Irani Cup: ಇಂಗ್ಲೆಂಡ್​ ನೆಲದಲ್ಲಿ ಶತಕಗಳ ಮೇಲೆ ಶತಕ; ಭಾರತದಲ್ಲಿ 1 ರನ್​ಗೆ ಸುಸ್ತಾದ ಪೂಜಾರ

| Updated By: ಪೃಥ್ವಿಶಂಕರ

Updated on: Oct 01, 2022 | 6:25 PM

Cheteshwar Pujara: ರಾಯಲ್ ಲಂಡನ್ ODI ಕಪ್‌ನಲ್ಲಿ ಅಬ್ಬರಿಸಿದ್ದ ಪೂಜಾರ 3 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸುವ ಮೂಲಕ ತಮ್ಮ ಫಾರ್ಮ್ ತೋರಿಸಿದ್ದರು.

1 / 5
ಕಳೆದೆರಡು ತಿಂಗಳಿಂದ ಇಂಗ್ಲೆಂಡ್​ ನೆಲದಲ್ಲಿ ರನ್ ಮಳೆ ಸುರಿದಿದ್ದ ಚೇತೇಶ್ವರ ಪೂಜಾರ ತವರು ನೆಲದಲ್ಲಿ ರನ್​ಗಾಗಿ ಹಾತೊರೆಯುತ್ತಿದ್ದಾರೆ. ಸೌರಾಷ್ಟ್ರ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಟ್ರೋಫಿ ಪಂದ್ಯ ಶನಿವಾರದಿಂದ ರಾಜ್‌ಕೋಟ್‌ನಲ್ಲಿ ಪ್ರಾರಂಭವಾಗಿದ್ದು, ಬ್ಯಾಟಿಂಗ್​ಗಿಳಿದ ಪೂಜಾರ ಮೈದಾನಕ್ಕೆ ಬಂದ ವೇಗದಲ್ಲೇ ಪೆವಿಲಿಯನ್​ಗೆ ಮರಳಿದರು.

2 / 5
2 ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿದ್ದ ಪೂಜಾರ ಭಾರತದಲ್ಲಿ ಕೇವಲ 1 ರನ್‌ಗೆ ಸುಸ್ತಾದರು. ಕುಲದೀಪ್ ಸೇನ್ ಎಸೆತದಲ್ಲಿ ಹನುಮ ವಿಹಾರಿಗೆ ಕ್ಯಾಚಿತ್ತು ಪೂಜಾರ ಔಟಾದರು.

3 / 5
ಕೇವಲ 4 ಎಸೆತಗಳನ್ನು ಎದುರಿಸಿದ ಪೂಜಾರ 1 ರನ್​ಗೆ ತಮ್ಮ ವಿಕೆಟ್ ಒಪ್ಪಿಸಿದರು. ಪೂಜಾರ ಸೇರಿದಂತೆ ತಂಡದ ಇನ್ನುಳಿದ ಬ್ಯಾಟರ್​ಗಳು ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗಿ ಇಡೀ ತಂಡ ಕೇವಲ 25 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 98 ರನ್‌ಗಳಿಗೆ ಆಲೌಟ್ ಆಯಿತು. ರೆಸ್ಟ್ ಆಫ್ ಇಂಡಿಯಾ ಪರ ಮುಖೇಶ್ ಕುಮಾರ್ 4, ಕುಲದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್ ತಲಾ 3 ವಿಕೆಟ್ ಪಡೆದರು.

4 / 5
ಕಳೆದ ಎರಡು ತಿಂಗಳಿನಿಂದ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್​ನಲ್ಲಿ ಬ್ಯಾಟ್‌ನಿಂದ ಕೋಲಾಹಲ ಸೃಷ್ಟಿಸಿದ್ದ ಪೂಜಾರ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒಂದರಲ್ಲಿ ಸಸೆಕ್ಸ್‌ ತಂಡದ ಪರ ಅಬ್ಬರಿಸಿದ್ದರು. ಆ ಬಳಿಕ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಅವರು ಬೌಲರ್‌ಗಳನ್ನು ದಂಡಿಸುವುದರಲ್ಲಿ ಯಶಸ್ವಿಯಾಗಿದ್ದರು.

5 / 5
ರಾಯಲ್ ಲಂಡನ್ ODI ಕಪ್‌ನಲ್ಲಿ ಅಬ್ಬರಿಸಿದ್ದ ಪೂಜಾರ 3 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸುವ ಮೂಲಕ ತಮ್ಮ ಫಾರ್ಮ್ ಅನ್ನು ತೋರಿಸಿದರು. ಆದರೆ ಈಗ ತಮ್ಮದೇ ಆದ ತವರು ನೆಲದಲ್ಲಿ ಪೂಜಾರ ವಿಫಲರಾಗಿದ್ದಾರೆ.

Published On - 6:19 pm, Sat, 1 October 22