IPL 2024: ಸ್ಟಾರ್ ಪ್ಲೇಯರ್ ಕಂಬ್ಯಾಕ್; ಗುಜರಾತ್ ಟೈಟಾನ್ಸ್ ತಂಡಕ್ಕೆ ಬಂತು ಆನೆ ಬಲ..!
IPL 2024: 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ತಂಡದ ಸ್ಟಾರ್ ಆಟಗಾರರ ಅಲಭ್ಯತೆ ಹಾಗೂ ಇಂಜುರಿಯಿಂದಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೊನೆಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಐಪಿಎಲ್ ಆಡುವುದು ಖಚಿತವಾಗಿದೆ.
1 / 8
17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ತಂಡದ ಸ್ಟಾರ್ ಆಟಗಾರರ ಅಲಭ್ಯತೆ ಹಾಗೂ ಇಂಜುರಿಯಿಂದಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೊನೆಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಐಪಿಎಲ್ ಆಡುವುದು ಖಚಿತವಾಗಿದೆ.
2 / 8
2023ರ ವಿಶ್ವಕಪ್ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ರಶೀದ್ ಖಾನ್ ಅಂದಿನಿಂದ ಕ್ರಿಕೆಟ್ನಿಂದ ದೂರ ಸರಿದಿದ್ದರು. ಆದರೀಗ ಪೂರ್ಣ ಚೇತರಿಸಿಕೊಂಡು ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಈ ಹಿಂದೆ ಬಂದ ವರದಿಯ ಪ್ರಕಾರ ರಶೀದ್ ಐಪಿಎಲ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು.
3 / 8
2023ರ ಏಕದಿನ ವಿಶ್ವಕಪ್ ಬಳಿಕ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದ ರಶೀದ್, ಇದೀಗ ನಡೆಯಲ್ಲಿರುವ ಐರ್ಲೆಂಡ್ ವಿರುದ್ಧದ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ.
4 / 8
ವಾಪಸಾಗುವ ಮುನ್ನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಜತೆ ಮಾತನಾಡಿದ ರಶೀದ್, ನನ್ನ ತರಬೇತಿ ಉತ್ತಮವಾಗಿ ನಡೆಯುತ್ತಿದೆ. ಕೆಲವು ದಿನಗಳ ನಂತರ ನಾನು ಮತ್ತೆ ರಾಷ್ಟ್ರೀಯ ಜರ್ಸಿಯನ್ನು ಧರಿಸಲು ಮತ್ತು ನನ್ನ ದೇಶಕ್ಕಾಗಿ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.
5 / 8
ಕಳೆದ ಮೂರು ತಿಂಗಳು ನನಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಕಷ್ಟವಾಗಿತ್ತು. ಕಳೆದ ಏಳೆಂಟು ತಿಂಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ನನಗೆ ವಿಶ್ವಕಪ್‌ಗೂ ಮುನ್ನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಹೇಳಿದ್ದರು. ಆದರೆ ವಿಶ್ವಕಪ್ ಆಡಿದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದೆ ಎಂದಿದ್ದಾರೆ.
6 / 8
ಇದರರ್ಥ ಪ್ರಸ್ತುತ ದೇಶೀಯ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿರುವ ರಶೀದ್ ಖಾನ್ ಮುಂಬರುವ ಐಪಿಎಲ್ನಲ್ಲೂ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ರಶೀದ್ ಆಗಮನ ಗುಜರಾತ್ ತಂಡಕ್ಕೆ ಆನೆ ಬಲ ತಂದಿರುವುದು ಸುಳ್ಳಲ್ಲ.
7 / 8
ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನವೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದಿದ್ದರು. ಆ ನಂತ್ ತಂಡದ ಬೌಲಿಂಗ್ ಜೀವಾಳ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಈ ಇಬ್ಬರ ಅಲಭ್ಯತೆ ತಂಡವನ್ನು ಸಾಕಷ್ಟು ತೊಂದರೆಗೀಡು ಮಾಡಿತ್ತು.
8 / 8
ಗುಜರಾತ್ ಟೈಟಾನ್ಸ್ ಪೂರ್ಣ ತಂಡ: ಶುಭ್ಮನ್ ಗಿಲ್, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಸುಶಾಂತ್ ಮಿಶ್ರಾ, ಶಾರುಖ್ ಖಾನ್, ಕಾರ್ತಿಕ್ ತ್ಯಾಗಿ, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ಮೊ.ರಾಹುಲ್, ಜಯಂತ್ ಯ್ಯಾಂತ್ಮಿ, ರಾಹುಲ್, ಜಯಂತ್ ಯಾದ್ವಂದ್, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ ಲಿಟಲ್, ರಾಬಿನ್ ಮಿನ್ನೆಸ್, ಸ್ಪೆನ್ಸರ್ ಜಾನ್ಸನ್, ಮಾನವ್ ಸುತಾರ್ ಮತ್ತು ಮೋಹಿತ್ ಶರ್ಮಾ.