
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಮತ್ಯಾರೂ ಅಲ್ಲ. ಶ್ರೀಲಂಕಾದ ಸ್ಫೋಟಕ ದಾಂಡಿಗ ದಸುನ್ ಶಾನಕ. ಅದು ಕೂಡ ಸಿಡಿಲಬ್ಬರದ ಸೆಂಚುರಿ ಸಿಡುಸುವ ಮೂಲಕ. ಈ ಶತಕದೊಂದಿಗೆ ಸಿಪಿಎಲ್ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ಶಾನಕ ತಮ್ಮದಾಗಿಸಿಕೊಂಡಿದ್ದಾರೆ. (PC: CPL)
ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ಕಣಕ್ಕಿಳಿದ ದಸುನ್ ಶಾನಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸಿಡಿಲಬ್ಬರದೊಂದಿಗೆ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಮೂಲಕ ಸಿಪಿಎಲ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. (PC: CPL)
ಇದಕ್ಕೂ ಮುನ್ನ ಈ ದಾಖಲೆ ಟಿಮ್ ಸೈಫರ್ಟ್, ಶಿಮ್ರಾನ್ ಹೆಟ್ಮೆಯರ್ ಹಾಗೂ ಆ್ಯಂಡ್ರೆ ರಸೆಲ್ ಹೆಸರಿನಲ್ಲಿತ್ತು. ಈ ಮೂವರು ದಾಂಡಿಗರು 40 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದರು. (PC: CPL)
ಇದೀಗ ದಸುನ್ ಶಾನಕ ಅವರ ಆರ್ಭಟದೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿನ 40 ಎಸೆತಗಳ ದಾಖಲೆ ಧೂಳೀಪಟವಾಗಿದೆ. ಕೇವಲ 39 ಎಸೆತಗಳಲ್ಲಿ ಮೂರಂಕಿ ಮೊತ್ತ ಕಲೆಹಾಕುವ ಮೂಲಕ ದಸುನ್ ಶಾನಕ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. (PC: CPL)
ಇನ್ನು ಈ ಪಂದ್ಯದಲ್ಲಿ ಕೇವಲ 43 ಎಸೆತಗಳನ್ನು ಎದುರಿಸಿದ ಶಾನಕ 8 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 121 ರನ್ ಚಚ್ಚಿದರು. ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್ಗಳಲ್ಲಿ 235 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ 13.5 ಓವರ್ಗಳಲ್ಲಿ ಕೇವಲ 98 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪೇಟ್ರಿಯಾಟ್ಸ್ ಪಡೆ 137 ರನ್ಗಳ ಭರ್ಜರಿ ಜಯ ಸಾಧಿಸಿದೆ. (PC: CPL)