Virat Kohli: ಟಿ20 ವಿಶ್ವಕಪ್ ಕ್ರಿಕೆಟ್​​ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ: ಈವರೆಗೆ ಯಾರೂ ಮಾಡಿರದ ಸಾಧನೆ

IND vs BAN, T20 World Cup: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಅರ್ಧಶತಕ ಸಿಡಿಸಿ ಅಮೋಘ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಇಂದಿನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನೂತನ ದಾಖಲೆ ಸೃಷ್ಟಿಸಲು ತಯಾರಾಗಿದ್ದಾರೆ.

TV9 Web
| Updated By: Vinay Bhat

Updated on:Nov 02, 2022 | 10:38 AM

ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ (ICC T20 World Cup) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪ್ರತಿ ಪಂದ್ಯದಲ್ಲಿ ನೂತನ ದಾಖಲೆಗಳು ನಿರ್ಮಾಣವಾಗುತ್ತಿದೆ. ಇಂದು ಭಾರತ ಹಾಗೂ ಬಾಂಗ್ಲಾದೇಶ ನಡುವೆ ಅಡಿಲೇಡ್​ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದರಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

1 / 7
ಈ ಬಾರಿಯ  ಟಿ20 ವಿಶ್ವಕಪ್​ನಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಅರ್ಧಶತಕ ಸಿಡಿಸಿ ಅಮೋಘ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಇಂದಿನ ಪಂದ್ಯದ ಮೂಲಕ ನೂತನ ದಾಖಲೆ ಸೃಷ್ಟಿಸಲು ತಯಾರಾಗಿದ್ದಾರೆ.

2 / 7
ಕೊಹ್ಲಿ ಈವರೆಗೆ ಆಡಿರುವ 24 ಟಿ20 ವಿಶ್ವಕಪ್ ಪಂದ್ಯದಲ್ಲಿ ಒಟ್ಟು 1001 ರನ್ ಕಲೆಹಾಕಿದ್ದಾರೆ. ಕಳೆದ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 11 ರನ್ ಗಳಿಸಿದ ತಕ್ಷಣ ಭಾರತ ಪರ ಟಿ20 ವಿಶ್ವಕಪ್​ನಲ್ಲಿ 1000 ರನ್ ಗಳಿಸಿದ ಮೊಟ್ಟ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದರು.

3 / 7
ಸದ್ಯ ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ಕ್ರಿಕಟಿಗ ಶ್ರೀಲಂಕಾದ ಮಹೇಲ ಜಯವರ್ಧನೆ ಅವರ ದಾಖಲೆ ಪುಡಿಗಟ್ಟಲು ಕೊಹ್ಲಿ ತಯಾರಾಗಿದ್ದಾರೆ. ಜವಯರ್ಧನೆ 31 ಪಂದ್ಯಗಳಲ್ಲಿ 1016 ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ 15 ರನ್ ಕಲೆಹಾಕಿದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಪಟ್ಟ ತೊಡಲಿದ್ದಾರೆ.

4 / 7
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ನಲ್ಲಿ ಆಡಿರುವ 22 ಇನ್ನಿಂಗ್ಸ್​ಗಳಲ್ಲಿ 83.41 ಸರಾಸರಿಯೊಂದಿಗೆ ಒಟ್ಟು 1001 ರನ್ ಗಳಿಸಿದ್ದಾರೆ. ಇದರಲ್ಲಿ 12 ಅರ್ಧಶತಕ ಸೇರಿವೆ.

5 / 7
ಇಂಡೋ-ಬಾಂಗ್ಲಾ ಕದನ ಅಡಿಲೇಡ್​ನ ಓವಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪಾಯಿಂಟ್ ಟೇಬಲ್​ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ರೋಹಿತ್ ಪಡೆಗೆ ಈ ಪಂದ್ಯ ಮುಖ್ಯವಾಗಿದೆ. ಗೆದ್ದರಷ್ಟೆ ಸೆಮಿ ಫೈನಲ್ ಆಸೆಯನ್ನು ಗಟ್ಟಿಯಾಗಿ ಇಟ್ಟುಕೊಳ್ಳಬಹುದು.

6 / 7
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್.

7 / 7

Published On - 10:37 am, Wed, 2 November 22

Follow us