತೇಶ್ವರ ಪೂಜಾರಾ

| Updated By: ಝಾಹಿರ್ ಯೂಸುಫ್

Updated on: Jul 04, 2022 | 12:30 PM

Cheteshwar Pujara: ಈ ಹಾಫ್ ಸೆಂಚುರಿಯು 34ರ ಹರೆಯದ ಚೇತೇಶ್ವರ ಪೂಜಾರ ಅವರ ಟೆಸ್ಟ್ ವೃತ್ತಿಜೀವನದ 33ನೇ ಅರ್ಧಶತಕವಾಗಿದೆ. ಈ ಪಂದ್ಯಕ್ಕೂ ಮುನ್ನ ಅವರು 95 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 6713 ರನ್ ಗಳಿಸಿದ್ದಾರೆ.

1 / 7
 ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು 4ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 416 ರನ್​ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 284 ರನ್​ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್​ನ 132 ರನ್​ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್​ಗಳಿಸಿದೆ. ಈ ಮೂಲಕ ಒಟ್ಟು 257 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

2 / 7
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಆರಂಭಿಕನಾಗಿ ಕಾಣಿಸಿಕೊಂಡಿರುವ ಪೂಜಾರಾ 2ನೇ ಇನಿಂಗ್ಸ್​ನಲ್ಲಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ತಂಡವು 3 ವಿಕೆಟ್ ಕಳೆದುಕೊಂಡಿದ್ದರೂ ಒಂದೆಡೆ 139 ಎಸೆತಗಳಲ್ಲಿ ಪೂಜಾರಾ ಅರ್ಧಶತಕ ಪೂರೈಸಿದ್ದಾರೆ. ಈ ಅರ್ಧಶತಕದೊಂದಿಗೆ ವಿಶೇಷ ದಾಖಲೆಯೊಂದು ಅವರ ಪಾಲಾಗಿದೆ.

3 / 7
ಏಕೆಂದರೆ 5ನೇ ಪಂದ್ಯ ನಡೆಯುತ್ತಿರುವ ಎಡ್ಜ್‌ಬಾಸ್ಟನ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ.  ಭಾರತದ ಆರಂಭಿಕ ಆಟಗಾರನಾಗಿ ಪೂಜಾರ ಇದೀಗ 36 ವರ್ಷಗಳ ನಂತರ ಈ ಮೈದಾನದಲ್ಲಿ ಅರ್ಧಶತಕ ಗಳಿಸಿದ್ದಾರೆ. ಅಂದರೆ ಟೀಮ್ ಇಂಡಿಯಾದ  ಆರಂಭಿಕನೊಬ್ಬ ಈ ಮೈದಾನದಲ್ಲಿ ಅರ್ಧಶತಕ ಬಾರಿಸಿ ಬರೋಬ್ಬರಿ 36 ವರ್ಷಗಳೇ ಕಳೆದಿವೆ ಎಂದರೆ ನಂಬಲೇಬೇಕು.

4 / 7
1986ರಲ್ಲಿ ಸುನಿಲ್ ಗವಾಸ್ಕರ್ ಈ ಮೈದಾನದಲ್ಲಿ ಆರಂಭಿಕನಾಗಿ ಕೊನೆಯ ಬಾರಿ ಅರ್ಧಶತಕ ಬಾರಿಸಿದ್ದರು. ಅಂದು ಗವಾಸ್ಕರ್ 54 ರನ್​ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಭಾರತದ ಯಾವುದೇ ಆರಂಭಿಕ ಆಟಗಾರ ಎಡ್ಜ್​ಬಾಸ್ಟನ್​ನಲ್ಲಿ ಹಾಫ್ ಸೆಂಚುರಿ ಸಿಡಿಸಿಲ್ಲ. ಇದೀಗ ಬರೋಬ್ಬರಿ 36 ವರ್ಷಗಳ ಬಳಿಕ ಪೂಜಾರಾ ಬ್ಯಾಟ್​ನಿಂದ ಅರ್ಧಶತಕ ಮೂಡಿ ಬಂದಿದೆ.

5 / 7
ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.  ಮತ್ತೊಂದೆಡೆ, ಶುಭಮನ್ ಗಿಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 17 ಮತ್ತು 4 ರನ್ ಗಳಿಸಿ ಔಟಾಗಿದ್ದಾರೆ. ಇನ್ನು  ಈ ಮೈದಾನದಲ್ಲಿ ಇದುವರೆಗೆ ಕೇವಲ 4 ಭಾರತೀಯ ಆಟಗಾರರು ಮಾತ್ರ ಶತಕ ಸಿಡಿಸಿದ್ದಾರೆ.  ಈ ಪಂದ್ಯಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ಪಂದ್ಯದ ಮೂಲಕ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದ್ದಾರೆ.

6 / 7
ಮತ್ತೊಂದೆಡೆ ಚೇತೇಶ್ವರ ಪೂಜಾರ ಕೂಡ 3 ವರ್ಷಗಳಿಂದ ಟೆಸ್ಟ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗಿಲ್ಲ.  ಅವರು ತಮ್ಮ ಕೊನೆಯ ಶತಕವನ್ನು ಜನವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಬಾರಿಸಿದ್ದರು.  ಇದೀಗ ಅರ್ಧಶತಕ ಪೂರೈಸಿರುವ ಪೂಜಾರಾ ಬ್ಯಾಟ್​ನಿಂದ ಶತಕವನ್ನು ನಿರೀಕ್ಷಿಸಲಾಗಿದೆ.

7 / 7
ಅಂದಹಾಗೆ ಈ ಹಾಫ್ ಸೆಂಚುರಿಯು 34ರ ಹರೆಯದ ಚೇತೇಶ್ವರ ಪೂಜಾರ ಅವರ ಟೆಸ್ಟ್ ವೃತ್ತಿಜೀವನದ 33ನೇ ಅರ್ಧಶತಕವಾಗಿದೆ. ಈ ಪಂದ್ಯಕ್ಕೂ ಮುನ್ನ ಅವರು 95 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 6713 ರನ್ ಗಳಿಸಿದ್ದರು. ಈ ವೇಳೆ 18 ಶತಕ ಮತ್ತು 32 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು ಅಜೇಯ 206 ರನ್‌ ಅವರ ಶ್ರೇಷ್ಠ ಇನಿಂಗ್ಸ್ ಆಗಿದೆ.