- Kannada News Photo gallery Cricket photos Adam Gilchrist names top 3 wicketkeeper batters includes Dhoni kannada news
Adam Gilchrist: ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ ಆಡಮ್ ಗಿಲ್‌ಕ್ರಿಸ್ಟ್
Adam Gilchrist: ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಡಮ್ ಗಿಲ್‌ಕ್ರಿಸ್ಟ್, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ್ದಾರೆ. ಗಿಲ್‌ಕ್ರಿಸ್ಟ್ ಪ್ರಕಾರ, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಗಿದ್ದರೆ, ಇನ್ನಿಬ್ಬರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ಗಳಾಗಿದ್ದಾರೆ.
Updated on: Aug 21, 2024 | 5:22 PM

ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಡಮ್ ಗಿಲ್‌ಕ್ರಿಸ್ಟ್, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ್ದಾರೆ. ಗಿಲ್‌ಕ್ರಿಸ್ಟ್ ಪ್ರಕಾರ, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಗಿದ್ದರೆ, ಇನ್ನಿಬ್ಬರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ಗಳಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಕೇಳಿದ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಡಮ್ ಗಿಲ್‌ಕ್ರಿಸ್ಟ್, ಮೊದಲನೆಯದಾಗಿ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಅವರನ್ನು ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಬಣ್ಣಿಸಿದ್ದಾರೆ.

ಆ ನಂತರ ಎರಡನೇ ಸ್ಥಾನವನ್ನು ಟೀಂ ಇಂಡಿಯಾದ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿದ್ದು, ಧೋನಿ ವಿಶ್ವದ ಎರಡನೇ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಗಿಲ್‌ಕ್ರಿಸ್ಟ್ ಬಣ್ಣಿಸಿದ್ದಾರೆ. ಹಾಗೆಯೇ ಮೂರನೇ ಸ್ಥಾನವನ್ನು ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್ ಕುಮಾರ್ ಸಂಗಕ್ಕಾರ ಅವರಿಗೆ ನೀಡಿದ್ದಾರೆ.

ತನ್ನ ಆಯ್ಕೆಯ ಬಗ್ಗೆ ವಿವರಣೆಗಳನ್ನೂ ನೀಡಿರುವ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಅವರನ್ನು ತನ್ನ ಆರಾಧ್ಯ ದೈವ ಎಂದು ಬಣ್ಣಿಸಿದ್ದು, ನಾನು ಕೂಡ ರಾಡ್ನಿ ಮಾರ್ಷ್‌ನಂತೆ ಆಗಲು ಬಯಸಿದ್ದಾಗಿ ಗಿಲ್‌ಕ್ರಿಸ್ಟ್ ಹೇಳಿಕೊಂಡಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕೂಲ್ ಎಂದು ಬಣ್ಣಿಸಿದ ಆಡಮ್ ಗಿಲ್ ಕ್ರಿಸ್ಟ್, ಧೋನಿಯ ಕೂಲ್ ನೆಸ್ ನನಗೆ ತುಂಬ ಇಷ್ಟ ಎಂದಿದ್ದಾರೆ. ಹಾಗೆಯೇ ಸಂಗಕ್ಕಾರ ಬಗ್ಗೆಯೂ ಮಾತನಾಡಿರುವ ಗಿಲ್‌ಕ್ರಿಸ್ಟ್, ಸಂಗಕ್ಕಾರ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಆಗಿರಲಿ ಎಲ್ಲದರಲ್ಲೂ ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲ್ಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಗ್ಗೆ ಮಾತನಾಡಿರುವ ಗಿಲ್‌ಕ್ರಿಸ್ಟ್, ಈ ಟ್ರೋಫಿಯ ಕಳೆದ 2 ಆವೃತ್ತಿಗಳನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಆದರೆ ಈ ಬಾರಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಲಿದೆ ಎಂದು ಆಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

ಇನ್ನು ಆಸ್ಟ್ರೇಲಿಯಕ್ಕೆ ತವರು ನೆಲದಲ್ಲಿ ಬಲಿಷ್ಠ ಎಂಬುದನ್ನು ಸಾಬೀತು ಪಡಿಸುವ ಜವಾಬ್ದಾರಿ ಅವರ ಮೇಲಿದೆ. ಅದೇ ಸಮಯದಲ್ಲಿ, ವಿದೇಶದಲ್ಲಿ ಹೇಗೆ ಗೆಲ್ಲಬೇಕೆಂದು ಭಾರತಕ್ಕೂ ಚೆನ್ನಾಗಿ ತಿಳಿದಿದೆ. ಆದಾಗ್ಯೂ ಈ ಬಾರಿ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು, ಬ್ರಿಸ್ಬೇನ್‌ನ ಗಬ್ಬಾ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಸರಣಿಯ ಕೊನೆಯ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ, ಈ ಸರಣಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.




