
ಆರ್ಸಿಬಿಯ ಎರಡನೇ ತವರು ಮೈದಾನದವಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಮಣಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ (PC- IPL X).

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ಕೊನೆಯ ಎಸೆತದಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದುಕೊಂಡಿದೆ. ಚೆನ್ನೈ ತಂಡವು 2008 ರಲ್ಲಿ ಕೊನೆಯ ಎಸೆತದಲ್ಲಿ ಮೊದಲ ಗೆಲುವು ಸಾಧಿಸಿತು. ನಂತರ, 2012 ರಲ್ಲಿ ಮೂರು ಗೆಲುವು, 2019, 2020, 2021, 2022 ಮತ್ತು 2023 ರಲ್ಲಿಯೂ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದೆ (PC- IPL X).

ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಎಸೆತದಲ್ಲಿ ಏಳು ಬಾರಿ ಪಂದ್ಯಗಳನ್ನು ಗೆದ್ದುಕೊಂಡಿದೆ. 2011 ರಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದ ಮುಂಬೈ, 2012 ರಲ್ಲಿಯೂ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹಾಗೆಯೇ 2019, 2021 ಮತ್ತು 2023 ರಲ್ಲಿಯೂ ಒಂದೊಂದು ಪಂದ್ಯವನ್ನು ಕೊನೆಯ ಎಸೆತದಲ್ಲಿ ಗೆದ್ದುಕೊಂಡಿದೆ (PC- IPL X).

ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿ ಕೊನೆಯ ಎಸೆತದಲ್ಲಿ ಪಂದ್ಯಗಳನ್ನು ಗೆದ್ದುಕೊಂಡಿದೆ. 2008 ರಲ್ಲಿ, ತಂಡವು ಎರಡು ಪಂದ್ಯಗಳನ್ನು ಗೆದ್ದುಕೊಂಡರೆ, 2015 ರಲ್ಲಿಯೂ ಎರಡು ಪಂದ್ಯಗಳನ್ನು ಗೆದ್ದಿದೆ. ಇನ್ನು 2024 ರಲ್ಲಿಯೂ ಒಂದು ಪಂದ್ಯವನ್ನು ಗೆದ್ದಿದೆ (PC- IPL X).

ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ತಲಾ ನಾಲ್ಕು ಬಾರಿ ಕೊನೆಯ ಎಸೆತದಲ್ಲಿ ಪಂದ್ಯಗಳನ್ನು ಗೆದ್ದುಕೊಂಡಿವೆ. ಆರ್‌ಸಿಬಿ ಕ್ರಮವಾಗಿ 2012, 2019, 2021 ಮತ್ತು 2026 ರಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದೆ. 2022 ರಲ್ಲಿ ಗುಜರಾತ್ ಎರಡು ಬಾರಿ ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆದ್ದಿದ್ದರೆ, 2024 ಮತ್ತು 2025 ರಲ್ಲಿಯೂ ಈ ಸಾಧನೆ ಮಾಡಿದ್ದಾರೆ (PC- IPL X).

ಪಂಜಾಬ್ ಕಿಂಗ್ಸ್ ಕೂಡ ನಾಲ್ಕು ಬಾರಿ ಕೊನೆಯ ಎಸೆತದಲ್ಲಿ ಪಂದ್ಯಗಳನ್ನು ಗೆದ್ದಿದೆ. ಕೆಕೆಆರ್ ಮೂರು ಬಾರಿ, ರೈಸಿಂಗ್ ಪುಣೆ ಸೂಪರ್‌ಜೈಂಟ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ ತಲಾ ಎರಡು ಬಾರಿ ಕೊನೆಯ ಎಸೆತದಲ್ಲಿ ಪಂದ್ಯಗಳನ್ನು ಗೆದ್ದಿವೆ. ಡೆಕ್ಕನ್ ಚಾರ್ಜರ್ಸ್ ಕೊನೆಯ ಎಸೆತದಲ್ಲಿ ಒಮ್ಮೆ ಪಂದ್ಯವನ್ನು ಗೆದ್ದಿದೆ (PC- IPL X).