
Duleep Trophy 2023: ದೇಶೀಯ ಅಂಗಳದ ಟೆಸ್ಟ್ ಕದನ ದುಲೀಪ್ ಟ್ರೋಫಿಗಾಗಿ 6 ತಂಡಗಳನ್ನು ಪ್ರಕಟಿಸಲಾಗಿದೆ. ಜೂನ್ 28 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಆರು ವಲಯಗಳಿಂದ ತಲಾ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಅದರಂತೆ ಪೂರ್ವ ವಲಯವನ್ನು ಅಭಿಮನ್ಯು ಈಶ್ವರನ್ ಮುನ್ನಡೆಸಿದರೆ, ಪಶ್ಚಿಮ ವಲಯ ತಂಡದ ನಾಯಕರಾಗಿ ಪ್ರಿಯಾಂಕ್ ಪಾಂಚಾಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉತ್ತರ ವಲಯದ ನಾಯಕರಾಗಿ ಮನ್ದೀಪ್ ಸಿಂಗ್ ಆಯ್ಕೆಯಾದರೆ, ಕೇಂದ್ರ ವಲಯವನ್ನು ಶಿವಂ ಮಾವಿ ಮುನ್ನಡೆಸಲಿದ್ದಾರೆ.

ಈಶಾನ್ಯ ವಲಯ ತಂಡಕ್ಕೆ ರೊಂಗ್‌ಸೆನ್ ಜೊನಾಥನ್ ನಾಯಕರಾಗಿ ಆಯ್ಕೆಯಾದರೆ, ದಕ್ಷಿಣ ವಲಯದ ಕ್ಯಾಪ್ಟನ್ ಆಗಿ ಹುನುಮ ವಿಹಾರಿ ಕಾಣಿಸಿಕೊಳ್ಳಿದ್ದಾರೆ. ಅದರಂತೆ ಈ ಬಾರಿ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ 6 ತಂಡಗಳು ಈ ಕೆಳಗಿನಂತಿವೆ.

ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಂತಾನು ಮಿಶ್ರಾ, ಸುದೀಪ್ ಘರಾಮಿ, ರಿಯಾನ್ ಪರಾಗ್, ಎ. ಮಜುಂದಾರ್, ಬಿಪಿನ್ ಸೌರಭ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆ ಕುಶಾಗ್ರಾ (ವಿಕೆಟ್ ಕೀಪರ್), ಶಹಬಾಝ್ ನದೀಮ್ (ಉಪನಾಯಕ), ಶಹಬಾಝ್ ಅಹ್ಮದ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅನುಕುಲ್ ರಾಯ್, ಎಂ ಮುರಾ ಸಿಂಗ್, ಇಶಾನ್ ಪೊರೆಲ್.

ಪಶ್ಚಿಮ ವಲಯ: ಪ್ರಿಯಾಂಕ್ ಪಾಂಚಾಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಪೃಥ್ವಿ ಶಾ, ಹೆಟ್ ಪಟೇಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಅರ್ಪಿತ್ ವಾಸವಾಡ, ಅತಿತ್ ಸೇಠ್, ಶಮ್ಸ್ ಮುಲಾನಿ, ಯುವರಾಜ್ ದೊದಿಯಾ, ಚೆತನ್ ಸಕರಿಯಾ,ಧರ್ಮೇಂದ್ರ ಜಡೇಜಾ , ಚಿಂತನ್ ಗಜ, ಅರ್ಜಾನ್ ನಾಗವಾಸವಲ್ಲ.

ಉತ್ತರ ವಲಯ: ಮನ್ದೀಪ್ ಸಿಂಗ್ (ನಾಯಕ), ಪ್ರಶಾಂತ್ ಚೋಪ್ರಾ, ಧ್ರುವ ಶೋರೆ, ಮನನ್ ವೋಹ್ರಾ, ಪ್ರಭ್ಸಿಮ್ರಾನ್ ಸಿಂಗ್, ಅಂಕಿತ್ ಕುಮಾರ್, ಎಎಸ್ ಕಲ್ಸಿ, ಹರ್ಷಿತ್ ರಾಣಾ, ಅಬಿದ್ ಮುಷ್ತಾಕ್, ಜಯಂತ್ ಯಾದವ್, ಪುಲ್ಕಿತ್ ನಾರಂಗ್, ನಿಶಾಂತ್ ಸಂಧು, ಸಿದ್ಧಾರ್ಥ್ ಕೌಲ್, ವೈಭವ್ ಅರೋರಾ, ಬಾಲ್ತೇಜ್ ಸಿಂಗ್.

ಕೇಂದ್ರ ವಲಯ: ಶಿವಂ ಮಾವಿ (ನಾಯಕ), ವಿವೇಕ್ ಸಿಂಗ್, ಹಿಮಾಂಶು ಮಂತ್ರಿ, ಕುನಾಲ್ ಚಂಡೇಲಾ, ಶುಭಂ ಶರ್ಮಾ, ಅಮನದೀಪ್ ಖರೆ, ರಿಂಕು ಸಿಂಗ್, ಅಕ್ಷಯ್ ವಾಡ್ಕರ್, ಉಪೇಂದ್ರ ಯಾದವ್ (ಉಪನಾಯಕ), ಧ್ರುವ್ ಜುರೆಲ್, ಸೌರಭ್ ಕುಮಾರ್, ಮಾನವ್ ಸತಾರ್, ಸರನ್ಶ್ ಜೈನ್, ಅವೇಶ್ ಖಾನ್ , ಯಶ್ ಠಾಕೂರ್.

ಈಶಾನ್ಯ ವಲಯ: ರೊಂಗ್‌ಸೆನ್ ಜೊನಾಥನ್ (ನಾಯಕ), ನೀಲೇಶ್ ಲಾಮಿಚಾನೆ (ಉಪನಾಯಕ), ಕಿಶನ್ ಲಿಂಗ್ಡೋಹ್, ಲ್ಯಾಂಗ್ಲೋನ್ಯಾಂಬಾ, ಎಆರ್ ಅಹ್ಲಾವತ್, ಜೋಸೆಫ್ ಲಾಲ್‌ಥಾನ್‌ಖುಮಾ, ಪ್ರಫುಲ್ಲಮಣಿ (ವಿಕೆಟ್‌ಕೀಪರ್), ದಿಪ್ಪು ಸಂಗ್ಮಾ, ಜೋತಿನ್ ಫೀರೋಯಿಜಮ್, ಇಮ್ಲಿವತಿ ಸಿನ್ಹಾಂಗ್, ಕಿಶೋರ್ ಸಿನ್ಹಾ, ಪಲ್ಝೊರ್ ತಮಂಗ್, ಆಕಾಶ್ ಚೌಧರಿ, ರಾಜ್‌ಕುಮಾರ್ ರೆಕ್ಸ್ ಸಿಂಗ್, ನಾಗಹೊ ಚಿಶಿ.

ದಕ್ಷಿಣ ವಲಯ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ಸಾಯಿ ಸುದರ್ಶನ್, ರಿಕಿ ಭುಯಿ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಕುಮಾರ್ ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿಧ್ವತ್ ಕಾವೇರಪ್ಪ, ವಿಜಯಕುಮಾರ್ ವೈಶಾಕ್, ಕೆವಿ ಸಸಿಕಾಂತ್, ದರ್ಶನ್ ಮಿಸಾಲ್ ಮತ್ತು ತಿಲಕ್ ವರ್ಮಾ.

ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯು ಜೂನ್ 28 ರಿಂದ ಶುರುವಾಗಲಿದ್ದು, ಜುಲೈ 12-16 ರವರೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.