
ಸಿಎಸ್‌ಕೆ ತಂಡ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು 28 ನೇ ಬಾರಿಗೆ ಐಪಿಎಲ್ನಲ್ಲಿ ಮುಖಾಮುಖಿಯಾಗಲಿವೆ. ಚೆನ್ನೈ ಈ ಮೊದಲು ನಡೆದ 27 ಪಂದ್ಯಗಳಲ್ಲಿ 17ರಲ್ಲಿ ಗೆದ್ದಿದೆ. ಅದೇ ಸಮಯದಲ್ಲಿ, ಆರ್ಸಿಬಿ ಹೆಸರಿನಲ್ಲಿ ಕೇವಲ 9 ಪಂದ್ಯಗಳು ಇವೆ. ಉಭಯ ತಂಡಗಳ ನಡುವೆ 1 ಪಂದ್ಯವು ಪಲಿತಾಂಶವಿಲ್ಲದೆ ಕೊನೆಗೊಂಡಿದೆ.

ಐಪಿಎಲ್‌ನ ಕೊನೆಯ 5 ಪಂದ್ಯಗಳಲ್ಲಿ, ಎರಡೂ ತಂಡಗಳ ಮುಖಾಮುಖಿ ಸ್ಪರ್ಧೆಯನ್ನು ನಾವು ನೋಡಿದರೆ, ಇಲ್ಲಿಯೂ ಸಿಎಸ್‌ಕೆ 3-2 ಅಂತರದಲ್ಲಿ ಆರ್‌ಸಿಬಿಗಿಂತ ಮುಂದಿದೆ.

ಇದರೊಂದಿಗೆ ಇತರೆ ಫ್ರಾಂಚೈಸಿಗಳು ಕೊಹ್ಲಿ ದೊಡ್ಡ ಮೊತ್ತದ ಆಫರ್ ನೀಡಿದರೂ ಕೊಹ್ಲಿ ಆರ್ಸಿಬಿ ಬಿಟ್ಟು ಹೋಗುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಅಷ್ಟೇ ಅಲ್ಲದೆ ತಮ್ಮ ನಿವೃತ್ತಿವರೆಗೂ ಆರ್ಸಿಬಿ ಪರ ಮಾತ್ರ ಆಡುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದೇ ಹೇಳಬಹುದು.

ಐಪಿಎಲ್ 2021 ರಲ್ಲಿ ಉಭಯ ತಂಡಗಳಿಂದ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಕುರಿತು ಮಾತನಾಡುವುದಾದರೆ, ಈ ದಾಖಲೆಯು ಪ್ರಸ್ತುತ ಫಾಫ್ ಡು ಪ್ಲೆಸಿಸ್ ಹೆಸರಿನಲ್ಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಇದುವರೆಗೆ ಆರ್‌ಸಿಬಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಡು ಪ್ಲೆಸಿಸ್ 8 ಪಂದ್ಯಗಳಲ್ಲಿ 320 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ 8 ಪಂದ್ಯಗಳಲ್ಲಿ 233 ರನ್ ಗಳಿಸಿದ್ದಾರೆ.