- Kannada News Photo gallery Cricket photos list of 5 popular players who never played for their home franchise in IPL
IPL: ಕೊಹ್ಲಿ ಸೇರಿದಂತೆ ಈ ಐವರು ಒಮ್ಮೆಯೂ ತವರು ತಂಡದ ಪರ ಐಪಿಎಲ್ ಆಡಿಲ್ಲ..!
IPL: ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ತವರು ತಂಡದ ಪರ ಕ್ರಿಕೆಟ್ ಆಡಬೇಕೆಂಬ ಮಹದಾಸೆಯನ್ನು ಹೊಂದಿರುತ್ತಾನೆ. ಆದರೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಮಾತ್ರ ಈ ಕನಸು ಕೆಲವು ಖ್ಯಾತ ಕ್ರಿಕೆಟಿಗರ ಪಾಲಿಗೆ ಇನ್ನು ಕನಸಾಗೆ ಉಳಿದಿದೆ. ಅಂತಹ ಪ್ರಮುಖ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.
Updated on:Mar 11, 2024 | 7:02 PM

ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ತವರು ತಂಡದ ಪರ ಕ್ರಿಕೆಟ್ ಆಡಬೇಕೆಂಬ ಮಹದಾಸೆಯನ್ನು ಹೊಂದಿರುತ್ತಾನೆ. ಆದರೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಮಾತ್ರ ಈ ಕನಸು ಕೆಲವು ಖ್ಯಾತ ಕ್ರಿಕೆಟಿಗರ ಪಾಲಿಗೆ ಇನ್ನು ಕನಸಾಗೆ ಉಳಿದಿದೆ. ಅಂತಹ ಪ್ರಮುಖ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.

ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ವ ಕ್ರಿಕೆಟ್ನ ಸದ್ಯದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದಲೂ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. 2008 ರಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡ ಕೊಹ್ಲಿ ಖರೀದಿಗೆ ಡೆಲ್ಲಿ ತಂಡ ಮುಂದಾಗಲಿಲ್ಲ. ಅಲ್ಲಿಂದ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ, ಆರ್ಸಿಬಿ ಹೊರತಾಗಿ ಇನ್ಯಾವ ತಂಡದ ಪರವೂ ಐಪಿಎಲ್ ಆಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ದಿನೇಶ್ ಕಾರ್ತಿಕ್: ಟೀಂ ಇಂಡಿಯಾದ ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಐಪಿಎಲ್ ವೃತ್ತಿಜೀವನ ಇನ್ನೇನು ಕೊನೆಯ ಹಂತದಲ್ಲಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಟ್ಟು 6 ಫ್ರಾಂಚೈಸಿಗಳನ್ನು ಕಾರ್ತಿಕ್ ಪ್ರತಿನಿಧಿಸಿದ್ದಾರೆ. ಆದರೆ ಅವರು ತಮ್ಮ ತವರು ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ.

ಹರ್ಭಜನ್ ಸಿಂಗ್: ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ನಲ್ಲಿ ದೀರ್ಘಕಾಲ ಆಡಿದ ಟರ್ಬನೇಟರ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಆದರೆ ಹರ್ಭಜನ್ ಸಿಂಗ್ ಇದುವರೆಗೆ ಪಂಜಾಬ್ ಫ್ರಾಂಚೈಸಿ ಪರ ಐಪಿಎಲ್ ಆಡಿಲ್ಲ.

ಶುಭ್‌ಮನ್ ಗಿಲ್: ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಗಿಲ್, ಆ ನಂತರ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಈಗ ಗುಜರಾತ್ ತಂಡದ ನಾಯಕರೂ ಆಗಿದ್ದಾರೆ. ಆದರೆ ಇಲ್ಲಿಯವರೆಗೆ, ಶುಭ್‌ಮನ್ ತಮ್ಮ ತವರು ಫ್ರಾಂಚೈಸಿಯಾದ ಪಂಜಾಬ್ ಪಡ ಐಪಿಎಲ್ ಆಡಲು ಸಾಧ್ಯವಾಗಿಲ್ಲ.

ಜಸ್ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿರುವ ಬುಮ್ರಾ ಬರೋಡಾ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು. ಆದರೆ ತಮ್ಮ ತವರು ಫ್ರಾಂಚೈಸಿಗಳಾದ ಗುಜರಾತ್ ಲಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಬುಮ್ರಾಗೆ ಆಡುವ ಅವಕಾಶ ಸಿಕ್ಕಿಲ್ಲ.
Published On - 7:02 pm, Mon, 11 March 24




