- Kannada News Photo gallery Cricket photos Deepti Sharma has achieved the elusive feat of taking 100 wickets in T20Is INDW vs WIW T20 World Cup
Deepthi Sharma: ಕ್ರಿಕೆಟ್ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ ದೀಪ್ತಿ ಶರ್ಮಾ: ಪುರುಷರಿಗೂ ಸಾಧ್ಯವಾಗಿಲ್ಲ ಈ ಸಾಧನೆ
India Women vs West Indies Women: ದೀಪ್ತಿ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ಗಳನ್ನು ಮಾತ್ರ ನೀಡಿ 3 ವಿಕೆಟ್ ಕಿತ್ತರು. ಈ ಮೂಲಕ ಟಿ20 ಅಂತರರಾಷ್ಟ್ರೀಯ ಮಾದರಿಯ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು.
Updated on:Feb 16, 2023 | 7:08 AM

ದಕ್ಷಿಣ ಅಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ರಲ್ಲಿ ಭಾರತೀಯ ವನಿತೆಯರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ಹರ್ಮನ್ಪ್ರೀತ್ ಕೌರ್ ಪಡೆ ಗ್ರೂಪ್ ಬಿಯ ಪಾಯಿಂಟ್ ಟೇಬಲ್ನಲ್ಲಿ 4 ಪಾಯಿಂಟ್ನೊಂದಿಗೆ ರನ್ರೇಟ್ ಆಧಾರದ ಮೇಲೆ ದ್ವಿತೀಯ ಸ್ಥಾನದಲ್ಲಿದೆ.

ಬುಧವಾರ ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ನಡೆದ ಪಂದ್ಯದಲ್ಲೂ ಟೀಮ್ ಇಂಡಿಯಾ ಬೊಂಬಾಟ್ ಪ್ರದರ್ಶನ ತೋರಿ 6 ವಿಕೆಟ್ಗಳ ಗೆಲುವು ಸಾಧಿಸಿತು. ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿದ ಕೆರಿಬಿಯನ್ನರು ಅಲ್ಪ ಮೊತ್ತವನ್ನಷ್ಟೆ ಕಲೆಹಾಕಿದರು. ಬಿಗಿ ದಾಳಿ ನಡೆಸಿದ ದೀಪ್ತಿ ಕ್ರಿಕೆಟ್ ಲೋಕದಲ್ಲಿ ಇತಿಹಾಸವನ್ನು ಕೂಡ ಸೃಷ್ಟಿಸಿದರು.

ದೀಪ್ತಿ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ಗಳನ್ನು ಮಾತ್ರ ನೀಡಿ 3 ವಿಕೆಟ್ ಕಿತ್ತರು. ಈ ಮೂಲಕ ಟಿ20 ಅಂತರರಾಷ್ಟ್ರೀಯ ಮಾದರಿಯ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ವಿಶೇಷ ಎಂದರೆ ಭಾರತ ಪರ ಟಿ20ಐ ಕ್ರಿಕೆಟ್ನಲ್ಲಿ ಶತಕದ ವಿಕೆಟ್ ಪಡೆದ ಮೊದಲ ಪ್ಲೇಯರ್ ಇವರಾಗಿದ್ದಾರೆ. ಪುರುಷರ ತಂಡದಲ್ಲೂ ಈ ಸಾಧನೆಯನ್ನು ಯಾರೂ ಮಾಡಿಲ್ಲ.

ಇದಿಷ್ಟೆ ಅಲ್ಲದೆ ಭಾರತ ಪರ ಇದುವರೆಗೆ ಗರಿಷ್ಠ ವಿಕೆಟ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ಪೂನಮ್ ಯಾದವ್ (98 ವಿಕೆಟ್ 72 ಪಂದ್ಯ) ಅವರನ್ನೂ ದೀಪ್ತಿ ಹಿಂದಿಕ್ಕಿದ್ದಾರೆ. ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪಟ್ಟಿಯ ಮೂರನೇ ಸ್ಥಾನದಲ್ಲಿ 75 ಪಂದ್ಯಗಳಿಂದ 91 ವಿಕೆಟ್ ಪಡೆದು ಯುಜ್ವೇಂದ್ರ ಚಹಲ್ ಇದ್ದಾರೆ. ನಂತರದ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ 90 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 2ನೇ ಓವರ್ನಲ್ಲಿ ಪೂಜಾ ವಸ್ತ್ರಾಕರ್ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ನಾಯಕಿ ಹೇಲೆ ಮ್ಯಾಥ್ಯೂಸ್ 2 ರನ್ಗೆ ಔಟಾದರು.

ಆದರೆ, 2ನೇ ವಿಕೆಟ್ಗೆ ಜೊತೆಯಾದ ಎಸ್ ಟೇಲರ್ (42) ಹಾಗೂ ಎಸ್ ಕ್ಯಾಂಪ್ಬೆಲ್ಲೆ (30) 73 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಧಾರವಾಗಿ ನಿಂತರು. ಇವರಿಬ್ಬರ ನಿರ್ಗಮನದ ಬಳಿಕ ವಿಂಡೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.ಆದರೆ, 2ನೇ ವಿಕೆಟ್ಗೆ ಜೊತೆಯಾದ ಎಸ್ ಟೇಲರ್ (42) ಹಾಗೂ ಎಸ್ ಕ್ಯಾಂಪ್ಬೆಲ್ಲೆ (30) 73 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಧಾರವಾಗಿ ನಿಂತರು. ಇವರಿಬ್ಬರ ನಿರ್ಗಮನದ ಬಳಿಕ ವಿಂಡೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.

ದೀಪ್ತಿ ಶರ್ಮಾ ಬೌಲಿಂಗ್ ದಾಳಿಯನ್ನು ಎದುರಿಸಲು ವೆಸ್ಟ್ ಇಂಡೀಸ್ ಮಹಿಳೆಯರು ವಿಫಲರಾದರು. ಚೇಡಿಯನ್ ನೆಶನ್ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ಗಳಿಸಲಷ್ಟೇ ಶಕ್ತರಾದರು. ಭಾರತ ಪರ ದೀಪ್ತಿ 3 ವಿಕೆಟ್ ಹಾಗೂ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಪಡೆದರು.

119 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾದ ಶಫಾಲಿ ವರ್ಮಾ 28 ರನ್ ಬಾರಿಸಿದರೆ, ಸ್ಮೃತಿ ಮಂಧಾನ 10 ರನ್ಗಳಿಸಿ ಔಟಾದರು. ಆ ಬಳಿಕ ಬಂದ ಜೆಮಿಮಾ 1 ರನ್ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಹರ್ಮನ್ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

42 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಹರ್ಮನ್ಪ್ರೀತ್ ಕೌರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ, ರಿಷಾ ಘೋಷ್ 32 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಅದರಂತೆ ಭಾರತ ಮಹಿಳಾ ತಂಡ 18.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಬಾರಿಸುವ ಮೂಲಕ ಜಯ ಸಾಧಿಸಿತು.
Published On - 7:08 am, Thu, 16 February 23



















