PAK vs BAN: ಬಾಬರ್ ಮತ್ತೆ ಫೇಲ್; 615 ದಿನಗಳಿಂದ ಮಾಜಿ ನಾಯಕನಿಗೆ ರನ್ ಬರ

Babar Azam: ಕೇವಲ ಒಂದೇ ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಗೆ ಹೋಲಿಸುತ್ತಿದ್ದ ಪಾಕಿಸ್ತಾನದ ಸೀಮಿತ ಓವರ್​ಗಳ ನಾಯಕ ಬಾಬರ್ ಆಝಂ ಸದ್ಯಕ್ಕೆ ರನ್ ಬರ ಎದುರಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ.

|

Updated on:Aug 31, 2024 | 6:27 PM

ಕೇವಲ ಒಂದೇ ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಗೆ ಹೋಲಿಸುತ್ತಿದ್ದ ಪಾಕಿಸ್ತಾನದ ಸೀಮಿತ ಓವರ್​ಗಳ ನಾಯಕ ಬಾಬರ್ ಆಝಂ ಸದ್ಯಕ್ಕೆ ರನ್ ಬರ ಎದುರಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಬಾಬರ್ ಅವರ ಈ ಕಳಪೆ ಪ್ರದರ್ಶನ ಹೀಗೆ ಮುಂದುವರೆದರೆ, ಟೆಸ್ಟ್ ಸ್ವರೂಪದಿಂದ ಅವರಿಗೆ ಗೇಟ್​ಪಾಸ್ ಸಿಗುವುದು ಖಚಿತ.

1 / 6
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಬರ್ ಆಜಂ ಕೇವಲ 31 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲಿ ಬಾಬರ್ ವಿಫಲರಾಗಿದ್ದರು. ಹೀಗಾಗಿ ಮಾಡು ಇಲ್ಲವೇ ಮಡಿ ಟೆಸ್ಟ್ ಪಂದ್ಯದಲ್ಲಾದರೂ ಬಾಬರ್ ಅಬ್ಬರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾಬರ್ ಅವರ ಕಳಪೆ ಫಾರ್ಮ್ ಎರಡನೇ ಪಂದ್ಯದಲ್ಲೂ ಮುಂದುವರೆದಿದೆ.

2 / 6
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 77 ಎಸೆತಗಳನ್ನು ಎದುರಿಸಿದ ಬಾಬರ್ 2 ಬೌಂಡರಿಗಳ ಸಹಾಯದಿಂದ 31 ರನ್ ಗಳಿಸಿ, ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು.

3 / 6
ಈ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಬರ್ ಕೇವಲ 2 ಎಸೆತಗಳನ್ನು ಎದುರಿಸಿ ಯಾವುದೇ ರನ್ ಬಾರಿಸದೆ ಡಕ್‌ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 50 ಎಸೆತಗಳನ್ನು ಎದುರಿಸಿದ ಬಾಬರ್ 22 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು.

4 / 6
ಟೆಸ್ಟ್ ಮಾದರಿಯಲ್ಲಿ ರನ್ ಕಲೆಹಾಕುವಲ್ಲಿ ಬಾಬರ್ ವಿಫಲವಾಗುತ್ತಿರುವುದು ಇದೇ ಮೊದಲಲ್ಲ. ಬಾಬರ್, ಬರೋಬ್ಬರಿ 614 ದಿನಗಳಿಂದ ಈ ಮಾದರಿಯಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಈ ಮಾದರಿಯಲ್ಲಿ ಬಾಬರ್​ಗೆ ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗುತ್ತಿಲ್ಲ. 2022 ರ ಡಿಸೆಂಬರ್‌ನಲ್ಲಿ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಬಾಬರ್ ಆಝಂ 161 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

5 / 6
ಈ ಇನ್ನಿಂಗ್ಸ್‌ನ ನಂತರ ಬಾಬರ್​ಗೆ ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಅರ್ಧಶತಕ ಬಾರಿಸಲು ಸಾಧ್ಯವಾಗುತ್ತಿಲ್ಲ. ಈ 614 ದಿನಗಳಲ್ಲಿ ಬಾಬರ್ ಅವರ ದೊಡ್ಡ ಇನ್ನಿಂಗ್ಸ್ ಕೇವಲ 41 ರನ್ ಆಗಿದೆ. ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಕ್ರಮವಾಗಿ 31, 22, 0, 23, 26, 41, 1, 14, 21, 39, 24, 13, 27, 24, 14 ರನ್ ಬಾರಿಸಿದ್ದು, ಒಟ್ಟಾರೆಯಾಗಿ ಬಾಬರ್ ಈ 15 ಇನ್ನಿಂಗ್ಸ್‌ಗಳಲ್ಲಿ 400 ರನ್‌ಗಳನ್ನು ಸಹ ಗಳಿಸಲಾಗಿಲ್ಲ.

6 / 6

Published On - 6:27 pm, Sat, 31 August 24

Follow us