- Kannada News Photo gallery Cricket photos ENGW vs SAW WT20 WC South Africa made history by securing their first-ever Women's T20 World Cup final
ENGW vs SAW: ಇಂಗ್ಲೆಂಡ್ಗೆ ಮಣ್ಣುಮುಕ್ಕಿಸಿ ಚೊಚ್ಚಲ ಬಾರಿ ಫೈನಲ್ಗೇರಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ
England Women vs South Africa Women: ನ್ಯೂಲೆಂಡ್ಸ್ನ ಕೇಪ್ಟೌನ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮ ಹಂತದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ ಆಫ್ರಿಕಾ ಮಹಿಳೆಯರು 6 ರನ್ಗಳ ರೋಚಕ ಜಯದೊಂದಿಗೆ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ಪ್ರವೇಶ ಪಡೆದಿದೆ.
Updated on: Feb 25, 2023 | 8:14 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡೂ ಸೆಮಿ ಫೈನಲ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಸೆಮೀಸ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಜಯಿಸಿ ಫೈನಲ್ಗೇರಿತು. ಶುಕ್ರವಾರ ನಡೆದ ದ್ವಿತೀಯ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ಗೆ ಮಣ್ಣು ಮುಕ್ಕಿಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಸುತ್ತಿದೆ ಕಾಲಿಟ್ಟಿದೆ.ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡೂ ಸೆಮಿ ಫೈನಲ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಸೆಮೀಸ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಜಯಿಸಿ ಫೈನಲ್ಗೇರಿತು. ಶುಕ್ರವಾರ ನಡೆದ ದ್ವಿತೀಯ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ಗೆ ಮಣ್ಣು ಮುಕ್ಕಿಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಸುತ್ತಿದೆ ಕಾಲಿಟ್ಟಿದೆ.

ನ್ಯೂಲೆಂಡ್ಸ್ನ ಕೇಪ್ಟೌನ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮ ಹಂತದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ ಆಫ್ರಿಕಾ ಮಹಿಳೆಯರು 6 ರನ್ಗಳ ರೋಚಕ ಜಯದೊಂದಿಗೆ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ಪ್ರವೇಶ ಪಡೆದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಬೊಂಬಾಟ್ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್ಗೆನೇ 96 ರನ್ಗಳ ಕಾಣಿಕೆ ನೀಡಿದರು. ವೊಲ್ವಾರ್ಡ್ಟ್ 44 ಎಸೆತಗಳಲ್ಲಿ 53 ರನ್ ಗಳಿಸಿದರೆ ಬ್ರಿಟ್ಸ್ 55 ಎಸೆತಗಳಲ್ಲಲಿ 68 ರನ್ ಚಚ್ಚಿದರು.

ಕೊನೆಯಲ್ಲಿ ಮಾರಿಜಾನ್ನೆ ಕಪ್ ಕೇವಲ 13 ಎಸೆತಗಳಲ್ಲಿ ಅಜೇಯ 27 ರನ್ ಚಚ್ಚಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಪರಿಣಾಮ ದ. ಆಫ್ರಿಕಾ ಮಹಿಳಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು ಕೂಡ ಸ್ಫೋಟಕ ಆರಂಭ ಪಡೆದುಕೊಂಡರು. ಡೇನಿಯಲ್ ವ್ಯಾಟ್ ಮತ್ತು ಸೋಫಿಯಾ ಡಂಕ್ಲಿ 5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ವ್ಯಾಟ್ 34 ಹಾಗೂ ಸೋಫಿಯಾ 28 ರನ್ ಗಳಿಸಿದರು.

ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ (40) ಹಾಗೂ ಹೀದರ್ ನೈಟ್ (31) ಕೊಂಚ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲ ವೈಫಲ್ಯ ಅನುಭವಿಸಿದರು. ದಿಢೀರ್ ಕುಸಿಕ್ಕೊಳಗಾದ ಇಂಗ್ಲೆಂಡ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲುಂಡಿತು. ಆಫ್ರಿಕಾ ಪರ , ಅಯಾಬೊಂಗಾ ಖಾಕಾ 4 ಹಾಗೂ ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ (40) ಹಾಗೂ ಹೀದರ್ ನೈಟ್ (31) ಕೊಂಚ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲ ವೈಫಲ್ಯ ಅನುಭವಿಸಿದರು. ದಿಢೀರ್ ಕುಸಿಕ್ಕೊಳಗಾದ ಇಂಗ್ಲೆಂಡ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲುಂಡಿತು. ಆಫ್ರಿಕಾ ಪರ , ಅಯಾಬೊಂಗಾ ಖಾಕಾ 4 ಹಾಗೂ ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.

6 ವಿಕೆಟ್ಗಳ ರೋಚಕ ಜಯದೊಂದಿಗೆ ಚೊಚ್ಚಲ ಬಾರಿ ಫೈನಲ್ಗೇರಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಕೇಪ್ಟೌನ್ನ ನ್ಯೂಜಿಲೆಂಡ್ಸ್ ಮೈದಾನದಲ್ಲಿ ಫೆಬ್ರವರಿ 26 ರಂದು ನಡೆಯಲಿದೆ.
