
ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಈ ಆಡುವ ಬಳಗದಲ್ಲಿ ಆಸ್ಟ್ರೇಲಿಯಾದ ಇಬ್ಬರು ಮೂಲ ನಿವಾಸಿಗಳು ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ಮೂಲ ನಿವಾಸಿಗಳು ಜೊತೆಯಾಗಿ ಕಣಕ್ಕಿಳಿಯುತ್ತಿದ್ದಾರೆ.

ಇಂಡಿಜಿನಸ್ ಆಸ್ಟ್ರೇಲಿಯನ್ನರು ಅಂದರೆ ಅಬೋರಿಜಿನಲ್ ಮತ್ತು ಟೊರೆಸ್ ಸ್ಟ್ರೈಟ್ ಐಲ್ಯಾಂಡ್ನ ಜನ ಸಮುದಾಯ. ಈ ಸಮುದಾಯವು ಆಸ್ಟ್ರೇಲಿಯಾದ ಮೂಲ ನಿವಾಸಿಗಳು. ವಿಶೇಷ ಸಾಂಸ್ಕೃತಿ ಪರಂಪರೆಯನ್ನು ಹೊಂದಿರುವ ಈ ಸಮುದಾಯದವರಾದ ಸ್ಕಾಟ್ ಬೋಲ್ಯಾಂಡ್ ಹಾಗೂ ಬ್ರೆಂಡನ್ ಡಾಗೆಟ್ ಇದೀಗ ಜೊತೆಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ಪರ ಅಬೋರಿಜಿನಲ್ ಮತ್ತು ಟೊರೆಸ್ ಸ್ಟ್ರೈಟ್ ಐಲ್ಯಾಂಡ್ನ ಜನ ಸಮುದಾಯದ ಜೇಸನ್ ಗಿಲೆಸ್ಪಿ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಸ್ಕಾಟ್ ಬೋಲ್ಯಾಂಡ್ ಆಸೀಸ್ ಪಡೆಯನ್ನು ಪ್ರತಿನಿಧಿಸಿದ್ದರು. ಇದೀಗ ಬ್ರೆಂಡನ್ ಡಾಗೆಟ್ ಚೊಚ್ಚಲ ಟೆಸ್ಟ್ ಪಂದ್ಯವಾಡಲು ಅಣಿಯಾಗಿದ್ದಾರೆ.

ಇದರೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ನಲ್ಲಿ ಜೊತೆಯಾಗಿ ಕಣಕ್ಕಿಳಿದ ಮೊದಲ ಮೂಲ ನಿವಾಸಿ ಜೋಡಿ ಎಂಬ ಹೆಗ್ಗಳಿಕೆ ಸ್ಕಾಟ್ ಬೋಲ್ಯಾಂಡ್ ಹಾಗೂ ಬ್ರೆಂಡನ್ ಡಾಗೆಟ್ ಪಾಲಾಗಲಿದೆ. ಪರ್ತ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಇಬ್ಬರು ಇಂಡಿಜಿನಸ್ ಆಸ್ಟ್ರೇಲಿಯನ್ನರು ಹೊಸ ಇತಿಹಾಸ ನಿರ್ಮಿಸಲಿದ್ದಾರೆ.

ಮೊದಲ ಟೆಸ್ಟ್ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್.
Published On - 12:54 pm, Thu, 20 November 25