ಅತಿಯಾದ ಆತ್ಮ ವಿಶ್ವಾಸ… ನೋಡಿ ಎಂಜಾಯ್ ಮಾಡು ಎಂದ ಹಾರ್ದಿಕ್ ಪಾಂಡ್ಯ ಕಲೆಹಾಕಿದ್ದು ಕೇವಲ 6 ರನ್

|

Updated on: Nov 11, 2024 | 10:53 AM

South Africa vs India: ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 124 ರನ್​ ಕಲೆಹಾಕಿದರೆ, ಸೌತ್ ಆಫ್ರಿಕಾ ತಂಡವು ಈ ಗುರಿಯನ್ನು 19 ಓವರ್​ಗಳಲ್ಲಿ ಚೇಸ್ ಮಾಡಿ 3 ವಿಕೆಟ್​ಗಳ ಗೆಲುವು ದಾಖಲಿಸಿತು.

1 / 5
ಗೆಬಾಹದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ಡೆತ್ ಓವರ್​ಗಳಲ್ಲಿ ರನ್​ಗಳಿಸಲು ಭಾರತೀಯ ಬ್ಯಾಟರ್​ಗಳು ಪರದಾಡಿದರು. ಇದರ ನಡುವೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅರ್ಷದೀಪ್ ಸಿಂಗ್ ಒಂದು ಸಿಕ್ಸ್ ಸಿಡಿಸಿ ಗಮನ ಸೆಳೆದಿದ್ದರು. ಆದರೆ ಪಾಂಡ್ಯ ನಡೆಯಿಂದಾಗಿ ಅರ್ಷದೀಪ್​ಗೆ ಹೆಚ್ಚಿನ ಬಾಲ್​ಗಳನ್ನು ಎದುರಿಸಲು ಅವಕಾಶ ಸಿಕ್ಕಿರಲಿಲ್ಲ.

2 / 5
ಕೊನೆಯ ಮೂರು ಓವರ್​ಗಳ ವೇಳೆ ಸ್ಟ್ರೈಕ್ ಬದಲಿಸಲು ಹಾರ್ದಿಕ್ ಪಾಂಡ್ಯ ನಿರಾಕರಿಸಿದ್ದರು. ಅದರಲ್ಲೂ 19ನೇ ಓವರ್​ನ 2ನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ಸಿಂಗಲ್ ತೆಗೆಯುವ ಮೂಲಕ ಪಾಂಡ್ಯಗೆ ಸ್ಟ್ರೈಕ್ ನೀಡಿದ್ದರು. ಈ ವೇಳೆ ಹಾರ್ದಿಕ್ ಆಡಿದ ಮಾತುಗಳೇ ಈಗ ಟ್ರೋಲಿಗರಿಗೆ ಆಹಾರವಾಗಿದೆ.

3 / 5
ಅರ್ಷದೀಪ್ ಸಿಂಗ್ ಸಿಂಗಲ್ ತೆಗೆಯುತ್ತಿದ್ದಂತೆ ಹಾರ್ದಿಕ್ ಪಾಂಡ್ಯ, ಇನ್ನು ನಾನ್ ಸ್ಟ್ರೈಕ್​ನಲ್ಲಿ ನಿಂತು ಎಂಜಾಯ್ ಮಾಡು ಎಂದಿದ್ದರು. ಅತೀ ಆತ್ಮವಿಶ್ವಾಸದ ಈ ಹೇಳಿಕೆಯು ಸ್ಟಂಪ್ ಮೈಕ್​ನಲ್ಲಿ ಕೇಳಿ ಬಂದಿತ್ತು. ಆದರೆ ಇದಾದ ಬಳಿಕ 10 ಎಸೆತಗಳನ್ನು ಎದುರಿಸಿದ ಪಾಂಡ್ಯ ರನ್​ಗಳಿಸಲು ಒದ್ದಾಡಿದರು.

4 / 5
19ನೇ ಓವರ್​ನ ಮೂರನೇ ಎಸೆತದಿಂದ ಸ್ಟ್ರೈಕ್ ಪಡೆದ ಹಾರ್ದಿಕ್ ಪಾಂಡ್ಯ ನಾಲ್ಕು ಎಸೆತಗಳಲ್ಲಿ 1 ಬೈಸ್ ರನ್ ಮಾತ್ರ ಕಲೆಹಾಕಿದ್ದರು. ಅಲ್ಲದೆ ಕೊನೆಯ ಓವರ್​ನಲ್ಲಿ ಮತ್ತೆ ಸ್ಟ್ರೈಕ್​ಗೆ ಬಂದ ಹಾರ್ದಿಕ್ ಮೊದಲ 4 ಎಸೆತಗಳಲ್ಲಿ ಯಾವುದೇ ರನ್​ಗಳಿಸಲು ಸಾಧ್ಯವಾಗಿರಲಿಲ್ಲ. ಇನ್ನು 5ನೇ ಎಸೆತದಲ್ಲಿ 2 ರನ್​​ಗಳಿಸಿದರೆ, ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು.

5 / 5
ಅಂದರೆ ಅರ್ಷದೀಪ್ ಸಿಂಗ್​ಗೆ, ನಾನ್ ಸ್ಟ್ರೈಕ್​ನಲ್ಲಿ ನಿಂತು ನನ್ನ ಬ್ಯಾಟಿಂಗ್ ಅನಂದಿಸುವ ಎಂದ ಹಾರ್ದಿಕ್ ಪಾಂಡ್ಯ ಕೊನೆಯ 10 ಎಸೆತಗಳಲ್ಲಿ ಕ್ರಮವಾಗಿ 0, 0, 0, 1B, 0, 0, 0, 0, 2, 4 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿಯೇ ಇದೀಗ ಅತಿಯಾದ ಆತ್ಮ ವಿಶ್ವಾಸದಿಂದ ತೇಲಿದ ಹಾರ್ದಿಕ್ ಪಾಂಡ್ಯರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತ್ತಿದೆ.