Cheteshwar Pujara: ಪೂಜಾರ ಅರ್ಧಶತಕ, ಪಂತ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಟೀಮ್ ಇಂಡಿಯಾ

| Updated By: Vinay Bhat

Updated on: Jul 04, 2022 | 7:48 AM

IND vs ENG: 257 ರನ್ ಗಳ ಮುನ್ನಡೆ ಪಡೆದುಕೊಂಡಿರುವ ಭಾರತ ಪರ ಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿ ಹಾಗೂ ರಿಷಭ್ ಪಂತ್ 30 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

1 / 8
ಬರ್ಮಿಂಗ್ ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಅಂತಿಮ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ 416 ರನ್ ಕಲೆಹಾಕಿದ್ದ ಭಾರತ ಬಳಿಕ ಇಂಗ್ಲೆಂಡ್ ಅನ್ನು 284 ರನ್ ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಬುಮ್ರಾ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ.

2 / 8
257 ರನ್ ಗಳ ಮುನ್ನಡೆ ಪಡೆದುಕೊಂಡಿರುವ ಭಾರತ ಪರ ಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿ ಹಾಗೂ ರಿಷಭ್ ಪಂತ್ 30 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

3 / 8
ಮೂರನೇ ದಿನದಾಟ ಶುರುವಾಗುವ ಹೊತ್ತಿಗೆ 84 ರನ್ ಗೆ 5 ವಿಕೆಟ್ ಕಳೆದುಕೊಂಡು ಫಾಲೋಆನ್ ಭೀತಿ ಎದುರಿಸುತ್ತಿದ್ದ ಇಂಗ್ಲೆಂಡ್ ಗೆ ಜಾನಿ ಬೈರ್ ಸ್ಟೋವ್ ಅವರ ಅಮೋಘ ಶತಕ ಸಹಾಯ ಮಾಡಿತು. ಜಾನಿ ಬೈರ್ ಸ್ಟೋವ್ ಅವರು ಸ್ಯಾಮ್ ಬಿಲ್ಲಿಂಗ್ಸ್ ಜೊತೆಗೂಡಿ ಏಳನೇ ವಿಕೆಟ್ಗೆ 92 ರನ್ ಸೇರಿದಿದ್ದು ಮಾತ್ರವಲ್ಲದೆ ಬೆನ್ ಸ್ಟೋಕ್ಸ್ ಜೊತೆಗೂಡಿ ಆರನೇ ವಿಕೆಟ್ಗೆ 66 ರನ್ ಜೊತೆಯಾಟ ನಡೆಸಿದರು.

4 / 8
ಜಾನಿ ಬೈರ್ ಸ್ಟೋವ್ 106 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 61.3 ಓವರ್ ನಲ್ಲಿ 284 ರನ್ ಗೆ ಸರ್ವಪತನ ಕಂಡಿತು.

5 / 8
ಭಾರತದ ಪರ ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ಗಳನ್ನು ಕಬಳಿಸಿದರೆ, ನಾಯಕ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ಗಳನ್ನು ಕಿತ್ತರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 132 ರನ್ಗಳ ಭಾರೀ ಮುನ್ನಡೆ ಸಾಧಿಸಿತು.

6 / 8
ಬಳಿಕ ಭಾರತ ತಂಡ ಎರಡನೇ ಇನಿಂಗ್ಸ್ ಆರಂಭಿಸಿತು. ಮೊದಲ ಓವರ್ನಲ್ಲೇ ಶುಭಮನ್ ಗಿಲ್ (4) ಔಟಾದರೆ, 75 ರನ್ ಗಳಿಸುವ ಹೊತ್ತಿಗೆ ಹನುಮ ವಿಹಾರಿ (11) ಮತ್ತು ವಿರಾಟ್ ಕೊಹ್ಲಿ (20) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.

7 / 8
ಆದರೆ, ತಾಳ್ಮೆಯ ಮೂರ್ತಿಯಂತೆ ಕ್ರೀಸ್ ನಲ್ಲಿ ಭದ್ರವಾಗಿ ನೆಲೆನಿಂತು ರನ್ ಹೆಕ್ಕಿದ ಅನುಭವಿ ಚೇತೇಶ್ವರ್ ಪೂಜಾರ, 139 ಎಸೆತಗಳಲ್ಲಿ ಅಜೇಯ 50 ರನ್ ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

8 / 8
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಿದ ಇನ್ ಫಾರ್ಮ್ ಬ್ಯಾಟರ್ ರಿಷಭ್ ಪಂತ್ (ಅಜೇಯ 30) ಪೂಜಾರ ಜೊತೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.  ಸದ್ಯ 257 ರನ್ ಗಳ ಮುನ್ನಡೆಯಲ್ಲಿರುವ ಭಾರತ ಕನಿಷ್ಠ 400ರ ಗಡಿಯತ್ತ ಚಿತ್ತ ನೆಟ್ಟಿದೆ.