50 ಶತಕ, ಟೈಮ್ ಔಟ್, ದ್ವಿಶತಕ.. ಈ 12 ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು 2023 ರ ಏಕದಿನ ವಿಶ್ವಕಪ್
ICC World Cup 2023: 46 ದಿನಗಳು ಮತ್ತು 48 ಪಂದ್ಯಗಳ ಸುದೀರ್ಘ ವಿಶ್ವಕಪ್ ಪಯಾಣ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ, ಆತಿಥೇಯ ಭಾರತವನ್ನು ಸೋಲಿಸಿ ಆರನೇ ಏಕದಿನ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಾಗೆಯೇ 2023 ರ ಇಡೀ ವಿಶ್ವಕಪ್ ಹಲವು ಅಚ್ಚರಿಯ ಸಂಗತಿಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖ 10 ಘಟನೆಗಳ ಬಗ್ಗೆ ವಿವರ ಇಲ್ಲಿದೆ.
1 / 14
46 ದಿನಗಳು ಮತ್ತು 48 ಪಂದ್ಯಗಳು ಸುದೀರ್ಘ ವಿಶ್ವಕಪ್ ಪಯಾಣ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಸೋಲಿಸಿ ಆರನೇ ಏಕದಿನ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಾಗೆಯೇ 2023 ರ ಇಡೀ ವಿಶ್ವಕಪ್ ಹಲವು ಅಚ್ಚರಿಯ ಸಂಗತಿಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖ 10 ಘಟನೆಗಳ ಬಗ್ಗೆ ವಿವರ ಇಲ್ಲಿದೆ.
2 / 14
ವೇಗದ ಶತಕ ಸಿಡಿಸಿದ ಮಾರ್ಕ್ರಾಮ್: ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ 49 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2011 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ನ ಕೆವಿನ್ ಒ'ಬ್ರೇನ್ 50 ಎಸೆತಗಳಲ್ಲಿ ಶತಕ ಬಾರಿಸಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಆದರೆ ಇದೇ ಪಂದ್ಯಾವಳಿಯ ಅಂತ್ಯದ ವೇಳೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಈ ದಾಖಲೆಯನ್ನು ಮುರಿದರು.
3 / 14
ಪಾಕಿಸ್ತಾನದ ದಾಖಲೆ ಚೇಸ್: ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಶತಕಗಳ ನೆರವಿನಿಂದ ಪಾಕಿಸ್ತಾನವು ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 345 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ಬರೆಯಿತು. ಈ ಪಂದ್ಯದಲ್ಲಿ ರಿಜ್ವಾನ್ ಔಟಾಗದೆ 131 ರನ್ ಗಳಿಸಿದರೆ, ಶಫೀಕ್ 113 ರನ್ ಗಳಿಸಿದರು.
4 / 14
ಅಚ್ಚರಿಯ ಫಲಿತಾಂಶ ನೀಡಿದ ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್: ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ 285 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 215 ರನ್‌ಗಳಿಗೆ ಆಲೌಟ್ ಆಯಿತು.
5 / 14
ಎಂಟು ದಿನಗಳ ನಂತರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ 283 ರನ್ ಬೆನ್ನಟ್ಟಿ ನೆರೆಯ ಪಾಕಿಸ್ತಾನಕ್ಕೆ ಸೋಲಿನ ಶಾಕ್ ನೀಡಿತು. ತಂಡದ ಪರ ಇಬ್ರಾಹಿಂ ಝದ್ರಾನ್, ರಹಮತ್ ಶಾ ಮತ್ತು ಗುರ್ಬಾಜ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.
6 / 14
ನೆದರ್ಲೆಂಡ್ಸ್ ತಂಡ ಕೂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿತ್ತು.
