Akaay: ಜೂನಿಯರ್ ಕೊಹ್ಲಿ ಹೆಸರಿನಲ್ಲಿ ಫೇಕ್ ಅಕೌಂಟ್ಗಳ ಸೃಷ್ಟಿ..!
TV9 Web | Updated By: ಝಾಹಿರ್ ಯೂಸುಫ್
Updated on:
Feb 21, 2024 | 1:30 PM
Virat Anushka Son Name: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರಲ್ಲಿ ವಿವಾಹವಾಗಿದ್ದರು. 2021 ರ ಜನವರಿಯಲ್ಲಿ ವಿರುಷ್ಕಾ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಇದೀಗ ಎರಡು ವರ್ಷಗಳ ಬಳಿಕ ಕೊಹ್ಲಿ ಕುಟುಂಬಕ್ಕೆ ಅಕಾಯ್ ಹೆಸರಿಗೆ ಪುಟ್ಟ ಅತಿಥಿಯ ಆಗಮನವಾಗಿದೆ.
1 / 5
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 15 ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಕಿಂಗ್ ಕೊಹ್ಲಿ ಫೆಬ್ರವರಿ 20 ರಂದು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದರು.
2 / 5
ಇದೇ ವೇಳೆ ವಿರಾಟ್ ಕೊಹ್ಲಿ ಮಗುವಿನ ಹೆಸರನ್ನೂ ಸಹ ತಿಳಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇತ್ತ ಸೋಷಿಯಲ್ ಮೀಡಿಯಾದಲ್ಲೂ ಅಕಾಯ್ ಹೆಸರು ಸಂಚಲನ ಸೃಷ್ಟಿಸಿದೆ. ಅದು ಕೂಡ ಫೇಕ್ ಅಕೌಟ್ಗಳ ಮೂಲಕ ಎಂಬುದೇ ಅಚ್ಚರಿ.
3 / 5
ಅಂದರೆ ವಿರಾಟ್ ಕೊಹ್ಲಿ ತಮ್ಮ ಮಗನ ಹೆಸರು ಅಕಾಯ್ ಎಂದು ತಿಳಿಸಿದ ಬೆನ್ನಲ್ಲೇ, ಇತ್ತ ಅಕಾಯ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವು ನಕಲಿ ಖಾತೆಗಳು ಕಾಣಿಸಿಕೊಂಡಿದೆ. ಇದೀಗ ಅಕಾಯ್ ಕೊಹ್ಲಿ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವುದೇ ಅಚ್ಚರಿ.
4 / 5
ಇನ್ನು ಮಂಗಳವಾರ ರಾತ್ರಿ ಸೋಷಿಯಲ್ ಮೀಡಿಯಾ ಮೂಲಕ ವಿರಾಟ್ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಬಗ್ಗೆ ಪೋಸ್ಟ್ ಹಾಕಿದ್ದ ಕೊಹ್ಲಿ, ಫೆಬ್ರವರಿ 15 ರಂದು ತುಂಬಾ ಸಂತೋಷದಿಂದಲೇ 2ನೇ ಮಗುವನ್ನು ಬರಮಾಡಿಕೊಂಡೆವು. ನಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದೇವೆ. ಇದೀಗ ವಾಮಿಕಾ ಅಕ್ಕ ಆಗಿದ್ದಾಳೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ನಮ್ಮ ಮೇಲಿರಲಿ. ಹಾಗೆಯೇ ನಮ್ಮ ವೈಯುಕ್ತಿಕ ವಿಚಾರವನ್ನು ದಯವಿಟ್ಟು ಗೌರವಿಸಬೇಕೆಂದು ವಿರುಷ್ಕಾ ದಂಪತಿ ಮನವಿ ಮಾಡಿದ್ದರು.
5 / 5
ಆದರೆ ವೈಯುಕ್ತಿಕ ವಿಚಾರ ಬದಿಗಿರಲಿ, ಇನ್ನೂ ಸಹ ಪುಟ್ಟ ಕಣ್ಣು ಮಿಟುಕಿಸುತ್ತಿರುವ ಅಕಾಯ್ ಹೆಸರಿನಲ್ಲಿಯೇ ನಕಲಿ ಖಾತೆಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಹಲ್ಚಲ್ ಎಬ್ಬಿಸಿರುವುದು ಮಾತ್ರ ವಿಪರ್ಯಾಸ.