David Miller: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಡೇವಿಡ್ ಮಿಲ್ಲರ್
TV9 Web | Updated By: ಝಾಹಿರ್ ಯೂಸುಫ್
Updated on:
Feb 08, 2024 | 9:32 AM
David Miller: ಸೌತ್ ಆಫ್ರಿಕಾ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇದುವರೆಗೆ 121 ಐಪಿಎಲ್ ಪಂದ್ಯಗಳನ್ನಾಡಿರುವ ಕಿಲ್ಲರ್ ಮಿಲ್ಲರ್ ಖ್ಯಾತಿಯ ಡೇವಿಡ್ 2714 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 12 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು.
1 / 6
ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ (David Miller) ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಎಸ್ಎಟಿ20 ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಮಿಲ್ಲರ್ 47 ರನ್ ಬಾರಿಸಿದ್ದರು. ಈ 47 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ಗಳನ್ನು ಪೂರೈಸಿದ್ದಾರೆ.
2 / 6
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಕಲೆಹಾಕಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಡೇವಿಡ್ ಮಿಲ್ಲರ್ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 12ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
3 / 6
ಸೌತ್ ಆಫ್ರಿಕಾ, ಗುಜರಾತ್ ಟೈಟಾನ್ಸ್, ಪಾರ್ಲ್ ರಾಯಲ್ಸ್ ಸೇರಿದಂತೆ ವಿವಿಧ ತಂಡಗಳ ಪರ ಟಿ20 ಕ್ರಿಕೆಟ್ನಲ್ಲಿ ಕಣಕ್ಕಿಳಿದಿರುವ ಡೇವಿಡ್ ಮಿಲ್ಲರ್ ಇದುವರೆಗೆ 423 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 4 ಶತಕ ಹಾಗೂ 45 ಅರ್ಧಶತಕಗಳೊಂದಿಗೆ ಒಟ್ಟು 10019 ರನ್ ಕಲೆಹಾಕಿ 10 ಸಾವಿರ ರನ್ ಪೂರೈಸಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
4 / 6
ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ಪರ ಮತ್ತು ಇತರೆ ಲೀಗ್ಗಳಲ್ಲಿ ಒಟ್ಟು 455 ಪಂದ್ಯಗಳನ್ನಾಡಿರುವ ಗೇಲ್ 22 ಶತಕ ಹಾಗೂ 88 ಅರ್ಧಶತಕಗಳೊಂದಿಗೆ ಒಟ್ಟು 14562 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
5 / 6
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಮತ್ತು ಆರ್ಸಿಬಿ ಪರ ಒಟ್ಟು 359 ಇನಿಂಗ್ಸ್ ಆಡಿರುವ ಕೊಹ್ಲಿ 8 ಶತಕ ಹಾಗೂ 91 ಅರ್ಧಶತಕಗಳೊಂದಿಗೆ 11994 ರನ್ ಕಲೆಹಾಕಿದ್ದಾರೆ.
6 / 6
ಇದೀಗ ಸೌತ್ ಆಫ್ರಿಕಾ ಪರ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಆಗಿ ಡೇವಿಡ್ ಮಿಲ್ಲರ್ ಹೊರಹೊಮ್ಮಿದ್ದಾರೆ. ಅಂದಹಾಗೆ ಮಿಲ್ಲರ್ ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಇನ್ನು 296 ರನ್ಗಳಿಸಿದರೆ ಐಪಿಎಲ್ನಲ್ಲಿ 3 ಸಾವಿರ ರನ್ ಪೂರೈಸಿದ ವಿದೇಶಿ ಬ್ಯಾಟರ್ಗಳ ಪಟ್ಟಿಗೂ ಕಿಲ್ಲರ್ ಮಿಲ್ಲರ್ ಹೆಸರು ಸೇರ್ಪಡೆಯಾಗಲಿದೆ.