IPL 2021: ವೈಯಕ್ತಿಕ ಬದುಕಿನಲ್ಲಿ ಅಲ್ಲೋಲ ಕಲ್ಲೋಲ; ವೃತ್ತಿಜೀವನದಲ್ಲಿ ಧವನ್​ ಬ್ಯಾಟಿಂಗ್​ಗಿಲ್ಲ ಸರಿಸಾಟಿ

Edited By:

Updated on: Sep 23, 2021 | 3:48 PM

IPL 2021: ಧವನ್ ಇನ್ನೂ ಆರೆಂಜ್ ಕ್ಯಾಪ್ ರೇಸ್ ನಲ್ಲಿದ್ದಾರೆ. ಧವನ್ ಈ ಋತುವಿನಲ್ಲಿ ಕೇವಲ ಒಂಬತ್ತು ಪಂದ್ಯಗಳಲ್ಲಿ 400 ರನ್ ಗಡಿ ದಾಟಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

1 / 7
ಯಾವುದೇ ಆಟಗಾರ ತನ್ನ ಪ್ರದರ್ಶನದಲ್ಲಿ ಸ್ಥಿರತೆಯನ್ನು ಹೊಂದಿದ್ದರೆ, ಅವನನ್ನು ಉತ್ತಮ ಬ್ಯಾಟ್ಸ್‌ಮನ್ ಅಥವಾ ಬೌಲರ್ ಎಂದು ಕರೆಯಲಾಗುತ್ತದೆ. ಸತತ ಹಲವು ವರ್ಷಗಳಿಂದ ತಮ್ಮ ಬ್ಯಾಟ್​ನಿಂದ ರನ್ ಮಳೆ ಸುರಿಸುತ್ತಿರುವ ಮತ್ತು ಉತ್ತಮ ಪ್ರದರ್ಶನ ನೀಡುತ್ತಿರುವ ಕೆಲವೇ ಕೆಲವು ಆಟಗಾರರಿದ್ದಾರೆ. ಐಪಿಎಲ್‌ನಲ್ಲಿ ಒಬ್ಬ ಆಟಗಾರನಿದ್ದಾನೆ, ಅವನು ತನ್ನ ಪ್ರದರ್ಶನದಿಂದ ಎಲ್ಲರನ್ನೂ ನಿರಂತರವಾಗಿ ಅಚ್ಚರಿಗೊಳಿಸುತ್ತಿದ್ದಾನೆ. ವಯಸ್ಸಾದಂತೆ ಅವನ ಬ್ಯಾಟ್‌ ಹೆಚ್ಚು ಅಬ್ಬರಿಸುತ್ತಿದೆ. ಈ ಆಟಗಾರನ ಹೆಸರು ಶಿಖರ್ ಧವನ್ ... ಐಪಿಎಲ್​ನಲ್ಲಿ ಧವನ್ 2016 ರಿಂದ ನಿರಂತರವಾಗಿ ತನ್ನ ಬ್ಯಾಟ್​ನಿಂದ ಮ್ಯಾಜಿಕ್ ತೋರಿಸುತ್ತಿದ್ದಾರೆ ಮತ್ತು ಪ್ರತಿ ಸೀಸನ್​ನಲ್ಲೂ ನಿರಂತರವಾಗಿ 400 ರನ್ ಗಡಿ ದಾಟುತ್ತಿದ್ದಾರೆ.

2 / 7

ಧವನ್ ಐಪಿಎಲ್ 2016 ರಲ್ಲಿ ಒಟ್ಟು 17 ಪಂದ್ಯಗಳನ್ನು ಆಡಿದ್ದಾರೆ ಮತ್ತು 38.53 ಸರಾಸರಿಯಲ್ಲಿ 501 ರನ್ ಗಳಿಸಿದ್ದಾರೆ. ಧವನ್ ಈ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದರು ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದರು. 2016 ರಲ್ಲಿ ಸನ್ ರೈಸರ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿಯನ್ನು ತಂಡ ಸೋಲಿಸಿತು.

