AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy: ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ ಪ್ರಕಟ; ಮಯಾಂಕ್​ಗೆ ಉಪನಾಯಕತ್ವ

Duleep Trophy: ಕ್ಷಿಣ ವಲಯ ತಂಡದ ನಾಯಕತ್ವವನ್ನು ಹನುಮ ವಿಹಾರಿಗೆ ವಹಿಸಲಾಗಿದ್ದು, ಮಯಾಂಕ್ ಅಗರ್ವಾಲ್ ಉಪನಾಯಕನಾಗಿ ಆಡಲಿದ್ದಾರೆ.

ಪೃಥ್ವಿಶಂಕರ
|

Updated on:Jun 14, 2023 | 1:37 PM

Share
ಇದೇ ತಿಂಗಳ 28 ರಂದು ದುಲೀಪ್ ಟ್ರೋಫಿಯ ಆರಂಭದೊಂದಿಗೆ ಭಾರತ ಕ್ರಿಕೆಟ್​ನ ಹೊಸ ದೇಶಿ ಸೀಸನ್​ ಕೂಡ ಆರಂಭವಾಗುತ್ತಿದೆ. ದುಲೀಪ್ ಟ್ರೋಫಿಯಲ್ಲಿ ಎಂದಿನಂತೆ ಆರು ವಲಯಗಳಾದ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ, ಮಧ್ಯ ಮತ್ತು ಈಶಾನ್ಯ ತಂಡಗಳು ಸ್ಪರ್ಧಿಸುತ್ತಿವೆ.

1 / 6
ಹಿಂದಿನ ಆವೃತ್ತಿಯ ಫೈನಲಿಸ್ಟ್‌ಗಳಾದ ದಕ್ಷಿಣ ಮತ್ತು ಪಶ್ಚಿಮ ವಲಯ ತಂಡಗಳು ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದಿದ್ದು, ಲೀಗ್ ಹಂತದಲ್ಲಿ ಗೆದ್ದು ಬಂದ ತಂಡಗಳು ಈ ಎರಡೂ ತಂಡಗಳ ವಿರುದ್ಧ ಸೆಮಿಸ್​ನಲ್ಲಿ ಸೆಣಸಲಿವೆ. ಇದೀಗ ಈ ಪಂದ್ಯಾವಳಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾದಲ್ಲಿ ಆಡಿದ ಕೆಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2 / 6
ಇನ್ನು ದಕ್ಷಿಣ ವಲಯ ತಂಡದ ನಾಯಕತ್ವವನ್ನು ಹನುಮ ವಿಹಾರಿಗೆ ವಹಿಸಲಾಗಿದ್ದು, ಮಯಾಂಕ್ ಅಗರ್ವಾಲ್ ಉಪನಾಯಕನಾಗಿ ಆಡಲಿದ್ದಾರೆ. ಹಾಗೆಯೇ ಡಬ್ಲ್ಯುಟಿಸಿ ಫೈನಲ್​ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಕೆಎಸ್ ಭರತ್ ಕೂಡ ಸ್ಥಾನ ಪಡೆದಿದ್ದಾರೆ.

3 / 6
ಇತರ ಆಟಗಾರರ ಪೈಕಿ, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಅದ್ಭುತ ಬ್ಯಾಟಿಂಗ್ ಮಾಡಿದ್ದ ತಿಲಕ್ ವರ್ಮಾ, ಗುಜರಾತ್ ಟೈಟಾನ್ಸ್‌ ಪರ ಫೈನಲ್​ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಸಾಯಿ ಸುದರ್ಶನ್ ಮತ್ತು ಆರ್​ಸಿಬಿ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿದ್ದ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

4 / 6
ಹಾಗೆಯೇ ಸ್ಪಿನ್ ಆಲ್​ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ದಕ್ಷಿಣ ವಲಯದ ಪರ ಆಡಲಿದ್ದಾರೆ. ಇವರನ್ನು ಹೊರತುಪಡಿಸಿ ವೈಶಾಕ್, ಮತ್ತೊಬ್ಬ ಕನ್ನಡಿಗ ವಿದ್ವತ್ ಕಾವೇರಪ್ಪ ಮತ್ತು ಆರ್. ಸಾಯಿ ಕಿಶೋರ್ ದಕ್ಷಿಣ ವಲಯದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.

5 / 6
ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ರಿಕಿ ಭುಯಿ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಫರ್), ಆರ್. ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿ. ಕಾವೇರಪ್ಪ, ವೈಶಾಕ್ ವಿಜಯ್​ಕುಮಾರ್, ಕೆವಿ ಶಶಿಕಾಂತ್, ದರ್ಶನ್ ಮಿಸಾಲ್ ಮತ್ತು ತಿಲಕ್ ವರ್ಮ.

6 / 6

Published On - 1:37 pm, Wed, 14 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