Faf Duplessis: ಎಲ್ಲವನ್ನು ಕಣ್ಣಾರೆ ಕಂಡ ಫಾಫ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ಏನಂದ್ರು ಗೊತ್ತೇ?

|

Updated on: May 02, 2023 | 10:15 AM

LSG vs RCB, IPL 2023: ಸಾಕಷ್ಟು ಕುತೂಹಲಕಾರಿ ಘಟನೆಗೆ ಸಾಕ್ಷಿಯಾದ ಎಲ್​ಎಸ್​ಜಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗೆ 126 ರನ್ ಗಳಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್ ಏನು ಹೇಳಿದ್ದಾರೆ ಕೇಳಿ.

1 / 8
ಐಪಿಎಲ್ 2023 ರಲ್ಲಿ ಹೈ-ಸ್ಕೋರ್ ಗೇಮ್ ಮಾತ್ರವಲ್ಲದೆ ಲೋ-ಸ್ಕೋರ್ ಪಂದ್ಯ ಕೂಡ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಇದಕ್ಕೆ ಸಾಕ್ಷಿ ಸೋಮವಾರ ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ.

2 / 8
ಸಾಕಷ್ಟು ಕುತೂಹಲಕಾರಿ ಘಟನೆಗೆ ಕಾರಣವಾದ ಈ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗೆ 126 ರನ್ ಗಳಿಸಿತು. ಆದರೆ, ಸುಲಭ ಟಾರ್ಗೆಟ್ ಬೆನ್ನಟ್ಟಲಾಗದೆ ಎಲ್​ಎಸ್​ಜಿ 108 ರನ್​ಗೆ ಸರ್ವಪತನನ ಕಂಡಿತು. ಈ ಪಂದ್ಯದ ಪ್ರಮುಖ ಹೈಲೇಟ್ ಪಂದ್ಯ ಮುಗಿದ ಬಳಿಕ ನಡೆದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳ.

3 / 8
ಆದರೆ, ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಈ ವಿಚಾರದ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

4 / 8
ಚಿನ್ನಸ್ವಾಮಿಗೆ ಹೋಲಿಸಿದರೆ ಇಲ್ಲಿನ ಪಿಚ್ ಸಂಪೂರ್ಣ ವಿರುದ್ಧವಾಗಿದೆ. ಇಂತಹ ಕಠಿಣ ಪಿಚ್​ನಲ್ಲಿ ಮೊದಲು ಆರು ಓವರ್​ಗಳಲ್ಲಿ ನಾವು ಅತ್ಯುತ್ತಮ ಬ್ಯಾಟಿಂಗ್ ಮಾಡಿದೆವು. ನಾವು ಅದೇ ರೀತಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದೆವು. ಮೊದಲ 6 ಓವರ್​ಗಳಲ್ಲಿ ಅರ್ಧಶತಕದ ಜೊತೆಯಾಟ ಆಡಿದ್ದು ಸಹಕಾರಿ ಆಯಿತು ಎಂದು ಡುಪ್ಲೆಸಿಸ್ ಹೇಳಿದ್ದಾರೆ.

5 / 8
ಮೊದಲು ಬ್ಯಾಟಿಂಗ್ ಮಾಡುವುದು ಪ್ರಮುಖವಾಗಿತ್ತು. ನಮ್ಮ ಸ್ಪಿನ್ನರ್​ಗಳು ಇಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಮಹಿಪಾಲ್ ಕೂಡ ಲಯ ಕಂಡುಕೊಂಡರು. ಸರಿಯಾದ ಜಾಗದಲ್ಲಿ ಚೆಂಡನ್ನು ಎಸೆದರೆ ರನ್ ಗಳಿಸುವುದು ತುಂಬಾ ಕಷ್ಟ. 135 ರನ್ ನಮ್ಮ ಯೋಜನೆ ಆಗಿತ್ತು. ಅದರಂತೆ ಆಯಿತು - ಫಾಫ್ ಡುಪ್ಲೆಸಿಸ್.

6 / 8
ಫೀಲ್ಡ್​ಗೆ ಬರುವ ಮುನ್ನ ಬೌಲರ್​ಗಳ ಜೊತೆ ಒಂದಿಷ್ಟು ಮಾತುಕತೆ ನಡೆಸಿದೆವು. ನಾವು ಕಲೆಹಾಕಿರುವುದು ಮ್ಯಾಚ್ ವಿನ್ನಿಂಗ್ ರನ್. ಪವರ್ ಪ್ಲೇನಲ್ಲಿ 2-3 ವಿಕೆಟ್ ಪಡೆದುಕೊಳ್ಳಬೇಕು. ಕೆಎಲ್ ರಾಹುಲ್ ಇಲ್ಲದ ಕಾರಣ ವಿಕೆಟ್ ಪಡೆದುಕೊಂಡರೆ ಪಂದ್ಯ ಮತ್ತಷ್ಟು ಕಠಿಣವಾಗುತ್ತದೆ ಎಂದು ಹೇಳಿದ್ದೆ ಎಂಬುದು ಫಾಫ್ ಮಾತು.

7 / 8
ಕರ್ಣ್ ಶರ್ಮಾ ನೀಡಿದ ಪ್ರದರ್ಶನ ಖುಷಿ ತಂದಿದೆ. ಅವರು ಸಾಕಷ್ಟು ಶ್ರಮ ವಹಿಸುತ್ತಾರೆ ಆದರೆ, ಮನ್ನಣೆ ಸಿಗುವುದಿಲ್ಲ. ಹ್ಯಾಜುಲ್​ವುಡ್ ಕಮ್​ಬ್ಯಾಕ್ ಮಾಡಿದ್ದು ಬಲ ಬಂದಂತಾಗಿದೆ. ಈ ಗೆಲುವು ಸಂತಸ ತಂದಿದೆ ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

8 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಡುಪ್ಲೆಸಿಸ್ ಅವರ 44 ರನ್ ಹಾಗೂ ವಿರಾಟ್ ಕೊಹ್ಲಿಯ 31 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಎಲ್​ಎಸ್​ಜಿ ಕೂಡ ಬ್​ಯಾಟಿಂಗ್ ಮಾಡಲು ಪರದಾಡಿತು. ತಂಡದ ಪರ ಕೃಷ್ಣಪ್ಪ ಗೌತಮ್ (23) ಗರಿಷ್ಠ ರನ್ ಕಲೆಹಾಕಿದರು. ಲಖನೌ 19.5 ಓವರ್​ಗಳಲ್ಲಿ 108 ರನ್​ಗೆ ಆಲೌಟ್ ಆಯಿತು.

Published On - 10:15 am, Tue, 2 May 23