
ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ತಮ್ಮ ವಿಚ್ಛೇದನವನ್ನು ದೃಢಪಡಿಸಿದ್ದಾರೆ. ಇಬ್ಬರು ಸಹ ಸೋಷಿಯಲ್ ಮೀಡಿಯಾ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ವಿಚ್ಛೇದಿತ ಪತ್ನಿ ನತಾಶಾಗೆ ಪಾಂಡ್ಯ ಕಡೆಯಿಂದ ಸಿಗುವ ಜೀವನಾಂಶ ಎಷ್ಟು ಎಂಬ ಚರ್ಚೆಗಳು ಶುರುವಾಗಿದೆ.

ಈ ಹಿಂದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ನೀಡಿದರೆ, ತನ್ನ ಆಸ್ತಿಯಲ್ಲಿ ಶೇ.70 ರಷ್ಟು ಪತ್ನಿಗೆ ನೀಡಬೇಕಾಗುತ್ತದೆ ಎಂಬ ವರದಿಗಳಾಗಿದ್ದವು. ಆದರೀಗ ನತಾಶಾಗೆ ಪಾಂಡ್ಯ ಕಡೆಯಿಂದ ಪರಿಹಾರವಾಗಿ ಬೃಹತ್ ಮೊತ್ತ ಸಿಗುವುದಿಲ್ಲ ಎಂಬುದು ದೃಢವಾಗಿದೆ. ಇದಕ್ಕೆ ಸಾಕ್ಷಿ ಪಾಂಡ್ಯರ ಹಳೆಯ ವಿಡಿಯೋ.

2018 ರಲ್ಲಿ ಗೌರವ್ ಕಪೂರ್ ಅವರ ‘ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ’ ಸಂದರ್ಶನದಲ್ಲಿ ಮಾತನಾಡಿದ್ದ ಪಾಂಡ್ಯ, ನಾನು ನನ್ನ ಪ್ರತಿಯೊಂದು ಆಸ್ತಿಗಳಲ್ಲೂ ತಾಯಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದೇನೆ. ನಾನು ನನ್ನ ಹೆಸರಿನಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದಕ್ಕೆ ಕಾರಣವನ್ನು ಸಹ ಅವರೇ ಸ್ಪಷ್ಟಪಡಿಸಿದ್ದರು.

ಕಾರುಗಳಿಂದ ಹಿಡಿದು ಮನೆಗಳವರೆಗೆ ಎಲ್ಲವೂ ಅಮ್ಮನ ಹೆಸರಿನಲ್ಲಿದೆ. ನನಗೆ ಯಾರ ಮೇಲೂ ನಂಬಿಕೆಯಿಲ್ಲ. ಹೀಗಾಗಿ ಎಲ್ಲವನ್ನೂ ತಾಯಿಯ ಹೆಸರಿನಲ್ಲೇ ಮಾಡಿಟ್ಟುಕೊಂಡಿದ್ದೇನೆ. ಏಕೆಂದರೆ ಭವಿಷ್ಯದಲ್ಲಿ ಯಾರಿಗೂ 50% ನೀಡಲು ನಾನು ಬಯಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಬಹಿರಂಗವಾಗಿಯೇ ತಿಳಿಸಿದ್ದರು.

ಅಂದರೆ ಭವಿಷ್ಯದಲ್ಲಿ ಮದುವೆಯಾಗಿ ವಿಚ್ಛೇದನವಾದರೆ, ಯಾರಿಗೂ ನಾನು ನನ್ನ ಆಸ್ತಿಯ ಶೇ.50 ರಷ್ಟು ನೀಡಲು ಇಚ್ಛಿಸುವುದಿಲ್ಲ. ಇದಕ್ಕಾಗಿಯೇ ತಾಯಿಯ ಹೆಸರಿನಲ್ಲಿ ಎಲ್ಲವನ್ನು ಖರೀದಿಸುತ್ತೇನೆ. ಹಾಗೆಯೇ ಆಸ್ತಿಯನ್ನು ತಾಯಿಯ ಹೆಸರಿನಲ್ಲಿಯೇ ಮಾಡಿಟ್ಟುಕೊಂಡಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು.

ಇದೀಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ಗೆ ವಿಚ್ಛೇದನ ನೀಡಿದ್ದಾರೆ. ಆದರೆ ಈ ವಿಚ್ಛೇದನದ ಪರಿಹಾರವಾಗಿ ಪಾಂಡ್ಯರ ಆಸ್ತಿಯ ಶೇ.50 ರಷ್ಟು ಪಾಲು ಸಿಗುವುದು ಅನುಮಾನ. ಒಂದು ವೇಳೆ ಸಿಕ್ಕರೂ ಅದು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಹೇಳಿದಂತೆ ಅವರೆಲ್ಲವನ್ನು ತಾಯಿಯ ಹೆಸರಿನಲ್ಲಿ ಮಾಡಿಟ್ಟುಕೊಂಡಿದ್ದಾರೆ. ಹೀಗಾಗಿ ಅವರ ಬಳಿಯಿರುವುದರಿಂದ ಮಾತ್ರ ನತಾಶಾ ಸ್ಟಾಂಕೋವಿಕ್ ಪಾಲು ಕೇಳಬಹುದಷ್ಟೇ.
Published On - 10:48 am, Sat, 20 July 24