Danushka Gunathilaka: ಧನುಷ್ಕಾ ಗುಣತಿಲಕ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ದೊಡ್ಡ ತಿರುವು: ಮಹಿಳೆಯಿಂದ ಮತ್ತೊಂದು ಆರೋಪ
TV9 Web | Updated By: Vinay Bhat
Updated on:
Nov 10, 2022 | 11:47 AM
ಐಸಿಸಿ ಟಿ20 ವಿಶ್ವಕಪ್ 2022 ಆಡಲು ಶ್ರೀಲಂಕಾ ಕ್ರಿಕೆಟ್ ತಂಡದ ಪರ ಆಸ್ಟ್ರೇಲಿಯಕ್ಕೆ ತೆರಳಿದ್ದ ಸ್ಟಾರ್ ಬ್ಯಾಟರ್ ದನುಷ್ಕಾ ಗುಣತಿಲಕ ಜೈಲುಪಾಲಾಗಿದ್ದಾರೆ. ಇದರ ನಡುವೆ ದೂರುದಾರೆ ಮಹಿಳೆ ಇದೀಗ ಗುಣತಿಲಕ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.
1 / 7
ಐಸಿಸಿ ಟಿ20 ವಿಶ್ವಕಪ್ 2022 ಆಡಲು ಶ್ರೀಲಂಕಾ ಕ್ರಿಕೆಟ್ ತಂಡದ ಪರ ಆಸ್ಟ್ರೇಲಿಯಕ್ಕೆ ತೆರಳಿದ್ದ ಸ್ಟಾರ್ ಬ್ಯಾಟರ್ ದನುಷ್ಕಾ ಗುಣತಿಲಕ ಜೈಲುಪಾಲಾಗಿದ್ದಾರೆ. ಇದರ ನಡುವೆ ದೂರುದಾರೆ ಮಹಿಳೆ ಇದೀಗ ಗುಣತಿಲಕ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.
2 / 7
ಲೈಂಗಿಕ ದೌರ್ಜನ್ಯದ ಸಂದರ್ಭ ಧನುಷ್ಕಾ ಗುಣತಿಲಕ ತನ್ನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದ, ಇದರಿಂದ ತಾನು ಮೆದುಳಿನ ತಪಾಸಣೆಗೆ ಒಳಗಾಗಬೇಕಾಗಿ ಬಂತು ಎಂದು ದೂರುದಾರೆ ಮಹಿಳೆ ಆರೋಪಿಸಿದ್ದಾಗಿ ವರದಿಯಾಗಿದೆ. ಈ ಆರೋಪ ಸಾಬೀತಾದರೆ 14 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
3 / 7
ಆರೋಪಿಯ ಮಣಿಕಟ್ಟನ್ನು ಹಿಡಿದು ಆತನ ಕೈ ಸರಿಸಲು ಮಹಿಳೆ ಯತ್ನಿಸಿದ್ದಾಳೆ. ಆದರೆ, ಆತ ಕೈಯನ್ನು ಕುತ್ತಿಗೆಗೆ ಬಿಗಿಯಾಗಿ ಹಿಡಿದಿದ್ದ. ತನ್ನ ಪ್ರಾಣಕ್ಕೆ ಕುತ್ತು ಬರಬಹುದೆಂದು ಮಹಿಳೆ ತೀವ್ರ ಆತಂಕಗೊಡಿದ್ದರು. ಪದೇ ಪದೇ ತಪ್ಪಿಸಿಕೊಳ್ಳಲು ಯತ್ನ ನಡೆಸಿರುವುದನ್ನು ಗಮನಸಿದರೆ ಆಕೆಗೆ ಸಮ್ಮತಿ ಇರಲಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.
4 / 7
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 12ಕ್ಕೆ ನಿಗದಿಪಡಿಸಲಾಗಿದೆ. ಸದ್ಯ ಗುಣತಿಲಕ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿಷೇಧ ಹೇರಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಿಂದ ಆಟಗಾರನನ್ನು ಅಮಾನತು ಮಾಡಲಾಗಿದೆ.
5 / 7
ಆನ್ಲೈನ್ನಲ್ಲಿರುವ ಡೇಟಿಂಗ್ ಅಪ್ಲಿಕೇಶನ್ನ ಮೂಲಕ ಅನೇಕ ದಿನಗಳ ಕಾಲ ಗುಣತಿಲಕ ಅವರು ಮಹಿಳೆ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ಅವರು ನವೆಂಬರ್ 2ರ ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿತ್ತು.
6 / 7
ಹೆಚ್ಚಿನ ವಿಚಾರಣೆಗಾಗಿ ಕಳೆದ ಭಾನುವಾರ ಮುಂಜಾನೆ ದನುಷ್ಕಾ ಅವರನ್ನು ಬಂಧಿಸಲಾಗಿತ್ತು. ಅವರನ್ನು ಸಿಡ್ನಿ ಸಿಟಿ ಪೋಲೀಸ್ ಠಾಣೆಗೆ ಕರೆದೊಯ್ಯುದು, ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದ ಆರೋಪವಿತ್ತು. ನಂತರ ಸಿಡ್ನಿಯ ನ್ಯಾಯಾಲಯ ದನುಷ್ಕಾಗೆ ಜಾಮೀನು ಕೂಡ ನಿರಾಕರಿಸಿತ್ತು.
7 / 7
2015ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ದನುಷ್ಕಾ ಗುಣತಿಲಕ ಈ ಬಾರಿ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದರು. ಟಿ20 ವಿಶ್ವಕಪ್ನ ಸೂಪರ್ 12 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ತಂಡ ಸೋತು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು.
Published On - 11:47 am, Thu, 10 November 22