ಒಂದು ಟಿ20 ಪಂದ್ಯದಲ್ಲಿ ಬರೋಬ್ಬರಿ 36 ಸಿಕ್ಸರ್‌, 501 ರನ್..! ವಿಶ್ವದಾಖಲೆ ಪುಡಿಪುಡಿ

Edited By:

Updated on: Nov 01, 2022 | 3:19 PM

CSA T20 Challenge: ಸೋತ ನೈಟ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಗರಿಷ್ಠ 19 ಸಿಕ್ಸರ್‌ಗಳನ್ನು ಬಾರಿಸಿದರೆ, ಗೆದ್ದ ಟೈಟಾನ್ಸ್‌ ತಂಡದಿಂದ ಒಟ್ಟು 17 ಸಿಕ್ಸರ್‌ಗಳು ಸಿಡಿದವು.

1 / 5
ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯೊಂದು ನೆಲಸಮಗೊಂಡಿದೆ. ದಕ್ಷಿಣ ಆಫ್ರಿಕಾದ ಟಿ20 ಚಾಲೆಂಜ್‌ ಪಂದ್ಯಾವಳಿಯಲ್ಲಿ ನಡೆದ ಟೈಟಾನ್ಸ್ ಮತ್ತು ನೈಟ್ಸ್ ನಡುವಿನ ಪಂದ್ಯ ಈ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲ ಬಾರಿಗೆ 500 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಸೃಷ್ಟಿಯಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯೊಂದು ನೆಲಸಮಗೊಂಡಿದೆ. ದಕ್ಷಿಣ ಆಫ್ರಿಕಾದ ಟಿ20 ಚಾಲೆಂಜ್‌ ಪಂದ್ಯಾವಳಿಯಲ್ಲಿ ನಡೆದ ಟೈಟಾನ್ಸ್ ಮತ್ತು ನೈಟ್ಸ್ ನಡುವಿನ ಪಂದ್ಯ ಈ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲ ಬಾರಿಗೆ 500 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಸೃಷ್ಟಿಯಾಗಿದೆ.

2 / 5

‘ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಟೈಟಾನ್ಸ್ ತಂಡ ಡೆವಲ್ಡ್ ಬ್ರೆವಿಸ್ ಅವರ ಬಿರುಸಿನ 162 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 271 ರನ್ ಗಳಿಸಿತು. ಉತ್ತರವಾಗಿ ಗುರಿ ಬೆನ್ನಟ್ಟಿದ ನೈಟ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 230 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಈ ಪಂದ್ಯದಲ್ಲಿ ಒಟ್ಟು 501 ರನ್‌ಗಳು ಹರಿದುಬಂದವು. ಈ ಹಿಂದೆ 2016 ರಂದು ನ್ಯೂಜಿಲೆಂಡ್‌ನಲ್ಲಿ ಒಟಾಗೊ (249) ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ಸ್ (248) ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ 497 ರನ್ ಕಲೆಹಾಕಲಾಗಿತ್ತು.

3 / 5

ಅಲ್ಲದೆ ಈ ಪಂದ್ಯದಲ್ಲಿ 162 ರನ್ ಚಚ್ಚಿದ ಡೆವಾಲ್ಡ್ ಬ್ರೆವಿಸ್ ಅತ್ಯಂತ ವೇಗವಾಗಿ 150 ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಲ್ಲದೆ 250 ಸ್ಟ್ರೈಕ್ ರೇಟ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

4 / 5

ಟೈಟಾನ್ಸ್ ಮತ್ತು ನೈಟ್ಸ್ ನಡುವೆ ನಡೆದ ಈ ಪಂದ್ಯದಲ್ಲಿ ಒಟ್ಟು 36 ಸಿಕ್ಸರ್‌ಗಳು ದಾಖಲಾಗಿವೆ. ಅಂದರೆ ಕೇವಲ ಸಿಕ್ಸರ್‌ಗಳೊಂದಿಗೆ 216 ರನ್ ಸಂಗ್ರಹಗೊಂಡಿವೆ. ಕುತೂಹಲಕಾರಿ ಸಂಗತಿಯೆಂದರೆ, ಸೋತ ನೈಟ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಗರಿಷ್ಠ 19 ಸಿಕ್ಸರ್‌ಗಳನ್ನು ಬಾರಿಸಿದರೆ, ಗೆದ್ದ ಟೈಟಾನ್ಸ್‌ ತಂಡದಿಂದ ಒಟ್ಟು 17 ಸಿಕ್ಸರ್‌ಗಳು ಸಿಡಿದವು.

5 / 5

ಈ ಪಂದ್ಯದಲ್ಲಿ ಟೈಟಾನ್ಸ್ ಪರ ಆಡಿದ ಡೆವಲ್ಡ್ ಬ್ರೆವಿಸ್ ಕೇವಲ 57 ಎಸೆತಗಳಲ್ಲಿ 162 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 13 ಸಿಕ್ಸರ್ ಮತ್ತು 13 ಬೌಂಡರಿಗಳನ್ನು ಬಾರಿಸಿದ ಬ್ರೆವಿಸ್, ಒಟ್ಟಾರೆ ಸಿಕ್ಸರ್ ಮತ್ತು ಬೌಂಡರಿಗಳ ನೆರವಿನಿಂದಲೇ 130 ರನ್ ಕಲೆಹಾಕಿದರು.

Published On - 3:12 pm, Tue, 1 November 22

Loading...
Unable to load recommendations.
Follow Us