AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Prize Money: ಸಿಎಸ್​ಕೆಗೆ ಸಿಕ್ತು ಬರೋಬ್ಬರಿ 20 ಕೋಟಿ: ರಹಾನೆ, ಗಿಲ್, ಶಮಿಗೂ ಸಿಕ್ತು ಲಕ್ಷ ಲಕ್ಷ ಹಣ: ಇಲ್ಲಿದೆ ಸಂಪೂರ್ಣ ಮಾಹಿತಿ

CSK vs GT, IPL 2023 Final: ಡಕೌರ್ತ್ ಲುಯೂಸ್ ನಿಯಮದ ಅನ್ವಯ ಗುಜರಾತ್ ವಿರುದ್ಧ ಚೆನ್ನೈ ತಂಡ 5 ವಿಕೆಟ್​ಗಳ ಗೆಲುವು ಕಂಡಿತು. ರವೀಂದ್ರ ಜಡೇಜಾ 1 ಫೋರ್, ಸಿಕ್ಸರ್ ಸಿಡಿಸಿ ಗೆಲುವು ತಂದಿಟ್ಟರು. ಇದೀಗ ಚಾಂಪಿಯನ್ ಆದ ಸಿಎಸ್​ಕೆ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ನೀಡಲಾಗಿದೆ.

Vinay Bhat
|

Updated on:May 30, 2023 | 7:45 AM

Share
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆ ಬಿದ್ದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ರಣರೋಚಕ ಕದನದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಸಿಎಸ್​ಕೆ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

1 / 7
ಡಕೌರ್ತ್ ಲುಯೂಸ್ ನಿಯಮದ ಅನ್ವಯ ಚೆನ್ನೈ ತಂಡ 5 ವಿಕೆಟ್​ಗಳ ಗೆಲುವು ಕಂಡಿತು. ಕೊನೆಯ 2 ಎಸೆತದಲ್ಲಿ ಗೆಲ್ಲಲು 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ 1 ಫೋರ್, ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು.

2 / 7
ಇದೀಗ ಚಾಂಪಿಯನ್ ಆದ ಚೆನ್ನೈ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ನೀಡಲಾಗಿದೆ. ರನ್ನರ್ ಅಪ್ ಆದ ಗುಜರಾತ್ ಟೈಟಾನ್ಸ್ ತಂಡ 12.5 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.

3 / 7
17 ಪಂದ್ಯಗಳಲ್ಲಿ 890 ರನ್ ಬಾರಿಸಿ ಶುಭ್​ಮನ್ ಗಿಲ್ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದು 10 ಲಕ್ಷ ರೂ. ಬಾಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ 17 ಪಂದ್ಯಗಳಿಂದ 28 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತಮ್ಮದಾಗಿಸಿ 10 ಲಕ್ಷ ಪಡೆದುಕೊಂಡಿದ್ದಾರೆ.

4 / 7
ಅಜಿಂಕ್ಯಾ ರಹಾನೆ ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಫೈನಲ್ ಪಡೆದುಕೊಂಡಿದ್ದು 1 ಲಕ್ಷ ರೂ. ತಮ್ಮದಾಗಿಸಿದ್ದಾರೆ. ಗೇಮ್ ಚೇಂಜರ್ ಆಫ್ ದಿ ಫೈನಲ್ ಸಾಯಿ ಸುದರ್ಶನ್ (1 ಲಕ್ಷ), ಮೋಸ್ಟ್ ವ್ಯಾಲ್ಯುವೇಬಲ್ ಪ್ಲೇಯರ್ ಆಫ್ ದಿ ಫೈನಲ್ ಸಾಯಿ ಸುದರ್ಶನ್ (1 ಲಕ್ಷ).

5 / 7
ಉಳಿದಂತೆ ಅತ್ಯಂತ ಮೌಲ್ಯಯುತ ಆಟಗಾರ ಶುಭ್​ಮನ್ ಗಿಲ್ (12 ಲಕ್ಷ), ಫೇರ್​ ಪ್ಲೇ ಅವಾರ್ಡ್​​- ಡೆಲ್ಲಿ ಕ್ಯಾಪಿಟಲ್ಸ್, ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್​ (20 ಲಕ್ಷ), ಈ ಆವೃತ್ತಿಯ ಬೆಸ್ಟ್​ ಕ್ಯಾಚ್​ ಅವಾರ್ಡ್ ರಶೀದ್ ಖಾನ್​ (10 ಲಕ್ಷ) ಪಡೆದುಕೊಂಡಿದ್ದಾರೆ.

6 / 7
ಅಂತೆಯೆ ಸೂಪರ್​ ಸ್ಟ್ರೈಕರ್​​​ ಅವಾರ್ಡ್​ ಗ್ಲೇನ್ ಮ್ಯಾಕ್ಸ್​ವೆಲ್​ (10 ಲಕ್ಷ), ಪ್ಲೇಯರ್ ಆಫ್​ ದಿ ಮ್ಯಾಚ್​ ಡೆವೋನ್​ ಕಾನ್ವೆ (1 ಲಕ್ಷ), ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರ ಫಾಫ್​ ಡು ಪ್ಲೆಸಿಸ್​ (12 ಲಕ್ಷ).

7 / 7

Published On - 7:43 am, Tue, 30 May 23