- Kannada News Photo gallery Cricket photos England Wicketkeeper Batsman Chris Cooke hit 113 runs in just 41 balls in T20 Blast
T20 Blast: 6,6,6,6,6,6,6.. 47 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಚಚ್ಚಿದ ಇಂಗ್ಲೆಂಡ್ ಬ್ಯಾಟರ್..!
T20 Blast: ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 41 ಎಸೆತಗಳನ್ನು ಎದುರಿಸಿದ ಕ್ರಿಸ್, 275 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ, 7 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಿತ 113 ರನ್ ಬಾರಿಸಿದರು.
Updated on: Jun 01, 2023 | 12:51 PM

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಗ್ಲಾಮೊರ್ಗಾನ್ ತಂಡದ ಪರ ಆಡುತ್ತಿರುವ 37 ವರ್ಷದ ಕ್ರಿಸ್ ಕುಕ್ ಮಿಡ್ಲ್‌ಸೆಕ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಅಬ್ಬರದ ಶತಕ ಸಿಡಿಸಿದ್ದಾರೆ.

ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 41 ಎಸೆತಗಳನ್ನು ಎದುರಿಸಿದ ಕ್ರಿಸ್, 275 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ, 7 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಿತ 113 ರನ್ ಬಾರಿಸಿದರು.

ಕ್ರಿಸ್ ಕುಕ್ ಅವರ ಬಿರುಸಿನ ಶತಕ ಹಾಗೂ ಕಾಲಿನ್ ಇಂಗ್ರಾಮ್ ಅವರ ಅಜೇಯ 92 ರನ್‌ಗಳ ನೆರವಿನಿಂದಾಗಿ ಗ್ಲಾಮೊರ್ಗನ್ ತಂಡ ನಿಗಧಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ಮಿಡ್ಲ್‌ಸೆಕ್ಸ್ ಕೂಡ 239 ರನ್‌ಗಳ ಗುರಿ ತಲುಪಲು ತೀವ್ರ ಪ್ರಯತ್ನ ನಡೆಸಿತ್ತಾದರೂ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 209 ರನ್ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ 20 ರನ್‌ಗಳ ಸೋಲನುಭವಿಸಿತ್ತು.

ಇನ್ನು ಮಿಡ್ಲ್‌ಸೆಕ್ಸ್ ತಂಡದ ಪರ ಜೋ ಕ್ರಾಕ್ನೆಲ್ 42 ಎಸೆತಗಳಲ್ಲಿ 77 ರನ್ ಬಾರಿಸಿದರೆ, ಸ್ಟೀಫನ್ 51 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸಿದರು.




