Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ

Edited By:

Updated on: Jul 21, 2022 | 5:33 PM

Cheteshwar Pujara: ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಪೂಜಾರ ಮುರಿದಿದ್ದಾರೆ.

1 / 6
ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ... ಸತತ ಮೂರು ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ... ಸತತ ಮೂರು ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

2 / 6

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ಸಸೆಕ್ಸ್ ಪರ ಆಡುತ್ತಿರುವ ಚೇತೇಶ್ವರ ಪೂಜಾರ ಸತತವಾಗಿ ಮೂರು ದ್ವಿಶತಕ ಬಾರಿಸಿದ್ದಾರೆ. ವಿಶೇಷ ಎಂದರೆ ಇದೀಗ ಸಸೆಕ್ಸ್ ಪರ ಹಂಗಾಮಿ ನಾಯಕರಾಗಿರುವ ಪೂಜಾರ ತಮ್ಮ ನಾಯಕತ್ವದಲ್ಲೂ ಡಬಲ್ ಸೆಂಚುರಿ ಸಿಡಿಸಿದ್ದಾರೆ.

3 / 6

ನಾಯಕನಾಗಿ ಮಿಡ್ಲ್‌ಸೆಕ್ಸ್ ವಿರುದ್ಧ 234 ರನ್ ಬಾರಿಸಿ ಮಿಂಚಿದ್ದ ಪೂಜಾರ, ಇದಕ್ಕೂ ಮುನ್ನ ಡರ್ಹಾಮ್ ವಿರುದ್ಧ 203 ರನ್ ಬಾರಿಸಿದ್ದರು. ಅಲ್ಲದೆ ತನ್ನ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಡರ್ಬಿಶೈರ್ ವಿರುದ್ಧ 201 ರನ್ ಗಳಿಸಿ ಅಬ್ಬರಿಸಿದ್ದರು.

4 / 6

ಈ ಮೂಲಕ 118 ವರ್ಷಗಳ ಇತಿಹಾಸ ಹೊಂದಿರುವ ಸಸೆಕ್ಸ್ ತಂಡದ ಪರ ಬ್ಯಾಕ್ ಟು ಬ್ಯಾಕ್ 3 ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

5 / 6

ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಪೂಜಾರ ಮುರಿದಿದ್ದಾರೆ. ಅಜರು್ ಕೌಂಟಿ ಕ್ರಿಕೆಟ್​ನಲ್ಲಿ 1991 ರಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ 212 ಮತ್ತು 1994 ರಲ್ಲಿ ಡರ್ಹಾಮ್ ವಿರುದ್ಧ 205 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಚೇತೇಶ್ವರ ಪೂಜಾರ ಬ್ಯಾಕ್ ಟು ಬ್ಯಾಕ್ 3 ದ್ವಿಶತಕಗಳನ್ನು ಬಾರಿಸಿ ಕೌಂಟಿ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ದ್ವಿಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

6 / 6

ವಿಶೇಷ ಎಂದರೆ ಈ ಬಾರಿ ಕೌಂಟಿ ಕ್ರಿಕೆಟ್​ಗೆ ಪಾದರ್ಪಣೆ ಮಾಡಿರುವ ಚೇತೇಶ್ವರ ಪೂಜಾರ 7 ಪಂದ್ಯಗಳನ್ನು ಆಡಿದ್ದಾರೆ. ಈ ಏಳು ಪಂದ್ಯಗಳಲ್ಲಿ 10 ಇನಿಂಗ್ಸ್ ಆಡಿದ್ದು, ಈ ವೇಳೆ ಬರೋಬ್ಬರಿ 997 ರನ್​ಗಳನ್ನು ಕಲೆಹಾಕಿದ್ದಾರೆ. ಅಂದರೆ ಪೂಜಾರ 3 ದ್ವಿಶತಕಗಳಲ್ಲದೆ 2 ಶತಕಗಳನ್ನು ಸಿಡಿಸಿ ಅಬ್ಬರಿಸಿರುವುದು ವಿಶೇಷ. ಒಟ್ಟಿನಲ್ಲಿ ಇಂಗ್ಲೆಂಡ್ ಪಿಚ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೇತೇಶ್ವರ ಪೂಜಾರ ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ.

Published On - 5:31 pm, Thu, 21 July 22

Loading...
Unable to load recommendations.
Follow Us