Forbes India 2026: ಭಾರತದ ಟಾಪ್ 5 ‘ಶ್ರೀಮಂತ’ ಕ್ರಿಕೆಟಿಗರು ಇವರೇ!
Forbes India 2026: ಪ್ರತಿವರ್ಷದಂತೆ ಈ ಬಾರಿಯೂ ಇಡೀ ಕಾರ್ಪೊರೇಟ್ ಜಗತ್ತು ಕುತೂಹಲದಿಂದ ಕಾಯುತ್ತಿದ್ದ 'ಫೋರ್ಬ್ಸ್ ಇಂಡಿಯಾ ಶೋಸ್ಟಾಪರ್ಸ್' (Forbes India Showstoppers 2026) ಬ್ರ್ಯಾಂಡ್ ಮೌಲ್ಯಮಾಪನ ಪಟ್ಟಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ ಈ ಬಾರಿಯೂ ಭಾರತೀಯ ಕ್ರಿಕೆಟಿಗರು ಮಾರುಕಟ್ಟೆಯಲ್ಲಿ ತಮ್ಮ ದಶಕಗಳ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕ್ರೀಡಾ ಲೋಕದ ಸಾಧನೆ ಮಾತ್ರವಲ್ಲದೆ, ಸೋಶಿಯಲ್ ಮೀಡಿಯಾ ಫಾಲೋವರ್ಸ್, ಎಂಡೋರ್ಸ್‌ಮೆಂಟ್‌ಗಳು ಮತ್ತು ಉದ್ಯಮ ರಂಗದ ಹೂಡಿಕೆಗಳ ಆಧಾರದ ಮೇಲೆ ಸಿದ್ಧವಾಗಿರುವ 2026ರ ಭಾರತದ ಮೋಸ್ಟ್ ವ್ಯಾಲ್ಯೂಯೆಬಲ್ ಟಾಪ್ 5 ಕ್ರಿಕೆಟಿಗರ ಸಂಪೂರ್ಣ ವಿವರ ಇಲ್ಲಿದೆ...
Updated on: Aug 29, 2026 | 10:22 AM

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಧರ್ಮ. ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಮೂಲಕ ಅಬ್ಬರಿಸುವ ನಮ್ಮ ಕ್ರಿಕೆಟ್ ತಾರೆಯರು, ಮೈದಾನದ ಹೊರಗೂ ಬ್ರ್ಯಾಂಡ್ ಲೋಕದ ಸುಲ್ತಾನರಾಗಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಫೋರ್ಬ್ಸ್ ಇಂಡಿಯಾ ಶೋಸ್ಟಾಪರ್ಸ್ 2026' (Forbes India Showstoppers 2026) ವರದಿಯ ಪ್ರಕಾರ, ಭಾರತದ ಅತ್ಯಂತ ದುಬಾರಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಟಾಪ್ 5 ಕ್ರಿಕೆಟಿಗರ ಪಟ್ಟಿ ಇಲ್ಲಿದೆ. (PC: Getty Images)

ಕಿಂಗ್ ಕೊಹ್ಲಿ ನಂಬರ್ 1: ಬ್ರ್ಯಾಂಡ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಅವರ ಸಾಮ್ರಾಜ್ಯ ಅಲುಗಾಡದಂತೆ ಮುಂದುವರಿದಿದೆ. ಬರೋಬ್ಬರಿ ₹3,542 ಕೋಟಿ ಮೌಲ್ಯದೊಂದಿಗೆ ಅವರು ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಭಾರತದ ಒಟ್ಟಾರೆ ಸೆಲೆಬ್ರಿಟಿಗಳ ಪಟ್ಟಿಯಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. (PC: Getty Images)

ನಿವೃತ್ತಿಯಾದರೂ ತಗ್ಗದ ಕ್ರೇಝ್: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ ಎಂ.ಎಸ್. ಧೋನಿ (₹2,141 ಕೋಟಿ) ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (₹1,676 ಕೋಟಿ) ಅವರ ಜನಪ್ರಿಯತೆ ಮತ್ತು ಬ್ರ್ಯಾಂಡ್ ಮೌಲ್ಯ ಇಂದಿಗೂ ಬಾಲಿವುಡ್‌ನ ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ಗಳಿಗಿಂತ ಹೆಚ್ಚಾಗಿದೆ. (PC: Getty Images)

ಬುಮ್ರಾ ಬೂಮ್ ಬೂಮ್: ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ಅವರ ಗ್ರಾಫ್ ಭಾರಿ ವೇಗದಲ್ಲಿ ಹೆಚ್ಚಳವಾಗಿದೆ. ಅವರು ₹1,142 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ರೋಹಿತ್ ಶರ್ಮಾ ಅವರನ್ನೂ ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. (PC: Getty Images)

ಹಿಟ್‌ಮ್ಯಾನ್ ಕಮಾಂಡ್: ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮಾ ಅವರು ₹1,055 ಕೋಟಿ ಮೌಲ್ಯದೊಂದಿಗೆ ಟಾಪ್ 5 ರೇಸ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. (PC: Getty Images)




