
ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ ನೂರ ನಲವತ್ತೆಂಟು ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ ನ್ಯೂಝಿಲೆಂಡ್ ತಂಡದ ಆರಂಭಿಕರಾದ ಡೆವೊನ್ ಕಾನ್ವೆ (Devon Conway) ಹಾಗೂ ಟಾಮ್ ಲ್ಯಾಥಮ್ (Tom Latham).

ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಡೆವೊನ್ ಕಾನ್ವೆ ಹಾಗೂ ಟಾಮ್ ಲ್ಯಾಥಮ್ ಭರ್ಜರಿ ಸೆಂಚುರಿಗಳನ್ನು ಸಿಡಿಸಿದ್ದಾರೆ. ಅದು ಕೂಡ ಎರಡೂ ಇನಿಂಗ್ಸ್ಗಳಲ್ಲಿ ಎಂಬುದು ವಿಶೇಷ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಡೆವೊನ್ ಕಾನ್ವೆ 227 ರನ್ ಬಾರಿಸಿದರೆ, ಟಾಮ್ ಲ್ಯಾಥಮ್ 137 ರನ್ ಸಿಡಿಸಿದ್ದರು. ಅಲ್ಲದೆ ಮೊದಲ ವಿಕೆಟ್ಗೆ 323 ರನ್ಗಳ ಜೊತೆಯಾಟವನ್ನಾಡಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟಾಮ್ ಲ್ಯಾಥಮ್ 101 ರನ್ ಕಲೆಹಾಕಿದರೆ, ಡೆವೊನ್ ಕಾನ್ವೆ 100 ರನ್ ಬಾರಿಸಿದ್ದಾರೆ.

ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಎರಡೂ ಇನಿಂಗ್ಸ್ಗಳಲ್ಲೂ ಶತಕ ಸಿಡಿಸಿದ ವಿಶ್ವದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಅಂದರೆ ಟೆಸ್ಟ್ನಲ್ಲಿ ಯಾವುದೇ ಆರಂಭಿಕ ಜೋಡಿ ಎರಡೂ ಇನಿಂಗ್ಸ್ಗಳಲ್ಲಿ ಸೆಂಚುರಿ ಬಾರಿಸಿದ ನಿದರ್ಶನವಿರಲಿಲ್ಲ.

ಇದೀಗ 147 ವರ್ಷಗಳ ಬಳಿಕ ಡೆವೊನ್ ಕಾನ್ವೆ ಹಾಗೂ ಟಾಮ್ ಲ್ಯಾಥಮ್ ಟೆಸ್ಟ್ ಪಂದ್ಯವೊಂದರಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿಗಳನ್ನು ಸಿಡಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಎರಡೂ ಇನಿಂಗ್ಸ್ಗಳಲ್ಲೂ ಶತಕ ಬಾರಿಸಿದ ವಿಶ್ವದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.