Joe Root: ಹೊಸ ದಾಖಲೆಯ ಹೊಸ್ತಿಲಲ್ಲಿ ಜೋ ರೂಟ್
ENG vs SL 2024: ಇಂಗ್ಲೆಂಡ್ ಮತ್ತು ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ಸಜ್ಜಾಗಿದೆ. ಈ ಸರಣಿಯ ಮೊದಲ ಪಂದ್ಯವು ಇಂದು ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ. ಇನ್ನು ದ್ವಿತೀಯ ಟೆಸ್ಟ್ ಪಂದ್ಯವು ಆಗಸ್ಟ್ 29 ರಿಂದ ಶುರುವಾದರೆ, ಮೂರನೇ ಟೆಸ್ಟ್ ಸೆಪ್ಟೆಂಬರ್ 6 ರಿಂದ ಆರಂಭವಾಗಲಿದೆ. ಈ ಮೂರು ಟೆಸ್ಟ್ ಪಂದ್ಯಗಳ ಮೂಲಕ ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸುವ ಇರಾದೆಯಲ್ಲಿದ್ದಾರೆ ಜೋ ರೂಟ್.
1 / 5
ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಇಂದಿನಿಂದ (ಆ. 21) ಶುರುವಾಗಲಿದೆ. ಈ ಸರಣಿಯ ಇಂಗ್ಲೆಂಡ್ ಪರ ಹೊಸ ದಾಖಲೆ ಬರೆಯುವ ಅವಕಾಶ ಜೋ ರೂಟ್ ಮುಂದಿದೆ. ಅಂದರೆ ಈ ಸರಣಿಯಲ್ಲಿ ರೂಟ್ 446 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
2 / 5
ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿದೆ. 161 ಟೆಸ್ಟ್ ಪಂದ್ಯಗಳಲ್ಲಿ 291 ಇನಿಂಗ್ಸ್ ಆಡಿರುವ ಕುಕ್ 26562 ಎಸೆತಗಳನ್ನು ಎದುರಿಸಿ 12472 ರನ್ ಬಾರಿಸಿದ್ದಾರೆ. ಈ ವೇಳೆ 33 ಶತಕ ಹಾಗೂ 57 ಅರ್ಧಶತಕಗಳನ್ನು ಸಿಡಿಸಿದ್ದಾರೆ.
3 / 5
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಜೋ ರೂಟ್. ಇಂಗ್ಲೆಂಡ್ ಪರ 143 ಟೆಸ್ಟ್ ಪಂದ್ಯಗಳಲ್ಲಿ 261 ಇನಿಂಗ್ಸ್ ಆಡಿರುವ ರೂಟ್ 21207 ಎಸೆತಗಳನ್ನು ಎದುರಿಸಿ 12027 ರನ್ ಕಲೆಹಾಕಿದ್ದಾರೆ. ಈ ವೇಳೆ 32 ಶತಕ ಹಾಗೂ 63 ಅರ್ಧಶತಕಗಳನ್ನು ಬಾರಿಸಿದ್ದಾರೆ.
4 / 5
ಇದೀಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಜೋ ರೂಟ್ 446 ರನ್ ಕಲೆಹಾಕುವಲ್ಲಿ ಯಶಸ್ವಿಯಾದರೆ, ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಆಂಗ್ಲರ ಪರ ಟೆಸ್ಟ್ ಕ್ರಿಕೆಟ್ನ ರನ್ ಸರದಾರ ಎನಿಸಿಕೊಳ್ಳಲು ರೂಟ್ಗೆ ಕೇವಲ 446 ರನ್ಗಳ ಅವಶ್ಯಕತೆಯಿದೆ.
5 / 5
ಹಾಗೆಯೇ ಈ ಸರಣಿಯಲ್ಲಿ ಜೋ ರೂಟ್ 1 ಶತಕ ಸಿಡಿಸಿದರೆ, ಟೆಸ್ಟ್ನಲ್ಲಿ ಇಂಗ್ಲೆಂಡ್ನ ಪರ ಅತೀ ಹೆಚ್ಚು ಸೆಂಚುರಿ ಬಾರಿಸಿದ ಅಲಿಸ್ಟರ್ ಕುಕ್ (33) ಅವರ ದಾಖಲೆಯನ್ನು ಸರಿಗಟ್ಟಬಹುದು. ಇನ್ನು ರೂಟ್ ಬ್ಯಾಟ್ನಿಂದ ಎರಡು ಶತಕಗಳು ಮೂಡಿಬಂದರೆ ಟೆಸ್ಟ್ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಲಂಕಾ ವಿರುದ್ಧದ ಸರಣಿಯ ಮೂಲಕ ಇಂಗ್ಲೆಂಡ್ ಪರ ಹೊಸ ಇತಿಹಾಸ ನಿರ್ಮಿಸುವ ಅವಕಾಶ ಜೋ ರೂಟ್ ಮುಂದಿದೆ.
Published On - 2:54 pm, Wed, 21 August 24