- Kannada News Photo gallery Cricket photos Gujarat Giants skipper Beth Mooney ruled out of the WPL 2023 Sneh Rana named to captain
WPL 2023: ಆರ್ಸಿಬಿ ಮಣಿಸಿದ ಗುಜರಾತ್ಗೆ ಬಿಗ್ ಶಾಕ್; ನಾಯಕಿ ಬೆತ್ ಮೂನಿ ಟೂರ್ನಿಯಿಂದಲೇ ಔಟ್!
WPL 2023: ಖಾಯಂ ನಾಯಕಿ ಬೆತ್ ಮೂನಿ ತಂಡದಿಂದ ಹೊರಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಟೀಂ ಇಂಡಿಯಾ ಆಟಗಾರ್ತಿ ಸ್ನೇಹಾ ರಾಣಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಗುಜರಾತ್ ಫ್ರಾಂಚೈಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Updated on:Mar 09, 2023 | 1:36 PM

ಸತತ ಎರಡು ಸೋಲಿನ ಬಳಿಕ ಆರ್ಸಿಬಿ ವಿರುದ್ಧ ಗೆಲ್ಲುವುದರೊಂದಿಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದ್ದ ಗುಜರಾತ್ ಜೈಂಟ್ಸ್ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಂಡದ ನಾಯಕಿ ಬೆತ್ ಮೂನಿ ಮಹಿಳಾ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದಾರೆ.

ಲೀಗ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗುಜರಾತ್ ಸೆಣೆಸಾಡಿತ್ತು. ಈ ಪಂದ್ಯದಲ್ಲಿ ಮೊದಲ ಓವರ್ನಲ್ಲಿಯೇ ಗಾಯಗೊಂಡಿದ್ದ ಮೂನಿ ಅವರು ಮೈದಾನವನ್ನು ತೊರೆದಿದ್ದರು. ಆ ಬಳಿಕ ಮೂನಿ ಅವರಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಈಗ ಹೊರಬಂದಿರುವ ಮಾಹಿತಿ ಪ್ರಕಾರ ಮೂನಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಖಾಯಂ ನಾಯಕಿ ಬೆತ್ ಮೂನಿ ತಂಡದಿಂದ ಹೊರಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಟೀಂ ಇಂಡಿಯಾ ಆಟಗಾರ್ತಿ ಸ್ನೇಹಾ ರಾಣಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಗುಜರಾತ್ ಫ್ರಾಂಚೈಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಪ್ರತಿನಿಧಿಸುವ ಬೆತ್ ಮೂನಿಯವರನ್ನು ಗುಜರಾತ್ ಫ್ರಾಂಚೈಸಿ ಹರಾಜಿನಲ್ಲಿ 2 ಕೋಟಿ ನೀಡಿ ಖರೀದಿಸಿತ್ತು. ಆರಂಭಿಕರಾಗಿ ಕಣಕ್ಕಿಳಿಯುವ ಮೂನಿ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದರಿಂದ, ಈಗ ಅವರು ಟೂರ್ನಿಯಿಂದ ಹೊರಬಿದ್ದಿರುವುದು ಗುಜರಾತ್ಗೆ ಹಿನ್ನಡೆಯುಂಟು ಮಾಡಿದೆ.

ಗುಜರಾತ್ ಜೈಂಟ್ಸ್ ತಂಡ: ಆಶ್ಲೇ ಗಾರ್ಡ್ನರ್, ಬೆತ್ ಮೂನಿ, ಸ್ನೇಹ ರಾಣಾ, ಮಾನಸಿ ಜೋಶಿ, ಶಬ್ನಮ್ ಶಕೀಲ್, ಸೋಫಿ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಡೈಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿಹಾಮ್ ಗಾಲಾ, ಎಸ್ ಮೇಘನಾ, ಆಶ್ವಿಯಾ ಕುಮಾರಿ, ಜಾರ್ಜಿಯಾ , ಪರುನಿಕಾ ಸಿಸೋಡಿಯಾ.
Published On - 1:24 pm, Thu, 9 March 23




