ಜೈ ಶ್ರೀರಾಮ್ ಘೋಷಣೆ ಕೂಗಿ, ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದ ಪಾಕ್ ಕ್ರಿಕೆಟರ್..!

| Updated By: ಪೃಥ್ವಿಶಂಕರ

Updated on: Oct 24, 2022 | 12:37 PM

ಎಲ್ಲಾ ನಾಗರೀಕರಿಗೂ ದೀಪಾವಳಿಯ ಶುಭಾಶಯ ಕೋರಿರುವ ಪಾಕ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ, ಜೈ ಶ್ರೀರಾಮ್ ಘೋಷಣೆ ಕೂಗುವುದರೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದು ಟ್ವೀಟ್ ಮಾಡಿದ್ದಾರೆ.

1 / 6
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು 4 ವಿಕೆಟ್​ಗಳಿಂದ ಮಣಿಸುವುದರೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಟೀಂ ಇಂಡಿಯಾಕ್ಕೆ 160 ರನ್ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ರೋಹಿತ್ ಪಡೆ 4 ವಿಕೆಟ್​ಗಳಿಂದ ರೋಚಕ ಜಯ ಸಾದಿಸಿತು.

2 / 6
ಈ ಗೆಲುವಿನಲ್ಲಿ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಶತಕದ ಜೊತೆಯಾಟ ಪ್ರಮುಖ ಪಾತ್ರವಹಿಸಿತು. ಈ ಇಬ್ಬರಲ್ಲದೆ ಬೌಲಿಂಗ್​ನಲ್ಲಿ ತಲಾ 3 ವಿಕೆಟ್ ಪಡೆದು ಮಿಂಚಿದ ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಗೆಲುವಿನ ಹೀರೋಗಳು ಎನಿಸಿಕೊಂಡರು.

3 / 6
ಪಾಕ್ ವಿರುದ್ಧ ಸದಾ ಅದ್ಭುತ ಪ್ರದರ್ಶನ ನೀಡುವ ಕೊಹ್ಲಿ, ಈ ಪಂದ್ಯದಲ್ಲೂ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 82 ರನ್ ಸಿಡಿಸಿದರು.

4 / 6
ಈ ಮೂಲಕ ಟೀಂ ಇಂಡಿಯಾ, ಬಾರತೀಯರಿಗೆ ಒಂದು ದಿನ ಮುಂಚಿತವಾಗಿಯೇ ದೀಪಾವಳಿಯ ಉಡುಗೂರೆ ನೀಡಿತು. ಟೀಂ ಇಂಡಿಯಾ ಮಾತ್ರವಲ್ಲದೆ ಪಾಕ್ ತಂಡದ ಮಾಜಿ ಕ್ರಿಕೆಟರ್ ಕೂಡ ದೀಪಾವಳಿಯ ಶುಭಾಶಯ ಕೋರಿದ್ದು, ತನ್ನಲ್ಲಿರುವ ಒಂದು ಬಯಕೆಯನ್ನು ಹೊರಹಾಕಿದ್ದಾರೆ.

5 / 6
ವಿಶ್ವದ ಎಲ್ಲಾ ನಾಗರೀಕರಿಗೂ ದೀಪಾವಳಿಯ ಶುಭಾಶಯ ಕೋರಿರುವ ಪಾಕ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ, ಜೈ ಶ್ರೀರಾಮ್ ಘೋಷಣೆ ಕೂಗುವುದರೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದು ಟ್ವೀಟ್ ಮಾಡಿದ್ದಾರೆ.

6 / 6
ಇನ್ನು ಪಾಕಿಸ್ತಾನ ತಂಡದ ಪರ ಸಾಕಷ್ಟು ಕ್ರಿಕೆಟ್ ಆಡಿರುವ ಡ್ಯಾನಿಶ್ ಕನೇರಿಯಾ , 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕನೇರಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 261 ಟೆಸ್ಟ್ ವಿಕೆಟ್ ಮತ್ತು 15 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.