AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENGW vs SAW: ಇಂಗ್ಲೆಂಡ್​ಗೆ ಮಣ್ಣುಮುಕ್ಕಿಸಿ ಚೊಚ್ಚಲ ಬಾರಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ

England Women vs South Africa Women: ನ್ಯೂಲೆಂಡ್ಸ್​ನ ಕೇಪ್​ಟೌನ್​ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮ ಹಂತದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದ ಆಫ್ರಿಕಾ ಮಹಿಳೆಯರು 6 ರನ್​ಗಳ ರೋಚಕ ಜಯದೊಂದಿಗೆ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಫೈನಲ್​​ಗೆ ಪ್ರವೇಶ ಪಡೆದಿದೆ.

Vinay Bhat
|

Updated on: Feb 25, 2023 | 8:14 AM

Share
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡೂ ಸೆಮಿ ಫೈನಲ್​ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಸೆಮೀಸ್​ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಜಯಿಸಿ ಫೈನಲ್​ಗೇರಿತು. ಶುಕ್ರವಾರ ನಡೆದ ದ್ವಿತೀಯ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ಗೆ ಮಣ್ಣು ಮುಕ್ಕಿಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಸುತ್ತಿದೆ ಕಾಲಿಟ್ಟಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡೂ ಸೆಮಿ ಫೈನಲ್​ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಸೆಮೀಸ್​ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಜಯಿಸಿ ಫೈನಲ್​ಗೇರಿತು. ಶುಕ್ರವಾರ ನಡೆದ ದ್ವಿತೀಯ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ಗೆ ಮಣ್ಣು ಮುಕ್ಕಿಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಸುತ್ತಿದೆ ಕಾಲಿಟ್ಟಿದೆ.ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಎರಡೂ ಸೆಮಿ ಫೈನಲ್​ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಸೆಮೀಸ್​ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಜಯಿಸಿ ಫೈನಲ್​ಗೇರಿತು. ಶುಕ್ರವಾರ ನಡೆದ ದ್ವಿತೀಯ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ಗೆ ಮಣ್ಣು ಮುಕ್ಕಿಸಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಶಸ್ತಿ ಸುತ್ತಿದೆ ಕಾಲಿಟ್ಟಿದೆ.

1 / 7
ನ್ಯೂಲೆಂಡ್ಸ್​ನ ಕೇಪ್​ಟೌನ್​ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮ ಹಂತದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದ ಆಫ್ರಿಕಾ ಮಹಿಳೆಯರು 6 ರನ್​ಗಳ ರೋಚಕ ಜಯದೊಂದಿಗೆ ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಫೈನಲ್​​ಗೆ ಪ್ರವೇಶ ಪಡೆದಿದೆ.

2 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​​ಗಳಾದ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಬೊಂಬಾಟ್ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್​ಗೆನೇ 96 ರನ್​ಗಳ ಕಾಣಿಕೆ ನೀಡಿದರು. ವೊಲ್ವಾರ್ಡ್ಟ್ 44 ಎಸೆತಗಳಲ್ಲಿ 53 ರನ್ ಗಳಿಸಿದರೆ ಬ್ರಿಟ್ಸ್ 55 ಎಸೆತಗಳಲ್ಲಲಿ 68 ರನ್ ಚಚ್ಚಿದರು.

3 / 7
ಕೊನೆಯಲ್ಲಿ ಮಾರಿಜಾನ್ನೆ ಕಪ್ ಕೇವಲ 13 ಎಸೆತಗಳಲ್ಲಿ ಅಜೇಯ 27 ರನ್ ಚಚ್ಚಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಪರಿಣಾಮ ದ. ಆಫ್ರಿಕಾ ಮಹಿಳಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.

ಕೊನೆಯಲ್ಲಿ ಮಾರಿಜಾನ್ನೆ ಕಪ್ ಕೇವಲ 13 ಎಸೆತಗಳಲ್ಲಿ ಅಜೇಯ 27 ರನ್ ಚಚ್ಚಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಪರಿಣಾಮ ದ. ಆಫ್ರಿಕಾ ಮಹಿಳಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.

4 / 7
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು ಕೂಡ ಸ್ಫೋಟಕ ಆರಂಭ ಪಡೆದುಕೊಂಡರು. ಡೇನಿಯಲ್ ವ್ಯಾಟ್ ಮತ್ತು ಸೋಫಿಯಾ ಡಂಕ್ಲಿ 5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ವ್ಯಾಟ್ 34 ಹಾಗೂ ಸೋಫಿಯಾ 28 ರನ್ ಗಳಿಸಿದರು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು ಕೂಡ ಸ್ಫೋಟಕ ಆರಂಭ ಪಡೆದುಕೊಂಡರು. ಡೇನಿಯಲ್ ವ್ಯಾಟ್ ಮತ್ತು ಸೋಫಿಯಾ ಡಂಕ್ಲಿ 5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ವ್ಯಾಟ್ 34 ಹಾಗೂ ಸೋಫಿಯಾ 28 ರನ್ ಗಳಿಸಿದರು.

5 / 7
ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ (40) ಹಾಗೂ ಹೀದರ್ ನೈಟ್ (31) ಕೊಂಚ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ದಿಢೀರ್ ಕುಸಿಕ್ಕೊಳಗಾದ ಇಂಗ್ಲೆಂಡ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲುಂಡಿತು. ಆಫ್ರಿಕಾ ಪರ , ಅಯಾಬೊಂಗಾ ಖಾಕಾ 4 ಹಾಗೂ ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.

ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ (40) ಹಾಗೂ ಹೀದರ್ ನೈಟ್ (31) ಕೊಂಚ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ದಿಢೀರ್ ಕುಸಿಕ್ಕೊಳಗಾದ ಇಂಗ್ಲೆಂಡ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲುಂಡಿತು. ಆಫ್ರಿಕಾ ಪರ , ಅಯಾಬೊಂಗಾ ಖಾಕಾ 4 ಹಾಗೂ ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ (40) ಹಾಗೂ ಹೀದರ್ ನೈಟ್ (31) ಕೊಂಚ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ದಿಢೀರ್ ಕುಸಿಕ್ಕೊಳಗಾದ ಇಂಗ್ಲೆಂಡ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲುಂಡಿತು. ಆಫ್ರಿಕಾ ಪರ , ಅಯಾಬೊಂಗಾ ಖಾಕಾ 4 ಹಾಗೂ ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದರು.

6 / 7
6 ವಿಕೆಟ್​ಗಳ ರೋಚಕ ಜಯದೊಂದಿಗೆ ಚೊಚ್ಚಲ ಬಾರಿ ಫೈನಲ್​ಗೇರಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಕೇಪ್​ಟೌನ್​ನ ನ್ಯೂಜಿಲೆಂಡ್ಸ್ ಮೈದಾನದಲ್ಲಿ ಫೆಬ್ರವರಿ 26 ರಂದು ನಡೆಯಲಿದೆ.

6 ವಿಕೆಟ್​ಗಳ ರೋಚಕ ಜಯದೊಂದಿಗೆ ಚೊಚ್ಚಲ ಬಾರಿ ಫೈನಲ್​ಗೇರಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಕೇಪ್​ಟೌನ್​ನ ನ್ಯೂಜಿಲೆಂಡ್ಸ್ ಮೈದಾನದಲ್ಲಿ ಫೆಬ್ರವರಿ 26 ರಂದು ನಡೆಯಲಿದೆ.

7 / 7
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