ಸ್ಪೋಟಕ ಅರ್ಧಶತಕ: RCBಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಫಿನ್ ಅಲೆನ್

| Updated By: ಝಾಹಿರ್ ಯೂಸುಫ್

Updated on: Jan 04, 2024 | 2:58 PM

IPL 2024 Finn Allen: ಈ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿರುವ ಫಿನ್ ಅಲೆನ್ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿಲ್ಲ ಎಂಬುದು ವಿಶೇಷ. ಕೇವಲ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅಲೆನ್​ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬಂದಿರಲಿಲ್ಲ.

1 / 7
ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್​ ಸ್ಮ್ಯಾಶ್ ಟಿ20 ಲೀಗ್​ನಲ್ಲಿ ಯುವ ದಾಂಡಿಗ ಫಿನ್ ಅಲೆನ್ ಆರ್ಭಟಿಸಿದ್ದಾರೆ. ಆಕ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡ ಬೌಲಿಂಗ್ ಆಯ್ದುಕೊಂಡಿತು.

2 / 7
ಅದರಂತೆ ಆಕ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಫಿನ್ ಅಲೆನ್ ಹಾಗೂ ಮಾರ್ಟಿನ್ ಗಪ್ಟಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಅಬ್ಬರಿಸಿದ ಫಿನ್ ಅಲೆನ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅಲ್ಲದೆ ಕೇವಲ 23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿ ಔಟಾದರು.

3 / 7
ಮತ್ತೊಂದೆಡೆ ಮಾರ್ಟಿನ್ ಗಪ್ಟಿಲ್ 52 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 85 ರನ್ ಬಾರಿಸಿದರು. ಆರಂಭಿಕರಿಬ್ಬರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆಕ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

4 / 7
ಈ 193 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ವೆಲ್ಲಿಂಗ್ಟನ್ ತಂಡವು 18.3 ಓವರ್​ಗಳಲ್ಲಿ 139 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಆಕ್ಲೆಂಡ್ ತಂಡವು 53 ರನ್​ಗಳ ಭರ್ಜರಿ ಜಯ ಸಾಧಿಸಿತು.

5 / 7
ಇನ್ನು ಈ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿರುವ ಫಿನ್ ಅಲೆನ್ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿಲ್ಲ ಎಂಬುದು ವಿಶೇಷ. ಕೇವಲ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅಲೆನ್​ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದೆ ಬಂದಿರಲಿಲ್ಲ. ಅದರಲ್ಲೂ ಯುವ ಆಟಗಾರನನ್ನು ಖರೀದಿಸಲು ಆರ್​ಸಿಬಿ ಕೂಡ ಹಿಂದೇಟು ಹಾಕಿದೆ.

6 / 7
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಫಿನ್ ಅಲೆನ್ ಕಳೆದ ಮೂರು ಸೀಸನ್​ಗಳಿಂದ ಆರ್​ಸಿಬಿ ತಂಡದ ಸದಸ್ಯರಾಗಿದ್ದರು. ಈ ಮೂರು ವರ್ಷಗಳಲ್ಲಿ ಆರ್​ಸಿಬಿ ಒಟ್ಟು 45 ಪಂದ್ಯಗಳನ್ನಾಡಿತ್ತು. ಈ ವೇಳೆ ಒಮ್ಮೆಯೂ ಆರ್​ಸಿಬಿ ಅಲೆನ್​ ಅವರನ್ನು ಕಣಕ್ಕಿಳಿಸಿರಲಿಲ್ಲ ಎಂಬುದು ಅಚ್ಚರಿ.

7 / 7
ಅಂದರೆ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ತಂಡದಲ್ಲಿದ್ದ ಫಿನ್ ಅಲೆನ್​ 45 ಪಂದ್ಯಗಳ ವೇಳೆಯೂ ಬೆಂಚ್ ಕಾದಿದ್ದರು. ಪರಿಣಾಮ ಈ ಬಾರಿಯ ಹರಾಜಿನಲ್ಲಿ ನ್ಯೂಝಿಲೆಂಡ್ ಆಟಗಾರನ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಆದರೀಗ ಸೂಪರ್ ಸ್ಮ್ಯಾಶ್ ಲೀಗ್​ನಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಫಿನ್ ಅಲೆನ್ ಅಬ್ಬರಿಸಿದ್ದಾರೆ. ಆರ್​ಸಿಬಿ ಫ್ರಾಂಚೈಸಿಯ ನಡೆಗೆ ಇದೀಗ ತನ್ನ ಬ್ಯಾಟ್ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.