IPL 2023: RCB ಪರ ವಿಶೇಷ ದಾಖಲೆ ನಿರ್ಮಿಸಿದ ಗ್ಲೆನ್ ಮ್ಯಾಕ್ಸ್​ವೆಲ್

| Updated By: ಝಾಹಿರ್ ಯೂಸುಫ್

Updated on: Apr 23, 2023 | 7:30 PM

IPL 2023 Kannada: ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

1 / 8
IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದೊಂದಿಗೆ ವಿಶೇಷ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

2 / 8
ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 77 ರನ್​ ಬಾರಿಸಿದ್ದರು.

3 / 8
ಈ ಅರ್ಧಶತಕದೊಂದಿಗೆ ಆರ್​ಸಿಬಿ ಪರ 1000 ರನ್ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೂ ಗ್ಲೆನ್ ಮ್ಯಾಕ್ಸ್​ವೆಲ್ ಸೇರ್ಪಡೆಯಾದರು. ಆರ್​ಸಿಬಿ ಪರ ಇದುವರೆಗೆ ಕೇವಲ 5 ಬ್ಯಾಟರ್​ಗಳು ಮಾತ್ರ ಸಾವಿರ ರನ್​ ಕಲೆಹಾಕಿದ್ದಾರೆ. ಆ ಬ್ಯಾಟರ್​ಗಳೆಂದರೆ...

4 / 8
1- ವಿರಾಟ್ ಕೊಹ್ಲಿ: ಐಪಿಎಲ್​ ಆರಂಭದಿಂದಲೂ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಇದುವರೆಗೆ 6903 ರನ್​ ಕಲೆಹಾಕಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 8
2- ಎಬಿ ಡಿವಿಲಿಯರ್ಸ್: 2011 ರಿಂದ 2021 ರವರೆಗೆ ಆರ್​ಸಿಬಿ ಪರ ಆಡಿದ್ದ ಎಬಿಡಿ ಒಟ್ಟು 4491 ರನ್​ ಕಲೆಹಾಕಿದ್ದರು.

6 / 8
3- ಕ್ರಿಸ್ ಗೇಲ್: 2011 ರಿಂದ 2017 ರವರೆಗೆ ಆರ್​ಸಿಬಿ ಪರ ಬ್ಯಾಟ್ ಬೀಸಿದ್ದ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಒಟ್ಟು 3163 ರನ್ ಕಲೆಹಾಕಿದ್ದರು.

7 / 8
4- ಜಾಕ್ಸ್ ಕಾಲಿಸ್: 2008 ರಿಂದ 2010 ರವರೆಗೆ ಆರ್​ಸಿಬಿ ಪರ ಆಡಿದ್ದ ಜಾಕ್ಸ್ ಕಾಲಿಸ್ ಒಟ್ಟು 1162 ರನ್​ ಕಲೆಹಾಕಿದ್ದರು.

8 / 8
5- ಗ್ಲೆನ್ ಮ್ಯಾಕ್ಸ್​ವೆಲ್: 2021 ರಿಂದ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ಗ್ಲೆನ್ ಮ್ಯಾಕ್ಸ್​ವೆಲ್ ಇದೀಗ 1000* ರನ್​ ಪೂರೈಸಿ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.