Dwayne Bravo: CPL ನಿಂದ ನಿವೃತ್ತಿ ಘೋಷಿಸಿದ ಡ್ವೇನ್ ಬ್ರಾವೊ
Dwayne Bravo: ಐಪಿಎಲ್ನಲ್ಲಿ ಡ್ವೇನ್ ಬ್ರಾವೊ 161 ಪಂದ್ಯಗಳನ್ನಾಡಿದ್ದು, ಈ ವೇಳೆ 1560 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 2023 ರಲ್ಲಿ ಐಪಿಎಲ್ಗೆ ಗುಡ್ ಬೈ ಹೇಳಿದ್ದ ಬ್ರಾವೊ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1 / 5
ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೊ ಕೆರಿಬಿಯನ್ ಪ್ರೀಮಿಯರ್ ಲೀಗ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿಯ ಸಿಪಿಎಲ್ ಮುಕ್ತಾಯದೊಂದಿಗೆ ವೆಸ್ಟ್ ಇಂಡೀಸ್ ಟಿ20 ಲೀಗ್ಗೆ ವಿದಾಯ ಹೇಳುತ್ತಿರುವುದಾಗಿ ಬ್ರಾವೊ ತಿಳಿಸಿದ್ದಾರೆ. ಈ ಮೂಲಕ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಕೊನೆಯ ಪಂದ್ಯವಾಡುವ ಮೂಲಕ ಸಿಪಿಎಲ್ಗೆ ಗುಡ್ ಬೈ ಹೇಳುವ ಇರಾದೆಯಲ್ಲಿದ್ದಾರೆ.
2 / 5
ಇದು ಉತ್ತಮ ಪ್ರಯಾಣ. ಹಾಗೆಯೇ ಇದು ನನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಸೀಸನ್. ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದೊಂದಿಗೆ ನಾನು ಸಿಪಿಎಲ್ ಆರಂಭಿಸಿದ್ದೆ, ಇದೀಗ ಇದೇ ತಂಡದೊಂದಿಗೆ ವಿದಾಯ ಹೇಳುತ್ತಿರುವುದಾಗಿ ಡ್ವೇನ್ ಬ್ರಾವೊ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
3 / 5
2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಡ್ವೇನ್ ಬ್ರಾವೊ ಟಿ20 ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ತವರಿಗೆ ಟಿ20 ಲೀಗ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಮುಂಬರುವ ದಿನಗಳಲ್ಲಿ ಇತರೆ ಲೀಗ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ.
4 / 5
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 104 ಪಂದ್ಯಗಳನ್ನಾಡಿರುವ ಬ್ರಾವೊ 74 ಇನಿಂಗ್ಸ್ಗಳಿಂದ ಒಟ್ಟು 1155 ರನ್ ಕಲೆಹಾಕಿದ್ದಾರೆ. ಇದೇ ವೇಳೆ 1978 ಎಸೆತಗಳನ್ನು ಎಸೆಯುವ ಮೂಲಕ ಒಟ್ಟು 128 ವಿಕೆಟ್ಗಳನ್ನು ಕಬಳಿಸಿದ್ದಾರೆ.
5 / 5
ಅಷ್ಟೇ ಅಲ್ಲದೆ 2017 ಮತ್ತು 2018 ರಲ್ಲಿ ಡ್ವೇನ್ ಬ್ರಾವೊ ನಾಯಕತ್ವದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಸಿಪಿಎಲ್ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಹಾಗೆಯೇ 2021 ರಲ್ಲಿ ಪೇಟ್ರಿಯಾಟ್ಸ್ ತಂಡವು ಬ್ರಾವೊ ಅವರ ನಾಯಕತ್ವದಲ್ಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ 40 ವರ್ಷದ ಡ್ವೇನ್ ಬ್ರಾವೊ ಮುಂದಿನ ತಿಂಗಳು 41ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇದಕ್ಕೂ ಮುನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಬ್ರಾವೊ ನಿವೃತ್ತಿ ಘೋಷಿಸಿರುವುದು ವಿಶೇಷ.