ವಿಶೇಷ ಎಂದರೆ ನಮೀಬಿಯಾ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಲಿದೆ. ಆದಾಗ್ಯೂ, ಅವರ ಭಾಗವಹಿಸುವಿಕೆ ಇನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ಏಕೆಂದರೆ ನಮೀಬಿಯಾ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿಲ್ಲ. ಅಂದರೆ ಪಂದ್ಯಾವಳಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಮೀಬಿಯಾ ಅರ್ಹತಾ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 2003 ರಿಂದ ನಮೀಬಿಯಾ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಗಮನಿಸಬೇಕಾಗದ ಸಂಗತಿ.