CSK Retention List for IPL 2025: ಧೋನಿ ಆಡುವುದು ಖಚಿತ; 6 ಆಟಗಾರರನ್ನು ಉಳಿಸಿಕೊಂಡ ಚೆನ್ನೈ

Updated on: Oct 31, 2024 | 7:18 PM

Chennai Super Kings Retention Players List for IPL 2025: ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ

1 / 6
ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಮೊದಲು ನಿರೀಕ್ಷಿಸಿದಂತೆ ತನ್ನ ತಂಡಕ್ಕೆ ಯಾವ ಆಟಗಾರ ಸೂಕ್ತ ಎಂಬುದನ್ನು ಅಳೆದು ತೂಗಿ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅದರಲ್ಲೂ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಐಪಿಎಲ್​ನಲ್ಲಿ ಆಡುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿದ್ದವು. ಆದರೀಗ ಆ ಊಹಾಪೋಹಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿ, ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ.

2 / 6

ಮೊದಲೇ ನಿರ್ಧರಿಸಿದಂತೆ ನಾಯಕ ರುತುರಾಜ್ ಗಾಯಕ್ವಾಡ್​ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿರುವ ಚೆನ್ನೈ ಫ್ರಾಂಚೈಸಿ, ಅವರಿಗೆ 18 ಕೋಟಿ ರೂಗಳನ್ನು ವ್ಯಯಿಸಿದೆ. ಈ ಮೂಲಕ ಮುಂದಿನ ಆವೃತ್ತಿಯಲ್ಲೂ ರುತುರಾಜ್ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

3 / 6

ಎರಡನೇ ಆಯ್ಕೆಯಾಗಿ ವಿದೇಶಿ ಆಟಗಾರನಿಗೆ ಮಣೆ ಹಾಕಿರುವ ಚೆನ್ನೈ, ಶ್ರೀಲಂಕಾದ ವೇಗದ ಬೌಲರ್ ಮತೀಶಾ ಪತಿರಾನ ಅವರನ್ನು 13 ಕೋಟಿ ರೂ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ. ಈ ಡೆತ್ ಓವರ್ ಸ್ಪೆಷಲಿಸ್ಟ್ ಚೆನ್ನೈ ತಂಡದ ಬೌಲಿಂಗ್ ಜೀವಾಳವಾಗಿರುವ ಕಾರಣ ಫ್ರಾಂಚೈಸಿ ಇಷ್ಟು ಮೊತ್ತವನ್ನು ವ್ಯಯಿಸಿದೆ.

4 / 6

ಶಿವಂ ದುಬೆಯನ್ನು ಮೂರನೇ ಆಟಗಾರನಾಗಿ ಉಳಿಸಿಕೊಂಡಿರುವ ಚೆನ್ನೈ, ಈ ಸ್ಫೋಟಕ ಬ್ಯಾಟ್ಸ್‌ಮನ್​ಗಾಗಿ 12 ಕೋಟಿ ರೂಗಳನ್ನು ವ್ಯಯಿಸಿದೆ. ದುಬೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಬಿಗ್ ಶಾಟ್ ಹೊಡೆಯುವಲ್ಲಿ ನಿಸ್ಸೀಮರು ಇದರೊಂದಿಗೆ ದುಬೆ ಬೌಲರ್​ ಕೂಡ ಆಗಿದ್ದಾರೆ.

5 / 6

ನಾಲ್ಕನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿರುವ ಚೆನ್ನೈ, ಈ ಸ್ಟಾರ್ ಆಲ್‌ರೌಂಡರ್​ಗಾಗಿ ಬರೋಬ್ಬರಿ 18 ಕೋಟಿ ರೂಗಳನ್ನು ವ್ಯಯಿಸಿದೆ.

6 / 6

ಕೊನೆಯ ಹಾಗೂ ಐದನೇ ಆಯ್ಕೆಯಾಗಿ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಉಳಿಸಿಕೊಂಡಿರುವ ಸಿಎಸ್​ಕೆ, ಮಹೀಯನ್ನು ಉಳಿಸಿಕೊಳ್ಳುವುದಕ್ಕಾಗಿ ಕೇವಲ 4 ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರನಾಗಿ ಚೆನ್ನೈ ಆಯ್ಕೆ ಮಾಡಿದೆ.

Published On - 5:44 pm, Thu, 31 October 24

Loading...
Unable to load recommendations.
Follow Us