3 / 7

ಐಪಿಎಲ್ 2017 ರಲ್ಲಿ, ಧವನ್ 14 ಪಂದ್ಯಗಳನ್ನು ಆಡಿದ್ದಾರೆ ಮತ್ತು 36.84 ಸರಾಸರಿಯಲ್ಲಿ 479 ರನ್ ಗಳಿಸಿದ್ದಾರೆ. ಧವನ್ ಈ ಋತುವಿನಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 77.

4 / 7

2018 ರಲ್ಲಿ, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್ ಇರಲಿಲ್ಲ. ಆದರೆ ತಂಡವು ಫೈನಲ್ ತಲುಪಿತು. ಇಲ್ಲಿ ಮತ್ತೊಮ್ಮೆ, ಧವನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಋತುವಿನಲ್ಲಿ, ಧವನ್ ಬ್ಯಾಟಿನಿಂದ 16 ಪಂದ್ಯಗಳಲ್ಲಿ 497 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿದ್ದವು. ಧವನ್ ಈ ಋತುವಿನಲ್ಲಿ ಸರಾಸರಿ 38.23 ರಲ್ಲಿ ರನ್ ಗಳಿಸಿದ್ದಾರೆ.

5 / 7

ಧವನ್ 2019 ರಲ್ಲಿ ತಂಡವನ್ನು ಬದಲಾಯಿಸಿದರು. ಧವನ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ಖರೀದಿಸಿತು. ಸುದೀರ್ಘ ಸಮಯದ ನಂತರ ದೆಹಲಿ ಪ್ಲೇಆಫ್‌ಗೆ ಪ್ರವೇಶ ಪಡೆಯಿತು. ಧವನ್ ಈ ಋತುವಿನಲ್ಲಿ 16 ಪಂದ್ಯಗಳಲ್ಲಿ 521 ರನ್ ಗಳಿಸಿದ್ದರು. ಅವರ ಬ್ಯಾಟ್‌ನಿಂದ ಐದು ಅರ್ಧಶತಕಗಳು ಬಂದವು.

6 / 7

2020 ರಲ್ಲಿ, ದೆಹಲಿ ತನ್ನ ಮೊದಲ ಐಪಿಎಲ್ ಫೈನಲ್ ಆಡಿತು. ಸಹಜವಾಗಿ, ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲೆದುರಿಸಿತು, ಆದರೆ ಧವನ್ ಬ್ಯಾಟ್ ಅಲ್ಲಿಯೂ ಮಿಂಚಿತು. ಎಡಗೈ ಆಟಗಾರ 17 ಪಂದ್ಯಗಳಲ್ಲಿ 44.14 ಸರಾಸರಿಯಲ್ಲಿ 618 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಧವನ್ ಬ್ಯಾಟ್​ನಿಂದ ಎರಡು ಶತಕಗಳು ಬಂದಿವೆ. ಅವರು ನಾಲ್ಕು ಅರ್ಧಶತಕಗಳನ್ನು ಕೂಡ ಗಳಿಸಿದರು.

7 / 7

ಐಪಿಎಲ್ 2021 ಎರಡನೇ ಹಂತ ಆರಂಭವಾಗಿದೆ. ಧವನ್ ಇನ್ನೂ ಆರೆಂಜ್ ಕ್ಯಾಪ್ ರೇಸ್ ನಲ್ಲಿದ್ದಾರೆ. ಧವನ್ ಈ ಋತುವಿನಲ್ಲಿ ಕೇವಲ ಒಂಬತ್ತು ಪಂದ್ಯಗಳಲ್ಲಿ 400 ರನ್ ಗಡಿ ದಾಟಿದ್ದಾರೆ. ಧವನ್ 422 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಇನ್ನೂ ಸೀಸನ್ ಬಾಕಿ ಇದೆ ಮತ್ತು ದೆಹಲಿಗೆ ಇನ್ನೂ ಆರು ಪಂದ್ಯಗಳು ಬಾಕಿ ಉಳಿದಿವೆ. ಈ ಬಾರಿ ಆರೆಂಜ್ ಕ್ಯಾಪ್ ಪಡೆಯುವಲ್ಲಿ ಧವನ್ ಯಶಸ್ವಿಯಾಗುತ್ತಾರೆಯೇ ಎಂದು ನೋಡಬೇಕು.

Loading...
Unable to load recommendations.
Follow Us