Harry Brook: ದಾಖಲೆಯ ಜೊತೆಯಾಟ, ಗರಿಷ್ಠ ಸರಾಸರಿ; 4.30 ಗಂಟೆಗಳಲ್ಲಿ 4 ವಿಶ್ವ ದಾಖಲೆ ಉಡೀಸ್..!
England Vs New Zealand: ಅತ್ಯಧಿಕ ಸರಾಸರಿಯ ವಿಚಾರಕ್ಕೆ ಬಂದರೆ ಬ್ರೂಕ್, ಆಸೀಸ್ ದಂತಕಥೆ ಡಾನ್ ಬ್ರಾಡ್‌ಮನ್ ಅವರನ್ನು ಹಿಂದಿಕ್ಕಿದ್ದಾರೆ. ಬ್ರೂಕ್ ಅವರ ಟೆಸ್ಟ್ ಸರಾಸರಿ 100.87 ಆಗಿದ್ದರೆ, ಬ್ರಾಡ್ಮನ್ ಸರಾಸರಿ 99.94 ಆಗಿತ್ತು.
1 / 7
ಪ್ರಸ್ತುತ ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡ ಈಗಾಗಲೇ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಆಂಗ್ಲ ಯುವ ಆಟಗಾರ ಹ್ಯಾರಿ ಬ್ರೂಕ್ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ.
2 / 7
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ವಂಚಿತರಾದ ಹ್ಯಾರಿ ಬ್ರೂಕ್, 186 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಬ್ರೂಕ್ ಅವರ ಬಿರುಸಿನ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.
3 / 7
ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ ಅವರು ಈ ಮೂಲಕ ವಿನೋದ್ ಕಾಂಬ್ಳಿ ಅವರ 30 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದರು. ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಕೇವಲ 9 ಟೆಸ್ಟ್ ಇನ್ನಿಂಗ್ಸ್ ಆಡಿರುವ ಬ್ರೂಕ್ ಬರೋಬ್ಬರಿ 809 ರನ್ ಗಳಿಸಿ, ಇಷ್ಟು ಕಡಿಮೆ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
4 / 7
ಇದರೊಂದಿಗೆ ಬ್ರೂಕ್, ಭಾರತದ ವಿನೋದ್ ಕಾಂಬ್ಳಿ ಅವರ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಕಾಂಬ್ಳಿ ತಮ್ಮ ಮೊದಲ 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 798 ರನ್ ಗಳಿಸಿ ಈ ದಾಖಲೆ ಬರೆದಿದ್ದರು, ಅದು ಈಗ ಬ್ರೂಕ್ ಪಾಲಾಗಿದೆ.
5 / 7
ಇಷ್ಟೇ ಅಲ್ಲ, ಹ್ಯಾರಿ ಬ್ರೂಕ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 800 ರನ್‌ಗಳ ಸ್ಕೋರ್ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
6 / 7
ಅತ್ಯಧಿಕ ಸರಾಸರಿಯ ವಿಚಾರಕ್ಕೆ ಬಂದರೆ ಬ್ರೂಕ್, ಆಸೀಸ್ ದಂತಕಥೆ ಡಾನ್ ಬ್ರಾಡ್‌ಮನ್ ಅವರನ್ನು ಹಿಂದಿಕ್ಕಿದ್ದಾರೆ. ಬ್ರೂಕ್ ಅವರ ಟೆಸ್ಟ್ ಸರಾಸರಿ 100.87 ಆಗಿದ್ದರೆ, ಬ್ರಾಡ್ಮನ್ ಸರಾಸರಿ 99.94 ಆಗಿತ್ತು.
7 / 7
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ರೂಕ್ ಮತ್ತು ಜೋ ರೂಟ್ ನಡುವೆ 302 ರನ್ ಜೊತೆಯಾಟವಿತ್ತು. 30 ರನ್‌ಗಳೊಳಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ವಿದೇಶಿ ನೆಲದಲ್ಲಿ ಇದು ಅತಿದೊಡ್ಡ ಜೊತೆಯಾಟವಾಗಿದೆ.