AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adam Gilchrist: ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ ಆಡಮ್ ಗಿಲ್‌ಕ್ರಿಸ್ಟ್

Adam Gilchrist: ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಡಮ್ ಗಿಲ್‌ಕ್ರಿಸ್ಟ್, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ್ದಾರೆ. ಗಿಲ್‌ಕ್ರಿಸ್ಟ್ ಪ್ರಕಾರ, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಗಿದ್ದರೆ, ಇನ್ನಿಬ್ಬರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್​ಗಳಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 21, 2024 | 5:22 PM

Share
ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಡಮ್ ಗಿಲ್‌ಕ್ರಿಸ್ಟ್, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳನ್ನು ಹೆಸರಿಸಿದ್ದಾರೆ. ಗಿಲ್‌ಕ್ರಿಸ್ಟ್ ಪ್ರಕಾರ, ವಿಶ್ವದ ಮೂವರು ಅತ್ಯುತ್ತಮ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಗಿದ್ದರೆ, ಇನ್ನಿಬ್ಬರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್​ಗಳಾಗಿದ್ದಾರೆ.

1 / 8
ಟೈಮ್ಸ್ ಆಫ್ ಇಂಡಿಯಾ ಕೇಳಿದ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಡಮ್ ಗಿಲ್‌ಕ್ರಿಸ್ಟ್, ಮೊದಲನೆಯದಾಗಿ  ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಅವರನ್ನು ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಬಣ್ಣಿಸಿದ್ದಾರೆ.

2 / 8
ಆ ನಂತರ ಎರಡನೇ ಸ್ಥಾನವನ್ನು ಟೀಂ ಇಂಡಿಯಾದ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿದ್ದು, ಧೋನಿ ವಿಶ್ವದ ಎರಡನೇ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಗಿಲ್‌ಕ್ರಿಸ್ಟ್ ಬಣ್ಣಿಸಿದ್ದಾರೆ. ಹಾಗೆಯೇ ಮೂರನೇ ಸ್ಥಾನವನ್ನು ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್ ಕುಮಾರ್ ಸಂಗಕ್ಕಾರ ಅವರಿಗೆ ನೀಡಿದ್ದಾರೆ.

3 / 8
ತನ್ನ ಆಯ್ಕೆಯ ಬಗ್ಗೆ ವಿವರಣೆಗಳನ್ನೂ ನೀಡಿರುವ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಅವರನ್ನು ತನ್ನ ಆರಾಧ್ಯ ದೈವ ಎಂದು ಬಣ್ಣಿಸಿದ್ದು, ನಾನು ಕೂಡ ರಾಡ್ನಿ ಮಾರ್ಷ್‌ನಂತೆ ಆಗಲು ಬಯಸಿದ್ದಾಗಿ ಗಿಲ್‌ಕ್ರಿಸ್ಟ್ ಹೇಳಿಕೊಂಡಿದ್ದಾರೆ.

4 / 8
ಇದೇ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕೂಲ್ ಎಂದು ಬಣ್ಣಿಸಿದ ಆಡಮ್ ಗಿಲ್ ಕ್ರಿಸ್ಟ್, ಧೋನಿಯ ಕೂಲ್ ನೆಸ್ ನನಗೆ ತುಂಬ ಇಷ್ಟ ಎಂದಿದ್ದಾರೆ. ಹಾಗೆಯೇ ಸಂಗಕ್ಕಾರ ಬಗ್ಗೆಯೂ ಮಾತನಾಡಿರುವ ಗಿಲ್‌ಕ್ರಿಸ್ಟ್, ಸಂಗಕ್ಕಾರ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಅಥವಾ ವಿಕೆಟ್ ಕೀಪಿಂಗ್ ಆಗಿರಲಿ ಎಲ್ಲದರಲ್ಲೂ ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ ಎಂದಿದ್ದಾರೆ.

5 / 8
ಇದೇ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲ್ಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಗ್ಗೆ ಮಾತನಾಡಿರುವ ಗಿಲ್‌ಕ್ರಿಸ್ಟ್, ಈ ಟ್ರೋಫಿಯ ಕಳೆದ 2 ಆವೃತ್ತಿಗಳನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಆದರೆ ಈ ಬಾರಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಲಿದೆ ಎಂದು ಆಡಮ್ ಗಿಲ್​ಕ್ರಿಸ್ಟ್ ಹೇಳಿದ್ದಾರೆ.

6 / 8
ಇನ್ನು ಆಸ್ಟ್ರೇಲಿಯಕ್ಕೆ ತವರು ನೆಲದಲ್ಲಿ ಬಲಿಷ್ಠ ಎಂಬುದನ್ನು ಸಾಬೀತು ಪಡಿಸುವ ಜವಾಬ್ದಾರಿ ಅವರ ಮೇಲಿದೆ. ಅದೇ ಸಮಯದಲ್ಲಿ, ವಿದೇಶದಲ್ಲಿ ಹೇಗೆ ಗೆಲ್ಲಬೇಕೆಂದು ಭಾರತಕ್ಕೂ ಚೆನ್ನಾಗಿ ತಿಳಿದಿದೆ. ಆದಾಗ್ಯೂ ಈ ಬಾರಿ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ಗಿಲ್​ಕ್ರಿಸ್ಟ್ ಹೇಳಿದ್ದಾರೆ.

7 / 8
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು, ಬ್ರಿಸ್ಬೇನ್‌ನ ಗಬ್ಬಾ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಸರಣಿಯ ಕೊನೆಯ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ, ಈ ಸರಣಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

8 / 8
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!