ಇದರ ನಡುವೆ ಶಮಿ ಜೀವನಾಧಾರಿತ ಚಿತ್ರ ಬರಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಬಯೋಪಿಕ್ ಕುರಿತ ಪ್ರಶ್ನೆಗೆ ಉತ್ತರಿಸಿದ ಶಮಿ, ''ಹೌದು, ನನ್ನ ಬಯೋಪಿಕ್ ಕೂಡ ಬರುತ್ತಿದೆ. ನಟ ಸಿಗದಿದ್ದರೆ ಕ್ರಿಕೆಟ್ ಬಿಟ್ಟು ನನ್ನದೇ ಬಯೋಪಿಕ್ನಲ್ಲಿ ಕೆಲಸ ಮಾಡುತ್ತೇನೆ,'' ಎಂದು ಹೇಳಿದ್ದಾರೆ.