ಭಾರತ- ಆಸೀಸ್ ಕಾಳಗದಲ್ಲಿ ಸೃಷ್ಟಿಯಾದ ಅಗತ್ಯ- ಅನಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ
IND vs aus: ಐಸಿಸಿ ವಿಶ್ವಕಪ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದು ಬಾರಿಯ ಚಾಂಪಿಯನ್ಗಳಿಗೆ ಸೋಲಿನ ಶಾಕ್ ನೀಡಿದೆ. ಈ ಗೆಲುವಿನೊಂದಿಗೆ ಭಾರತ ಕೆಲವು ಅನಗತ್ಯ ದಾಖಲೆಗಳನ್ನು ಬರೆದರೆ, ಸೋತ ಆಸ್ಟ್ರೇಲಿಯಾದ ಆಟಗಾರರು ಕೆಲವು ಅಗತ್ಯ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
1 / 9
ಐಸಿಸಿ ವಿಶ್ವಕಪ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದು ಬಾರಿಯ ಚಾಂಪಿಯನ್ಗಳಿಗೆ ಸೋಲಿನ ಶಾಕ್ ನೀಡಿದೆ.
2 / 9
ಈ ಗೆಲುವಿನೊಂದಿಗೆ ಭಾರತ ಕೆಲವು ಅನಗತ್ಯ ದಾಖಲೆಗಳನ್ನು ಬರೆದರೆ, ಸೋತ ಆಸ್ಟ್ರೇಲಿಯಾದ ಆಟಗಾರರು ಕೆಲವು ಅಗತ್ಯ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
3 / 9
ಟೀಂ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ವೇಗದ ಬೌಲರ್ ಎಂಬ ದಾಖಲೆ ಸೃಷ್ಟಿಸಿದರು.
4 / 9
ಟೀಂ ಇಂಡಿಯಾ ವಿರುದ್ಧ 52 ಎಸೆತಗಳಲ್ಲಿ 6 ಬೌಂಡರಿ ಸಹಿತ 41 ರನ್ ಬಾರಿಸಿದ ಡೇವಿಡ್ ವಾರ್ನರ್, ಏಕದಿನ ವಿಶ್ವಕಪ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದರು.
5 / 9
ಇದರ ಜೊತೆಗೆ ಬೇಡದ ದಾಖಲೆಯನ್ನೂ ತನ್ನದಾಗಿಸಿಕೊಂಡ ಆಸೀಸ್, 1992ರ ನಂತರ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸೋಲೊಂಡಿತು. ಹಾಗೆಯೇ 36 ವರ್ಷಗಳ ಬಳಿಕ ಚೆನ್ನೈನ ಚೆಪಾಕ್‌ನಲ್ಲಿ ಭಾರತದ ವಿರುದ್ಧ ಮೊದಲ ಬಾರಿಗೆ ಸೋಲೊಪ್ಪಿಕೊಂಡಿತು.
6 / 9
ಈ ಪಂದ್ಯದಲ್ಲಿ ಆಸೀಸ್ ಆರಂಭಿಕ ಮಿಚೆಲ್ ಮಾರ್ಷ್ ಅವರ ಕ್ಯಾಚ್ ಪಡೆದ ವಿರಾಟ್, ಈ ಕ್ಯಾಚ್ನೊಂದಿಗೆ ವಿಶ್ವಕಪ್‌ನಲ್ಲಿ 14 ಕ್ಯಾಚ್ಗಳನ್ನು ಹಿಡಿದ ದಾಖಲೆ ನಿರ್ಮಿಸಿದರು. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಭಾರತೀಯ ಫೀಲ್ಡರ್ ಎಂಬ ದಾಖಲೆ ಕಿಂಗ್ ಕೊಹ್ಲಿ ಪಾಲಾಯಿತು.
7 / 9
ಅಲ್ಲದೆ ಐಸಿಸಿ ಈವೆಂಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. ಟಿ20 + ಏಕದಿನ + ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಕೊಹ್ಲಿ ಪ್ರಸ್ತುತ 64 ಐಸಿಸಿ ಇನ್ನಿಂಗ್ಸ್‌ಗಳಲ್ಲಿ 2720 ರನ್ ಗಳಿಸಿದ್ದರೆ, ಸಚಿನ್ 58 ಇನ್ನಿಂಗ್ಸ್‌ಗಳಲ್ಲಿ 2719 ರನ್ ಗಳಿಸಿದ್ದಾರೆ.
8 / 9
ಜೊತೆಗೆ, ಕೊಹ್ಲಿ ಮತ್ತು ಕೆಎಲ್ ರಾಹುಲ್ 165 ರನ್‌ಗಳ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅತಿ ದೊಡ್ಡ ಜೊತೆಯಾಟ ಎಂಬ ದಾಖಲೆಯನ್ನು ಈ ಜೋಡಿ ಬರೆಯಿತು.
9 / 9
ಇದೆಲ್ಲದರ ನಡುವೆ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗಿ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಏಕದಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಬ್ಯಾಟರ್ಗಳು ಶೂನ್ಯ ಸಂಪಾದಿಸಿದ ಅನಗತ್ಯ ದಾಖಲೆಯನ್ನು ಈ ಮೂವರು ಬರೆದರು.