Team India: ರೋಹಿತ್ ಬಳಿಕ ಟೀಂ ಇಂಡಿಯಾದ ನಾಯಕ ಯಾರು? ಹೆಸರು ಸೂಚಿಸಿದ ರವಿಶಾಸ್ತ್ರಿ
Team India: ಸದ್ಯ ರೋಹಿತ್ ತಂಡವನ್ನು ಮುನ್ನಡೆಸುತ್ತಿದ್ದು ಅವರಿಗೆ 36 ವರ್ಷ. ಹೀಗಾಗಿ ರೋಹಿತ್ ಬಹಳ ಕಾಲ ಟೀಂ ಇಂಡಿಯಾದ ನಾಯಕತ್ವವಹಿಸುವುದು ಅಸಾಧ್ಯ. ಆದ್ದರಿಂದ ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಆರಂಭವಾಗಿದೆ.
1 / 7
ಭಾರತ ಐಸಿಸಿ ಪ್ರಶಸ್ತಿ ಗೆದ್ದು 10 ವರ್ಷಗಳೇ ಕಳೆದು ಹೋಗಿದೆ. ಧೊನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ನಂತರ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹಲವು ಬಾರಿ ಭಾರತ ಪ್ರಶಸ್ತಿಯ ಹತ್ತಿರಕ್ಕೆ ಹೋಗಿ ಖಾಲಿ ಕೈಯಲ್ಲಿ ವಾಪಸ್ಸಾಗಿದೆ.
2 / 7
ಮೊದಲ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ನಲ್ಲಿ ಟೀಂ ಇಂಡಿಯಾ ಸೋತ ಬಳಿಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಅವರನ ನಂತರ ತಂಡದ ನಾಯಕತ್ವವಹಿಸಿಕೊಂಡ ರೋಹಿತ್ ಭಾರತಕ್ಕೆ ಐಸಿಸಿ ಟ್ರೋಫಿ ಗೆಲ್ಲಿಸಿಕೊಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ರೋಹಿತ್ ನಾಯಕನಾದ ಮೇಲೆ ಭಾರತ 2 ಐಸಿಸಿ ಈವೆಂಟ್ ಆಡಿದ್ದು, ಈ ಎರಡರಲ್ಲೂ ಸೋತಿದೆ.
3 / 7
ಪ್ರಸ್ತುತ ಭಾರತ ಈ ಬಾರಿಯ ಏಕದಿನ ವಿಶ್ವಕಪ್ಗೆ ಆತಿಥ್ಯವಹಿಸುತ್ತಿದೆ. ಹೀಗಾಗಿ ಈ ವರ್ಷವಾದರೂ ಭಾರತಕ್ಕೆ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರಲಾರಂಭಿಸಿದೆ.
4 / 7
ಸದ್ಯ ರೋಹಿತ್ ತಂಡವನ್ನು ಮುನ್ನಡೆಸುತ್ತಿದ್ದು ಅವರಿಗೆ 36 ವರ್ಷ. ಹೀಗಾಗಿ ರೋಹಿತ್ ಬಹಳ ಕಾಲ ಟೀಂ ಇಂಡಿಯಾದ ನಾಯಕತ್ವವಹಿಸುವುದು ಅಸಾಧ್ಯ ಹೀಗಾಗಿ ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಆರಂಭವಾಗಿದೆ. ಆದಕ್ಕಾಗಿ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಸೂಕ್ತ ಹೆಸರೊಂದನ್ನು ಸೂಚಿಸಿದ್ದಾರೆ.
5 / 7
ಭವಿಷ್ಯದ ನಾಯಕನ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮುಂಬರುವ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಬೇಕಾದವರು ರೋಹಿತ್ ಆಗಿರಬೇಕು. ಆದರೆ ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ಏಕದಿನ ನಾಯಕತ್ವವನ್ನು ನೀಡಬೇಕು ಎಂದಿದ್ದಾರೆ.
6 / 7
ವಿಶ್ವಕಪ್ ನಂತರ, ಪಾಂಡ್ಯ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ರೋಹಿತ್ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಬೇಕು. ಅಲ್ಲಿ ಯಾವುದೇ ಪ್ರಶ್ನೆಯಿಲ್ಲ ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ
7 / 7
ಸದ್ಯ ಹಾರ್ದಿಕ್ ಪಾಂಡ್ಯ ಟಿ20 ತಂಡದ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಟಿ20 ತಂಡದ ಖಾಯಂ ನಾಯಕತ್ವ ನೀಡಲು ಬಿಸಿಸಿಐ ಚಿಂತಿಸಿದೆ. ಹೀಗಾಗಿ ಟಿ20 ಹಾಗೂ ಏಕದಿನ ನಾಯಕತ್ವ ಒಬ್ಬ ವ್ಯಕ್ತಿಯ ಕೈಯಲ್ಲಿರುವುದು ಸೂಕ್ತ ಎಂಬುದು ಶಾಸ್ತ್ರಿ ಅವರ ಅಭಿಪ್ರಾಯವಾಗಿದೆ.