7 / 14
ರೆಕಾರ್ಡ್-ಬ್ರೇಕರ್ ಮ್ಯಾಕ್ಸ್‌ವೆಲ್: ದೆಹಲಿಯಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಮ್ಯಾಕ್ಸ್‌ವೆಲ್ ಮಾರ್ಕ್ರಾಮ್ ಅವರ ವೇಗದ ವಿಶ್ವಕಪ್ ಶತಕ ದಾಖಲೆಯನ್ನು ಮುರಿದರು. ಇದರೊಂದಿಗೆ ಏಕದಿನದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎಂಬ ದಾಖಲೆಯನ್ನು ಮ್ಯಾಕ್ಸ್‌ವೆಲ್ ಬರೆದರು.
8 / 14
ರನ್ ಮಳೆ ಸುರಿಸಿದ ಆಸ್ಟ್ರೇಲಿಯಾ- ನ್ಯೂಜಿಲೆಂಡ್: ಧರ್ಮಶಾಲಾದಲ್ಲಿ ನಡೆದ ಪಂದ್ಯ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ಗೆ ಸಾಕ್ಷಿಯಾಯಿತು. ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ ಐದು ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 388 ರನ್ ಕಲೆಹಾಕಿದರೆ, ಹೋರಾಟ ನೀಡಿದ ನ್ಯೂಜಿಲೆಂಡ್ 383 ರನ್ ಕಲೆಹಾಕಿ ಸೋತಿತು.
9 / 14
ಒಟ್ಟು ಈ ಪಂದ್ಯದಲ್ಲಿ ಉಭಯ ತಂಡಗಳಿಂದ 771 ರನ್ ಕಲೆಹಾಕಲಾಯಿತು. ಇದು ವಿಶ್ವಕಪ್‌ನಲ್ಲಿ ದಾಖಲಾದ ಅತಿ ಹೆಚ್ಚು ಸ್ಕೋರ್ ಎನಿಸಿಕೊಂಡಿತು. ಇದಕ್ಕೂ ಮೊದಲು ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 754 ರನ್ ಸಿಡಿದಿದ್ದು ಈ ಮೊದಲ ದಾಖಲೆಯಾಗಿತ್ತು.
10 / 14
ಭಾರತದ ಮುಂದೆ ಲಂಕಾ ತತ್ತರ: ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ 302 ರನ್‌ಗಳ ಬೃಹತ್ ಗೆಲುವಿನೊಂದಿಗೆ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಭಾರತ ನೀಡಿದ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು.
11 / 14
ಟೈಮ್ ಔಟ್ ವಿವಾದ: ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಈ ವಿಶ್ವಕಪ್‌ನಲ್ಲಿ 146 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೈಮ್ ಔಟ್ ಆದ ಆಟಗಾರ ಎಂಬ ಕುಖ್ಯಾತಿಗೆ ಸಾಕ್ಷಿಯಾದರು.
12 / 14
ಮ್ಯಾಕ್ಸ್‌ವೆಲ್ ದ್ವಿಶತಕ: ಮುಂಬೈನಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 201 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಆಸ್ಟ್ರೇಲಿಯಾವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು. ಮ್ಯಾಕ್ಸ್‌ವೆಲ್ ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್ ಸಹಾಯದಿಂದ ಈ ದ್ವಿಶತಕ ಸಿಡಿಸಿದ್ದರು.
13 / 14
ಶತಕಗಳ ಅರ್ಧಶತಕ ಸಿಡಿಸಿದ ಕೊಹ್ಲಿ: ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ 50 ನೇ ಏಕದಿನ ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಮುರಿದರು.
14 / 14
ಆಸೀಸ್ ಚಾಂಪಿಯನ್; ಆರಂಭದಲ್ಲಿ ಸತತ ಎರಡು ಪಂದ್ಯದ ಸೋತಿದ್ದ ಆಸೀಸ್ ಆ ಬಳಿಕ ಪುಟಿದೆದ್ದು ಫೈನಲ್ ತಲುಪಿತ್ತು. ಬಳಿಕ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 90,000 ಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ ಟೀಂ ಇಂಡಿಯಾವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿಯಿತು.