Team India: ಕಳೆದ ವರ್ಷ ಟೀಮ್ ಇಂಡಿಯಾ ಆಟಗಾರರು ಬರೆದ ವಿಶ್ವ ದಾಖಲೆಗಳು ಯಾವುವು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Jan 01, 2023 | 9:08 PM

World Records: ಕಳೆದ ವರ್ಷ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ್ದೇ ದರ್ಬಾರ್ ಎಂದರೆ ತಪ್ಪಾಗಲಾರದು. ಏಕೆಂದರೆ 2022 ರಲ್ಲಿ ಭಾರತ ತಂಡವು ಒಟ್ಟು 38 ಟಿ20 ಪಂದ್ಯಗಳನ್ನು ಆಡಿದೆ.

1 / 6
2022 ಕ್ಕೆ ವಿದಾಯ ಹೇಳಿರುವ ಟೀಮ್ ಇಂಡಿಯಾ ಆಟಗಾರರು ಜನವರಿ 3 ರಿಂದ ಶ್ರೀಲಂಕಾ ವಿರುದ್ಧ ಸರಣಿಯೊಂದಿಗೆ ಹೊಸ ಅಭಿಯಾನ ಆರಂಭಿಸಲಿದೆ. ವಿಶೇಷ ಎಂದರೆ ಕಳೆದ ವರ್ಷ ಟೀಮ್ ಇಂಡಿಯಾದ ಕೆಲ ಆಟಗಾರರು ಕಳಪೆ ಫಾರ್ಮ್​ನಿಂದ ಬಳಲಿದರೂ, ಮತ್ತೆ ಕೆಲವರು ಅದ್ಭುತ ಪ್ರದರ್ಶನ ನೀಡಿ ವಿಶೇಷ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ...

2 / 6
ವಿರಾಟ್ ಕೊಹ್ಲಿ-ರನ್​ ಸರದಾರ: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಹಿಂದೆ ಈ ದಾಖಲೆ ಶ್ರೀಲಂಕಾದ ಮಹೇಲ ಜಯವರ್ಧನೆ ಹೆಸರಿನಲ್ಲಿತ್ತು. ಜಯವರ್ಧನೆ 1016 ರನ್ ಗಳಿಸಿ ಟಿ20 ವಿಶ್ವಕಪ್​ನ ರನ್​ ಸರದಾರ ಎನಿಸಿಕೊಂಡಿದ್ದರು. ಆದರೆ 2022ರ ಟಿ20 ವಿಶ್ವಕಪ್​ನಲ್ಲಿ ಮೂರು ಅರ್ಧ ಶತಕಗಳನ್ನು ಸಿಡಿಸಿದ್ದ ಕೊಹ್ಲಿ ಒಟ್ಟು 296 ರನ್​ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ (1141) ಬಾರಿಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಯಿತು.

3 / 6
ವಿರಾಟ್ ಕೊಹ್ಲಿ-ಶತಕ ವೀರ: ವಿರಾಟ್ ಕೊಹ್ಲಿ 2022 ರಲ್ಲಿ 2 ಶತಕಗಳನ್ನು ಬಾರಿಸಿದ್ದರು. ಏಷ್ಯಾಕಪ್​ನಲ್ಲಿ ಅಫ್ಘಾನ್ ವಿರುದ್ಧ ಚೊಚ್ಚಲ ಟಿ20 ಶತಕ ಸಿಡಿಸಿದ್ದ ಕೊಹ್ಲಿ, ಆ ಬಳಿಕ ಶ್ರೀಲಂಕಾ ವಿರುದ್ಧ ಏಕದಿನ ಶತಕ ಬಾರಿಸಿದ್ದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ (71) ರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ (72) 2ನೇ ಸ್ಥಾನಕ್ಕೇರಿದರು.

4 / 6
ಸೂರ್ಯನ ಆರ್ಭಟ: 2022 ರಲ್ಲಿ ಟೀಮ್ ಇಂಡಿಯಾ ಪರ ಅಬ್ಬರಿಸಿದ್ದು ಸೂರ್ಯಕುಮಾರ್ ಯಾದವ್. ಒಟ್ಟು 59 ಸಿಕ್ಸ್​ಗಳನ್ನು ಸಿಡಿಸುವ ಮೂಲಕ 2022ರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಸೂರ್ಯಕುಮಾರ್ ಬರೆದಿದ್ದಾರೆ. ಇದಲ್ಲದೆ ಟಿ20 ಕ್ರಿಕೆಟ್​ನಲ್ಲಿ 1164 ರನ್ ಬಾರಿಸಿ ಚುಟುಕು ಕ್ರಿಕೆಟ್​ನಲ್ಲಿ ವರ್ಷವೊಂದರಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.

5 / 6
ಸಿಡಿದ ಪಾಕೆಟ್ ಡೈನಾಮೊ: 2022 ರಲ್ಲಿ ಇಶಾನ್ ಕಿಶನ್​ಗೆ ಹೆಚ್ಚು ಚಾನ್ಸ್​ ಸಿಕ್ಕಿರಲಿಲ್ಲ. ಆದರೆ ಸಿಕ್ಕ ಅವಕಾಶದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು. ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಅತ್ಯಂತ ವೇಗವಾಗಿ ಡಬಲ್ ಸೆಂಚುರಿ ಸಿಡಿಸಿ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾದರು.

6 / 6
ಟೀಮ್ ಇಂಡಿಯಾ ಟಿ20 ದರ್ಬಾರ್: ಕಳೆದ ವರ್ಷ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ್ದೇ ದರ್ಬಾರ್ ಎಂದರೆ ತಪ್ಪಾಗಲಾರದು. ಏಕೆಂದರೆ 2022 ರಲ್ಲಿ ಭಾರತ ತಂಡವು ಒಟ್ಟು 38 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 28 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಿಸಿದೆ. ಇದು ಕೂಡ ವಿಶ್ವ ದಾಖಲೆ. ಅಂದರೆ 2021 ರಲ್ಲಿ 20 ಟಿ20 ಪಂದ್ಯಗಳನ್ನು ಗೆದ್ದ ಪಾಕಿಸ್ತಾನವನ್ನು ಹಿಂದಿಕ್ಕಿ ಕಳೆದ ವರ್ಷ ಭಾರತ ತಂಡವು ಹೊಸ ಇತಿಹಾಸ ನಿರ್ಮಿಸಿದೆ.